Advertisement

ಪಂಡಿತ್‌ ಜಸ್‌ರಾಜ್‌ ಅವರಿಗೆ ಅಕ್ಷರ ನಮನ; ಎಲ್ಲರಿಗೂ ಎಟುಕಲಾರದ ಸಾಧನೆ

01:05 AM Aug 18, 2020 | mahesh |

ಪಂಡಿತ್‌ ಜಸ್‌ರಾಜ್‌ ಅನ್ನುವ ಮಹಾನ್‌ ಆಸ್ತಿ ಇವತ್ತು ನಮ್ಮನ್ನು ಆಗಲಿದೆ. ಇದು ದೇಶದ ಸಂಗೀತ ಲೋಕಕ್ಕೆ, ಎಲ್ಲಾ ಅರ್ಥದಲ್ಲೂ ತುಂಬಲಾರದ ನಷ್ಟ. ಖಡಾಖಂಡಿತವಾಗಿಯೂ ಇನ್ನೊಬ್ಬ ಜಸ್‌ರಾಜ್‌ ಹುಟ್ಟಲು ಸಾಧ್ಯವಿಲ್ಲ. ಅವರು ಮಾಡಿರುವ ಸಾಧನೆ ತುಂಬಾ ದೊಡ್ಡದು. ಸಾಮಾನ್ಯರಿಗೆ ಎಟುಕಲಾರದಂಥ ಸಾಧನೆ ಅವರದು. 8 ಸಪ್ತಕದಲ್ಲೂ ಸಲೀಸಾಗಿ ಹಾಡಬಹುದಾದಂಥ ಕಂಠಸಿರಿ ಅವರದಾಗಿತ್ತು. ಅವರಿಗೆ ಶಾಸ್ತ್ರಜ್ಞಾನದಲ್ಲಿ ಅಪಾರ ತಿಳಿವಳಿಕೆ ಇತ್ತು. ಬೇರೆ ಬೇರೆ ಪ್ರಕಾರಗಳಲ್ಲಿ, ರಾಗಗಳನ್ನು ಅದ್ಭುತವಾಗಿ ಪ್ರಸ್ತುತ ಪಡಿಸ್ತಾ ಇದ್ರು. ಅವರ ಗಾಯನದ ವಿಶೇಷತೆ ಅಂದ್ರೆ- ಬೇರೆ ಬೇರೆ ಗಮಕದಲ್ಲಿ ಹಾಡ್ತಾ ಇದ್ದದ್ದು. ಸಾಹಿತ್ಯದ ಬಗ್ಗೆ ತುಂಬಾ ಗಮನ ಕೊಡ್ತಾ ಇದ್ರು. ಶಬ್ದಗಳ ಅರ್ಥ ಜನರಿಗೆ ತಲುಪುವ ಹಾಗೆ ಹಾಡ್ತಾ ಇದ್ರು. ಸಾಹಿತ್ಯ ಮತ್ತು ಸ್ವರ ಜೋಡಣೆಗೆ ಬಹಳ ಮಹತ್ವ ಕೊಡ್ತಾ ಇದ್ರು. ಹಾಗಾಗಿಯೇ ಅವರು ಪೂರ್ತಿ 6 ದಶಕಗಳ ಕಾಲ ಗಾನ ಸಾಮ್ರಾಟ್‌ ಆಗಿ ಉಳಿಯಲು ಸಾಧ್ಯವಾಗಿತ್ತು.

Advertisement

ಜಸ್‌ರಾಜ್‌ ಅವರು ಸಂಗೀತ ಕ್ಷೇತ್ರ ಪ್ರವೇಶಿಸಿದ್ದು ತಬಲಾ ನುಡಿಸೋದರ ಮೂಲಕ. ತಬಲಾ ವಾದಕನಾಗಿ ಬಂದವರು, ನಂತರ ಗಾಯಕನಾಗಿ ಬದಲಾದದ್ದು ಸ್ವಾರಸ್ಯವೂ ಹೌದು, ಕೌತುಕವೂ ಹೌದು. ಅವರ ಜೊತೆಗೆ ಕಾಲ ಕಳೆಯುವ ಅವಕಾಶ ನನಗೆ ಸಿಕ್ಕಿತ್ತು. ಈ ಕೊನೆಯ 4-5 ವರ್ಷಗಳಲ್ಲಿ, ಪಂಚತತ್ವ ಅನ್ನೋ ಕಾನ್ಸೆಫ್ಟ್ ಮೇಲೆ ಜಸ್‌ರಾಜ್‌ರ ಮಗಳು ದುರ್ಗಾ,

ಕಾರ್ಯಕ್ರಮ ಮಾಡಿದ್ರು.ಆ ಕಾರ್ಯಕ್ರಮಗಳಲ್ಲಿ ಪಂಡಿತ್‌ ಜಸ್‌ರಾಜ್‌ ಕೂಡ ಭಾಗವಹಿಸ್ತಾ ಇದ್ರು. ತಮ್ಮ ತಂದೆ ಮಣಿರಾಮ್‌ ಮತ್ತು ದೊಡ್ಡಪ್ಪ ಮೋತಿರಾಮ್‌ ಅವರ ಪುಣ್ಯತಿಥಿಯನ್ನು, ಜಸ್‌ರಾಜ್‌ ಅವರು ಹೈದರಾಬಾದ್‌ ನಲ್ಲಿ ಪ್ರತಿ ವರ್ಷ ಆಚರಿಸ್ತಾ ಇದ್ದರು. ಆ ಕಾರ್ಯಕ್ರಮಕ್ಕೆ ನನಗೂ ಆಹ್ವಾನ ಇರ್ತಾ ಇತ್ತು. ಅಲ್ಲಿಗೆ ಹೋದಾಗೆಲ್ಲಾ ನಾನು, ಮಾರೋಬಿ ಬಿಹಾರ್‌ ರಾಗ ನುಡಿಸ್ತಾ ಇದ್ದೆ. ಅದನ್ನು ಕೇಳಿ- ಈ ರೀತಿಯ ಕೊಳಲು ವಾದನವನ್ನು ನಾನು ಕೇಳೇ ಇರಲಿಲ್ಲ ಅಂತ ಹೇಳಿ ತುಂಬಾ ಖುಷಿ ಪಡ್ತಾ ಇದ್ರು. ಪಂಡಿತ್‌ ಜಸ್‌ರಾಜ್‌ ಅವರು ಮೊದಲಿಗೆ ನನ್ನ ಕಾರ್ಯಕ್ರಮ ನೋಡಿದ್ದು ಬೆಂಗಳೂರಿನ ಚಾಮರಾಜಪೇಟೆಯ ರಾಮನವಮಿ ಉತ್ಸವದಲ್ಲಿ. ಅವತ್ತು ಅವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಬಂದಿದ್ದರು. ಕೆಲವು ಪ್ರಮುಖರಿಗೆ ಪ್ರಶಸ್ತಿ ವಿತರಣೆ ಮಾಡಿ ಜಸ್‌ರಾಜ್‌ ಬೇಗ ಹೋಗಿಬಿಡುತ್ತಾರೆ ಅಂತಾನೇ ಮೊದಲು ತಿಳಿಸಲಾಗಿತ್ತು. ಅವರ ವೇಳಾಪಟ್ಟಿ ಕೂಡ ಅವತ್ತು ಹಾಗೆಯೇ ಇತ್ತು. ಆದರೆ, ನನ್ನ ಕೊಳಲು ವಾದನ ಇದೆ ಅಂತ ಗೊತ್ತಾದಾಗ, ಆ ಹಿರಿಯರು ಮನಸ್ಸು ಬದಲಿಸಿದರು. “”ಸ್ವಲ್ಪ ಹೊತ್ತು ನಿನ್ನ ಕಛೇರಿ ಕೇಳಿ ಹೋಗ್ತೀನೆ”ಅಂದರು. ಆದರೆ ಆಗಿದ್ದೇ ಬೇರೆ. ಸ್ವಲ್ಪ ಹೊಯ್ತು ಅಂದವರು, ಕಛೇರಿ ಮುಗಿಯುವವರೆಗೂ ಇದ್ದರು. ನಂತರ ಸಭಿಕರನ್ನು ಉದ್ದೇಶಿಸಿ ನಮ್ಮ ತಂಡದ ಬಗ್ಗೆ ನಾಲ್ಕು ಒಳ್ಳೆಯ ಮಾತಾಡಿ ಹರಸಿ ಹೋದರು. ಅಂಥಾ ದೊಡ್ಡ ಮನುಷ್ಯರು, ಇವತ್ತು ಈ ಲೋಕದ ಋಣ ತೀರಿತು ಎನ್ನುತ್ತಾ ಎದ್ದು ಹೋಗಿಬಿಟ್ಟಿ¨ªಾರೆ. ಅವರ ಸ್ಥಾನ ಯಾವತ್ತಿಗೂ ಖಾಲಿಯಾಗಿಯೇ ಉಳಿದಿರುತ್ತದೆ…
ಪ್ರವೀಣ್ ಗೋಡ್ಖಿಂಡಿ

ಸ್ವರವೇ ಕಳಚಿಬಿದ್ದಂತೆ ಅನಿಸುತಿದೆ!
ಹಿರಿಯ ತಲೆಮಾರಿನ ಒಬ್ಬೊಬರೇ ಸಂಗೀತ ತಾರೆಗಳು ಕಣ್ಮರೆಯಾಗುತ್ತಿರುವುದು ಗಾನಲೋಕಕ್ಕೆ ತುಂಬಲಾರದ ನಷ್ಟ. ಗಂಗೂಬಾಯಿ ಹಾನಗಲ್‌, ಬಸವರಾಜ ರಾಜಗುರು, ಪಂ. ಭೀಮಸೇನ ಜೋಷಿ, ಕಿಶೋರಿ ಅಮೋನ್ಕರ್‌ ಈಗ ಪಂ. ಜಸರಾಜ್‌… ಇವರೆಲ್ಲರ ಅಗಲಿಕೆ ಒಂದೊಂದೇ ಸ್ವರ ಕಳಚಿಬಿದ್ದಂತೆ ನನಗೆ ಭಾಸವಾಗುತ್ತಿದೆ. ಮನಸ್ಸು ಭಾರವಾಗುತ್ತಿದೆ. ಇವರನ್ನೆಲ್ಲ ಸಂಗೀತಗಾರರು ಅಂತ ಕರೆಯಲು ಮನಸ್ಸು ಬರುವುದಿಲ್ಲ. ಏಕೆಂದರೆ ನಮ್ಮ ಸುತ್ತಮುತ್ತ ಬಹಳ ಸಂಗೀತಗಾರರು ಇದ್ದಾರೆ. ಇವರೆಲ್ಲ ಸ್ವರಸಾಧಕರು. ದೇವರ ವರದಿಂದ ಭೂಮಿಗೆ ಬಂದ ಗಂಧರ್ವರು. ದೇವರಿಗೆ ತೃಪ್ತಿಯಾಗುವ ಹಾಗೆ ಹಾಡುವ ಸಾಮರ್ಥ್ಯವಿದ್ದ ಶ್ರೇಷ್ಠ ಸಾಧಕರು. ಒಂದೊಂದು ಘರಾನಾಕ್ಕೆ ಜೀವಕಳೆ ತುಂಬಿದವರು. ಹಾಗೆಯೇ ಪಂ. ಜಸರಾಜ್‌ ಕೂಡ ಮೇವಾತಿ ಘರಾನಾದ ಮೂಲಕ ಅಂಥ ಅಪ್ರತಿಮ ಸಾಧನೆ ಮಾಡಿದ್ದಾರೆ. ಪಾರಂಪರಿಕ ಸಂಗೀತವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದ ಪ್ರಮುಖರಲ್ಲಿ ಜಸರಾಜ್‌ ಕೂಡ ಒಬ್ಬರು. ಭಾರತೀಯ ಸಂಗೀತವನ್ನು ವಿಶ್ವದ ತುದಿಗೆ ಮುಟ್ಟಿಸುವುದು ಅಷ್ಟು ಸುಲಭದ ಮಾತಲ್ಲ. ಇಂದು ಜಗತ್ತಿನ ಪ್ರಮುಖ ಭಾಗಗಳಲ್ಲಿ ಜಸರಾಜ್‌ರ ಸಂಗೀತ ಶಾಲೆಗಳನ್ನು ಕಾಣಬಹುದು. ಜಗತ್ತಿನೆಲ್ಲೆಡೆ ಇವರ ಹೆಸರಿನಲ್ಲಿ ಶಿಷ್ಯರು ಶಾಲೆ ಸ್ಥಾಪಿಸಿ, ಸ್ವರಧಾರೆ ಎರೆಯುತ್ತಿದ್ದಾರೆ. ಶಿಷ್ಯರಿಗೆ ಭದ್ರಬದುಕನ್ನು ಕಟ್ಟಿಕೊಡುವ ಸಾಮರ್ಥ್ಯವೂ ಜಸರಾಜ್‌ ಅವರಲ್ಲಿತ್ತು.

ಸಂಗೀತಾ ಕಟ್ಟಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next