ಬಂಟ್ವಾಳ : ಅಮಾrಡಿ ಗ್ರಾ.ಪಂ. ಈ ಹಿಂದೆ ರಾಜ್ಯದಲ್ಲಿ ಪ್ರಥಮ ಬಾರಿಗೆ 94ಸಿ ಹಕ್ಕುಪತ್ರ ವಿತರಿಸಿದ ಹೆಗ್ಗಳಿಕೆ ಹೊಂದಿದೆ. ಇದೀಗ ಜನಪರ ಕಾಳಜಿಯಿಂದ ಅವಕಾಶ ವಂಚಿತರಿಗೆ ಮತ್ತೆ 94ಸಿಸಿ ಹಕ್ಕುಪತ್ರ ಮತ್ತಿತರ ಸೌಲಭ್ಯ ನೀಡುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿ ಕೊಡುವಲ್ಲಿ ಪಂ. ಜವಾಬ್ದಾರಿ ಮಹತ್ತರ ಎಂದು ಬಂಟ್ವಾಳ ಶಾಸಕ ರಾಜೇಶ ನಾೖಕ್ ಉಳಿಪಾಡಿಗುತ್ತು ತಿಳಿಸಿದರು.
ಅವರು ಸೆ. 28ರಂದು ಅಮ್ಟಾಡಿ ಗ್ರಾ.ಪಂ. ಅರ್ಹ ಫಲಾನುಭವಿಗಳಿಗೆ 94ಸಿಸಿ ಹಕ್ಕುಪತ್ರ ಮತ್ತಿತರ ಸೌಲಭ್ಯ ವಿತರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಹರೀಶ ಶೆಟ್ಟಿ ಪಡು ಮಾತನಾಡಿ, ಅಮ್ಟಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳು, ಸೇವಾ ಕಾರ್ಯಗಳ ಬಗ್ಗೆ ವಿವರಿಸಿದರು.
ಸ್ಥಳೀಯ ಜಿ.ಪಂ. ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ತಾ.ಪಂ. ಸದಸ್ಯೆ ಮಲ್ಲಿಕಾ ವಿ. ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ ಮತ್ತಿತರರು ಮಾತನಾಡಿದರು. ಕಾರ್ಯದರ್ಶಿ ಲಕ್ಷ್ಮೀನಾರಾಯಣ ಮತ್ತು ಲೆಕ್ಕ ಸಹಾಯಕ ಭಾಸ್ಕರ ಫಲಾನುಭವಿಗಳನ್ನು ಪರಿಚಯಿಸಿದರು. ಈ ಸಂದರ್ಭ ಶಾಸಕರನ್ನು ಸಮ್ಮಾನಿಸಲಾಯಿತು. ಗ್ರಾಮಕರಣಿಕರಾದ ಎನ್.ಸಿ. ಶಶಿಕುಮಾರ್, ಅಮೃತಾಂಶು, ಸಹಾಯಕರಾದ ಲೋಕನಾಥ್, ಸಂದೀಪ್ ಕುರಿಯಾಳ ಮತ್ತಿತರರಿದ್ದರು. ಕಂದಾಯ ನಿರೀಕ್ಷಕ ನವೀನ್ ಕುಮಾರ್ ಬೆಂಜನಪದವು ಸ್ವಾಗತಿಸಿ, ಪ್ರಸ್ತಾವಿಸಿದರು. ಪಿಡಿಒ ಬಿ.ಮಹಮ್ಮದ್ ವಂದಿಸಿ, ನಿರೂಪಿಸಿದರು.
ಸೌಲಭ್ಯ ವಿತರಣೆ
ಅಮ್ಟಾಡಿ ಮತ್ತು ಕುರಿಯಾಳ ಗ್ರಾಮಕ್ಕೆ ಸಂಬಂಧಿಸಿದಂತೆ 30 ಮಂದಿ ಫಲಾನುಭವಿಗಳಿಗೆ 94 ಸಿಸಿ ಹಕ್ಕುಪತ್ರ, 44 ಮಂದಿ ಅಂಗವಿಕಲರಿಗೆ ವೈದ್ಯಕೀಯ ವೆಚ್ಚ, 35 ಮಂದಿ ಪ.ಜಾ. ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, 60 ಮಂದಿಗೆ ಸಂಧ್ಯಾ ಸುರಕ್ಷಾ ಆದೇಶಪತ್ರ, ರಾಷ್ಟ್ರೀಯ ಕುಟುಂಬ ಸಹಾಯಧನ-4, ಅಂತ್ಯಸಂಸ್ಕಾರ-4, ಪ್ರಾಕೃತಿಕ ವಿಕೋಪ ಯೋಜನೆಯಡಿ 17 ಮಂದಿಗೆ ಚೆಕ್ ವಿತರಿಸಲಾಯಿತು.