Advertisement
ಫಲಿತಾಂಶ ಹಿಂಪಡೆಯಲು ಕಾರಣವೇನು?:ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಕಾಲೇಜಿಗೆ ಸಂಬಂಧಿಸಿದಂತೆ ಅ. 9ರಂದು ಹೆಚ್ಚುವರಿಯಾಗಿ 100 ಸೀಟು ಸೇರ್ಪಡೆ ಮಾಡಿ ವೈದ್ಯಕೀಯ ಶಿಕ್ಷಣ ಇಲಾಖೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಿತ್ತು. ಈ ಸಂದರ್ಭದಲ್ಲಿ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಪ್ರವೇಶ ಪಡೆದಿದ್ದವರಿಗೂ ಈ ಕಾಲೇಜಿಗೆ ಸಂಬಂಧಿಸಿದಂತೆ ಆಪ್ಷನ್ ದಾಖಲಿಸಲು ಅವಕಾಶ ನೀಡಲಾಯಿತು. ಆ ಬಳಿಕ ಕೆಂಪೇಗೌಡ ವೈದ್ಯಕೀಯ ಕಾಲೇಜು ಮತ್ತು ಮಾಪ್ಅಪ್ ಸುತ್ತಿನ ವೈದ್ಯಕೀಯ ಸೀಟು ಹಂಚಿಕೆಯನ್ನು ಏಕಕಾಲದಲ್ಲಿ ಮಾಡಿದ್ದರಿಂದ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿ, ಸೀಟು ಹಂಚಿಕೆಯಲ್ಲಿ ಲೋಪಗಳು ಕಂಡು ಬಂದಿತ್ತು. ಅದನ್ನು ಸರಿ ಮಾಡಿ ಶುಕ್ರವಾರ ಪ್ರಕಟಿಸಲಾಗುವುದು. ಶುಕ್ರವಾರ ಸಂಜೆ 6 ಗಂಟೆ ಒಳಗೆ ಆಕ್ಷೇಪಣೆಗಳು ಇದ್ದಲ್ಲಿ ತಿಳಿಸಬಹುದು ಎಂದು ಅವರು ವಿವರಿಸಿದರು.