Advertisement

ಪಂಚರಾಜ್ಯಗಳ ಚುನಾವಣೆ ಫ‌ಲಿತಾಂಶ ಜನಪರ ಯೋಜನೆಗೆ ಸಂದ ಜಯ: ಬಿಜೆಪಿ

02:38 PM Mar 17, 2017 | Team Udayavani |

ಬೆಳ್ತಂಗಡಿ : ಪಂಚ ರಾಜ್ಯಗಳ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಿರುವುದು ಕೇಂದ್ರದ ಬಿಜೆಪಿ ಸರಕಾರದ ಕ್ರಾಂತಿಕಾರಿ ಯೋಜನೆಗಳು ಮತ್ತು ಜನಪರ ಯೋಜನೆಗಳಿಗೆ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆಗೆ ಸಂದ ಜಯವಾಗಿದೆ. ಕಾಂಗ್ರೆಸ್‌ ಹಾಗೂ ಇತರೆಲ್ಲ ಪಕ್ಷಗಳ ಅಪಪ್ರಚಾರದ ಮಧ್ಯೆಯೂ ಪ್ರಧಾನ ಮಂತ್ರಿಯವರ ಸಬ್‌ ಕೆ ಸಾಥ್‌ – ಸಬ್‌ ಕೆ ವಿಕಾಸ್‌ ಘೋಷಣೆಯಡಿ ಎಲ್ಲ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ.

Advertisement

ವಿಶೇಷವಾಗಿ ದಲಿತರು, ಹಿಂದುಳಿದ  ವರ್ಗದವರು, ಅಲ್ಪಸಂಖ್ಯಾಕರು, ಬಿಜೆಪಿಯನ್ನು ಬೆಂಬಲಿಸಿದ್ದು, ಕಾಂಗ್ರೆಸ್‌ ಹಾಗೂ ಇತರೆಲ್ಲ ಪಕ್ಷಗಳ ನಿಜಬಣ್ಣ ಬಯಲಾಗಿದೆ. ಕಾಂಗ್ರೆಸ್‌ ಮುಕ್ತ ಭಾರತದ ಗುರಿಯೆಡೆಗೆ, ಇಡೀ ರಾಷ್ಟ್ರದ ಜನತೆ ಜಾಗೃತಿಯಾಗಿರುವುದಕ್ಕೆ ಈ ಫಲಿತಾಂಶ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ  ರಂಜನ್‌ ಜಿ. ಗೌಡ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಮ್‌ ಬಿ.ಎಸ್‌., ಪ್ರಭಾಕರ ಶೆಟ್ಟಿ ಉಪ್ಪಡ್ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಶಾರದಾ ರೈ, ಜಿಲ್ಲಾ ಕಾರ್ಯದರ್ಶಿ ಕೊರಗಪ್ಪ ನಾಯ್ಕ, ತಾ. ಪಂ. ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ಸುಧೀರ್‌ ಆರ್‌. ಸುವರ್ಣ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next