Advertisement
ಕಟ್‌ಬೆಲ್ತೂರು ಗ್ರಾಮ ಪಂಚಾಯತ್ ಅಧೀನದ ಕೆರೆ ಇದಾಗಿದ್ದು, ಸುಮಾರು 30 ವರ್ಷಗಳಿಂದಲೂ ಈ ಕೆರೆಯ ಹೂಳೆತ್ತುವ ಕಾರ್ಯ ನಡೆದಿಲ್ಲ. ಇನ್ನು ಕೆರೆಯ ಪಕ್ಕದಲ್ಲೇ ರಸ್ತೆಯಿದ್ದರೂ, ಯಾವುದೇ ರೀತಿಯ ತಡೆಗೋಡೆಯಿಲ್ಲ. ಇದು ಹಿಂದೆ ತುಂಬಾ ಆಳ ವಾಗಿದ್ದು, ಈಗ ಹೂಳಿನಿಂದ ತುಂಬಿಕೊಂಡಿದೆ. ಹಿಂದೆ ಮುಂಗಾರು ಹಂಗಾಮಿನಲ್ಲಿ ಅಷ್ಟೇನು ಪ್ರಯೋಜನ ವಾಗಿರದಿದ್ದರೂ, ಹಿಂಗಾರು ಹಂಗಾಮಿನಲ್ಲಿ ಈ ಭಾಗದ ಕೃಷಿಕರಿಗೆ ಪ್ರಯೋಜನವಾಗುತ್ತಿತ್ತು.
ಬೇಸಗೆ ಕಾಲದಲ್ಲಿ ಪ್ರತಿ ವರ್ಷ ನೀರಿನ ಸಮಸ್ಯೆ ಎದುರಿಸುತ್ತಿರುವ ಕಟ್ ಬೆಲೂ¤ರು ಗ್ರಾಮ ಪಂಚಾಯತ್ ಕಳೆದ 2-3 ವರ್ಷಗಳಿಂದ ತಮ್ಮ ಪಂಚಾಯತ್ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಮುಂದಾಗಿದೆ. ಕಳೆದೆರಡು ವರ್ಷಗಳಿಂದ ಭದ್ರಮಹಾಂಕಾಳಿ ದೇವಸ್ಥಾನ ಸಮೀಪದ ಕೆರೆ, ದಾಸನ ಕೆರೆ, ದೇವಲ್ಕುಂದದ ಸಿಹಿ ನೀರಿನ ಕೆರೆ, ಎರಡು ಮದಗ, ಪಂಚಾಯತ್ ಕಟ್ಟಡ ಸಮೀಪದ ಕೆರೆ ಸೇರಿದಂತೆ 8 ಕೆರೆಗಳನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಪುನಶ್ಚೇತನಗೊಳಿಸುವಲ್ಲಿ ಯಶಸ್ವಿಯಾಗಿದೆ. ಇಂತಹ ಜಲ ಸ್ವಾವಲಂಬನೆಯಿಂದಾಗಿ ಪ್ರತಿ ವರ್ಷ ಟ್ಯಾಂಕರ್ ನೀರಿಗೆ ಮೊರೆ ಹೋಗುತ್ತಿದ್ದ ಪಂಚಾಯತ್ ಕಳೆದ ಬೇಸಿಗೆಯಲ್ಲಿ ಅಷ್ಟೊಂದು ಟ್ಯಾಂಕರ್ ನೀರಿನ ಅಗತ್ಯವೇ ಬಿದ್ದಿರಲಿಲ್ಲ.
ಬೆಳ್ಮಕ್ಕಿ ಕೆರೆಯನ್ನು ಹೂಳೆತ್ತಿ, ಅದರ ಎರಡು ಬದುಗಳು ಕುಸಿಯದಂತೆ ಕಲ್ಲುಗಳನ್ನು ಕಟ್ಟಿ, ರಸ್ತೆ ಬದಿಯೇ ಇರುವುದರಿಂದ ತಡೆಗೋಡೆಯನ್ನು ನಿರ್ಮಿಸಿದರೆ ತುಂಬಾ ಪ್ರಯೋಜನವಾಗಲಿದೆ ಎನ್ನುವುದು ಊರವರ ಬೇಡಿಕೆಯಾಗಿದೆ. ಪುನಶ್ಚೇತನಕ್ಕೆ ಯೋಜನೆ
ನಮ್ಮ ಪಂಚಾಯತ್ ವ್ಯಾಪ್ತಿಯ ಬೆಳ್ಮಕ್ಕಿ ಕೆರೆಯನ್ನು ಪುನಶ್ಚೇತನಗೊಳಿಸಲು ಹಿಂದಿನ ಸಾಲಿನಲ್ಲಿಯೇ ಪಂಚಾಯತ್‌ನಿಂದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಹೂಳೆತ್ತುವ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆ ಇರುವುದರಿಂದ ಸರ್ವೇ ಮಾಡಿಸಿ, ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.
– ಅಶ್ವಿನಿ, ಪಿಡಿಒ, ಕಟ್‌ಬೆಲ್ತೂರು ಗ್ರಾ.ಪಂ.