ವಾಷಿಂಗ್ಟನ್: ಕೋವಿಡ್ ನೂತನ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಮೂರನೇ ಬಾರಿ ಲಾಕ್ ಡೌನ್ ಗೆ ಮುಂದಾಗಿರುವ ಬ್ರಿಟನ್ ನಿರ್ಧಾರದಿಂದಾಗಿ ಸುಮಾರು 4 ಸಾವಿರ ಸಣ್ಣ ಹಣಕಾಸು ಸಂಸ್ಥೆಗಳು ಅಪಾಯದ ಸ್ಥಿತಿಯನ್ನು ತಲುಪುವ ಸಾಧ್ಯತೆ ಇದೆ ಎಂದು ಬ್ರಿಟನ್ ಮಾರುಕಟ್ಟೆ ವಾಚ್ ಡಾಗ್ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಕೋವಿಡ್ 19 ನೂತನ ರೂಪಾಂತರಿತ ಸೋಂಕಿನ ಪರಿಣಾಮ ಹಣಕಾಸು ಸಂಸ್ಥೆಯ ಲಿಕ್ವಿಡಿಟಿ ಖಾಲಿಯಾಗಿರುವುದಾಗಿ ಆರ್ಥಿಕ ನಿರ್ವಹಣಾ ಸಂಸ್ಥೆ ಗುರುವಾರ(ಜನವರಿ 07, 2021) ತಿಳಿಸಿದೆ. ಲಸಿಕೆ ನೀಡುವಿಕೆ ಹಾಗೂ ನಿರ್ಬಂಧ ವಿಧಿಸುವುದನ್ನು ಮುಂದುವರಿಸುವ ಮುನ್ನವೇ ಜೂನ್ ಮತ್ತು ಆಗಸ್ಟ್ ತಿಂಗಳಿನಲ್ಲಿ 23 ಸಾವಿರ ಉದ್ಯಮಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು ಎಂದು ತಿಳಿಸಿದೆ.
ಸಂಸ್ಥೆಗಳ ಆರ್ಥಿಕ ವೈಫಲ್ಯವನ್ನು ತಡೆಗಟ್ಟುವುದು ನಮ್ಮ ಕೆಲಸವಲ್ಲ ಎಂದಿರುವ ಎಫ್ ಸಿಎಯ ಕಾರ್ಯಕಾರಿ ನಿರ್ದೇಶಕ ಶೆಲ್ಡನ್ ಮಿಲ್ಸ್ ನೀಡಿರುವ ಪ್ರಕಟಣೆಯಲ್ಲಿ, ಆರ್ಥಿಕ ಸಂಸ್ಥೆಗಳ ಆರಂಭಿಕ ಸಮಸ್ಯೆಯ ಗೋಚರವಾಗುತ್ತಿರುವ ನಿಟ್ಟಿನಲ್ಲಿ ಸರ್ಕಾರ ಶೀಘ್ರವಾಗಿ ಮಧ್ಯಪ್ರವೇಶಿಸುವ ಮೂಲಕ ಸಮಸ್ಯೆಯನ್ನು ನಿಭಾಯಿಸುವ ಹಾಗೂ ಗ್ರಾಹಕರಿಗೆ ರಕ್ಷಣೆಯನ್ನು ಒದಗಿಸಬೇಕಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ತೆಲಂಗಾಣ : ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಹಿಮಾ ಕೋಹ್ಲಿ ಪ್ರಮಾಣ ವಚನ ಸ್ವೀಕಾರ
ಎಫ್ ಸಿಎ ಸಮೀಕ್ಷೆಯಲ್ಲಿ ದೇಶದ 1,500 ಬೃಹತ್ ಆರ್ಥಿಕ ಸಂಸ್ಥೆಗಳು ಒಳಗೊಂಡಿಲ್ಲ ಎಂದು ಹೇಳಿದೆ. ಈ ಸಂಸ್ಥೆಗಳು ಬ್ಯಾಂಕ್ ಆಫ್ ಇಂಗ್ಲೆಂಡ್ ನ ಪ್ರುಡೆನ್ಶಿಯಲ್ ರೆಗ್ಯುಲೇಶನ್ ಅಥಾರಿಟಿ ನಿಯಂತ್ರಣಕ್ಕೊಳಪಟ್ಟಿರುವುದಾಗಿ ತಿಳಿಸಿದೆ.
ಸಣ್ಣ ಆರ್ಥಿಕ ಸಂಸ್ಥೆಗಳು ದೊಡ್ಡ ಪ್ರಮಾಣದ ನಷ್ಟವನ್ನು ಅನುಭವಿಸಿರುವುದಾಗಿ ಎಫ್ ಸಿಎ ತಿಳಿಸಿದ್ದು, ಅರ್ಧದಷ್ಟು ಸಣ್ಣ ಆರ್ಥಿಕ ಸಂಸ್ಥೆಗಳು ಸಿಬ್ಬಂದಿಗಳನ್ನು ಉಳಿಸಿಕೊಂಡಿದ್ದಾರೆ. ಮತ್ತು ಬಹುತೇಕರು ಸರ್ಕಾರಿ ಪ್ರಾಯೋಜಿತ ಸಾಲವನ್ನು ಪಡೆದುಕೊಂಡಿರುವುದಾಗಿ ವಿವರಿಸಿದೆ.