Advertisement

ಪಾಂಡವರಕಲ್ಲು: ಬ್ರಹ್ಮಬೈದರ್ಕಳ ಗರೋಡಿಯೊಳಗೆ ಗಾಜಿನ ಚೂರು ಹಾಕಿ ಕಿಡಿಗೇಡಿಗಳಿಂದ ದುಷ್ಕೃತ್ಯ

09:22 AM May 15, 2021 | Team Udayavani |

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾ.ಪಂ. ವ್ಯಾಪ್ತಿಯ ಪಾಂಡವರಕಲ್ಲು ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಅಂಗಣಕ್ಕೆ ದುಷ್ಕರ್ಮಿಗಳು ಗಾಜಿನ ಬಾಟಲ್ ಒಡೆದು, ಗಾಜಿನ ಚೂರುಗಳನ್ನು ಹಾಕಿ ದುಷ್ಕೃತ್ಯ ರೆದಿರುವ ಘಟನೆ ಮೇ 14 ರಂದು ನಡೆದಿದೆ.

Advertisement

ಘಟನೆ  ಮೇ 14 ರಂದು ರಾತ್ರಿ ಸಾರ್ವಜನಿಕರ  ಗಮನಕ್ಕೆ ಬಂದಿದ್ದು,ಕಿಡಿಗೇಡಿಗಳ ಈ ದುಷ್ಕೃತ್ಯವನ್ನು ಖಂಡಿಸಿದ್ದಾರೆ. ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಪಾಂಡವರಕಲ್ಲು ಗರಡಿ ಕ್ಷೇತ್ರ ಪುರಾತನ ಇತಿಹಾಸವುಳ್ಳ ಕ್ಷೇತ್ರವಾಗಿದೆ. ಇದು ಹಿಂದೂ ಧರ್ಮಿಯರ ಮಾತ್ರವಲ್ಲದೆ ಅನ್ಯಧರ್ಮಿಯರ ನಂಬಿಕೆಯ ಕ್ಷೇತ್ರವಾಗಿದೆ. ಇಲ್ಲಿನ ಕಾರಣಿಕ ಕೇವಲ ಬಾಯಿ ಮಾತಿನಲ್ಲಿ ಮಾತ್ರವಲ್ಲದೆ ಇದನ್ನು ಕಣ್ಣಾರೆ ಕಂಡ ಅನೇಕ ಸಾಕ್ಷಿಗಳಿವೆ.

ಇಂತಹ ಕಾರಣಿಕದ  ಕ್ಷೇತ್ರದೊಳಗೆ ಶ್ರೀ ಕೊಡಮಣಿತ್ತಾಯ , ಶ್ರೀ ಪಿಲಿಚಾಮುಂಡಿ ಮತ್ತು ಬ್ರಹ್ಮಬೈದೆರ್ಕಳ ದೈವಸ್ಥಾನವಿದ್ದು ಅದರ ಸುತ್ತಲೂ ಕಿಡಿಗೇಡಿಗಳು ಸುಮಾರು 20ಕ್ಕೂಅಧಿಕ ಗಾಜಿನ ಬಾಟಲಿಗಳನ್ನು ಚೂರು‍ಚೂರಾಗುವಂತೆ ಒಡೆದು ಹಾಕಿ ಗರಡಿಯೊಳಗೆ ಯಾರಿಗೂ ನಡೆದಾಡದಂತೆ ದುಷ್ಕೃತ್ಯ ನಡೆಸಿದ್ದಾರೆ.

ಇದನ್ನೂ ಓದಿ:ಅಹಂನಲ್ಲಿದ್ದ ಪ್ರಧಾನಿಗೆ ಕೋವಿಡ್ 2ನೇ ಅಲೆ ತಕ್ಕ ಪಾಠ ಕಲಿಸಿದೆ: ಡಾ. ಪುಷ್ಪಾ ಅಮರ್‌ನಾಥ್  

Advertisement

ಶನಿವಾರ (ಮೇ 15) ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಲಾಗುತ್ತಿದ್ದು, ದುಷ್ಕೃತ್ಯ ಮೆರೆದ ಕಿಡಿಗೇಡಿಗಳನ್ನು ಕಾರಣಿಕ ದೈವಗಳಾದ ಕೊಡಮಣಿತ್ತಾಯ ಬ್ರಹ್ಮಬೈದೆರ್ಲು ಶೀಘ್ರವಾಗಿ ಸಾರ್ವಜನಿಕವಾಗಿ ತೋರಿಸಿ ಕೊಡಬೇಕು ಎಂದು ಸಮಸ್ತ ಹಿಂದು ಸಮಾಜದ ಪರವಾಗಿ ಸಮಿತಿ ಮೇ 16 ರಂದು ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದು ಸಮಿತಿ ತಿಳಿಸಿದೆ. ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಮತ್ತಿತರ ಹಿಂದೂ ಸಂಘಟನೆಗಳು ಖಂಡಿಸಿದೆ.

ಇದನ್ನೂ ಓದಿ:  ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ ತಾರಕಕ್ಕೆ; ಗಾಜಾದಲ್ಲಿ ಸಾವಿನ ಸಂಖ್ಯೆ 132ಕ್ಕೆ ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next