ಬ್ಯಾಂಕಾಕ್ : ಆಗ್ನೇಯ ಏಷ್ಯಾದ ಪ್ರವಾಸೋದ್ಯಮ ಕೇಂದ್ರವಾಗಿರುವ ಥೈಲ್ಯಾಂಡ್ ನಲ್ಲಿ ಪ್ರೇಮಿಗಳ ದಿನದ ಲೈಂಗಿಕತೆಯ ಮೊದಲು ಕೋವಿಡ್‌ಗಾಗಿ ಪರೀಕ್ಷಿಸಲು ಪ್ರೇಮಿಗಳನ್ನು ಸರಕಾರ ಒತ್ತಾಯಿಸಿದೆ.
ಥೈಲ್ಯಾಂಡ್‌ನ ಆರೋಗ್ಯ ಅಧಿಕಾರಿಗಳು ಪ್ರೇಮಿಗಳಿಗೆ ಕೋವಿಡ್ ಪರೀಕ್ಷೆಗೆ ಒಳಗಾಗಲು, ಮಾಸ್ಕ್ ಗಳನ್ನು ಧರಿಸಲು ಮತ್ತು ಪ್ರೇಮಿಗಳ ದಿನದ ಮೊದಲು ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಲು ಸಲಹೆ ನೀಡಿದ್ದಾರೆ.
ನಿಕಟ ಸಂಪರ್ಕದ ಉಸಿರಾಟ ಮತ್ತು ಗಾಢ ಚುಂಬನದಿಂದ ಲಾಲಾರಸ ವಿನಿಮಯ ಮಾಡಿಕೊಳ್ಳುವ ಮೂಲಕ ಕೋವಿಡ್ -19 ಹರಡುವ ಸಾಧ್ಯತೆಗಳಿವೆ ಎಂದು ಇಲಾಖೆ ಹೇಳಿದೆ.
ಥೈಲ್ಯಾಂಡ್‌ನ ರೋಗ ನಿಯಂತ್ರಣ ವಿಭಾಗದಿಂದ ಶಿಫಾರಸುಗಳು ಬಂದಿದ್ದು, ಇದು ಪ್ರೇಮಿಗಳು ರೋಮ್ಯಾಂಟಿಕ್ ದಿನದ ಮೊದಲು ಕ್ಷಿಪ್ರ ಪ್ರತಿಜನಕ ಕೋವಿಡ್ -19 ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದೆ.
ಥೈಲ್ಯಾಂಡ್ ನಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆಗಳು ತಿಂಗಳ ಆರಂಭದಲ್ಲಿ ಸುಮಾರು 8,000 ರಿಂದ ಕಳೆದ ಹದಿನೈದು ದಿನಗಳಲ್ಲಿ ದ್ವಿಗುಣಕ್ಕೆ ಏರಿದೆ. ಆರೋಗ್ಯ ಅಧಿಕಾರಿಗಳು ಈ ಫೆಬ್ರವರಿ 14 ರಂದು ಸೋಂಕು ಉಲ್ಬಣಗೊಳ್ಳಬಹುದು ಎಂದು ಕಳವಳ ವ್ಯಕ್ತಪಡಿಸಿದೆ.