Advertisement

Panchamasali ಉಭಯ ಸ್ವಾಮೀಜಿಗಳ ಮುನಿಸು ಮುಂದುವರಿಕೆ

07:30 PM Jul 28, 2024 | Team Udayavani |

ಗದಗ: ಪಂಚಮಸಾಲಿ ಸಮಾಜದ ಉಭಯ ಸ್ವಾಮಿಜಿಗಳ ಮುನಿಸು ಮುಂದುವರೆದಿದೆ ಎಂಬುದಕ್ಕೆ, ಇಂದು ನಗರದಲ್ಲಿ ನಡೆದ ಪಂಚಮಸಾಲಿ ಸಮಾಜದ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಹೌದು ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಪಂಚಮಸಾಲಿ ಸಮಾಜದ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭ ನಡೆಯಿತು.

Advertisement

ಕಾರ್ಯಕ್ರಮದ ವೇದಿಕೆಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀ ಹಾಗೂ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಭಾಗವಹಿಸಿ, ಅಕ್ಕ ಪಕ್ಕ ಕುಳಿತು ವೇದಿಕೆ ಹಂಚಿಕೊಂಡರು. ನಾನೊಂದು ತೀರ, ನಿನೊಂದು ತೀರ ಅನ್ನುವ ಹಾಗೆ ಎರಡು ಗಂಟೆಗಳ ಕಾಲ ಕೂತರು ಒಬ್ಬರಿಗೊಬ್ಬರು ಮಾತನಾಡಲಿಲ್ಲ. ಕಾರ್ಯಕ್ರಮದಲ್ಲಿ ಇಬ್ಬರು ಅಕ್ಕ ಪಕ್ಕದ ಆಸನದಲ್ಲೇ ಕೂತಿದ್ದರೂ ಮುಖ ನೋಡಲಿಲ್ಲ, ಔಪಚಾರಿಕವಾಗಿಯೂ ಮಾತನಾಡಲಿಲ್ಲ.

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ 2019 ರಲ್ಲಿ ಉಭಯ ಶ್ರೀ ಪಾದಯಾತ್ರೆ ಮಾಡಿದ್ದರು. ಪಾದಯಾತ್ರೆ ನಂತರ ಪ್ರತ್ಯೇಕವಾಗಿ ಹೋರಾಟ ಮಾಡಿಕೊಂಡು ಬಂದರು. ಆಗಿಂದ ಇಲ್ಲಿಯವರೆಗೆ ಪಂಚಮಸಾಲಿ ಸಮಾಜದ ಇಬ್ಬರು ಸ್ವಾಮಿಗಳ ಮಧ್ಯೆ ಮುನಿಸು ಮತ್ತೆ ಮುಂದುವರೆದಿತ್ತು. ಇವತ್ತು ಸಚಿವ ಎಚ್.ಕೆ ಪಾಟೀಲ್, ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸಿ.ಸಿ ಪಾಟೀಲ್ ಹಾಗೂ ಹಲವು ಶಾಸಕರು, ಮುಖಂಡರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮುನಿಸು ಜೋರಾಗಿತ್ತು. ಇವನ್ನೆಲ್ಲಾ ನೋಡಿದ್ರೆ ಶ್ರೀಗಳ ಮುನಿಸು ಇಬ್ಬರ ಮನದಲ್ಲಿದೆ ಎಂಬುದು ಇವತ್ತಿನ ಗದಗ ಕಾರ್ಯಕ್ರಮದಲ್ಲಿ ಮತ್ತಷ್ಟು ಸಾಬೀತಾದಂತಾಯಿತು. ಕೂಡಲಸಂಗಮ ಪೀಠದ ಶ್ರೀಗಳು ಈ ಬಗ್ಗೆ ಅಲ್ಲಗಳೆದು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next