Advertisement

ತಣ್ಣೀರುಬಾವಿ : ಅಪಾಯಕ್ಕೆ ಸಿಲುಕಿದ್ದ ಐವರು ವಿದ್ಯಾರ್ಥಿಗಳನ್ನು ರಕ್ಷಿಸಿದ ಸರ್ಫರ್ ಗಳು

01:58 AM Apr 25, 2022 | Team Udayavani |

ಪಣಂಬೂರು : ಮೂಡುಬಿದಿರೆಯ ಕಾಲೇಜೊಂದರ ಐವರು ವಿದ್ಯಾರ್ಥಿಗಳು ತಣ್ಣೀರುಬಾವಿ ಬೀಚ್‌ನಲ್ಲಿ ರವಿವಾರ ಅಪಾಯಕ್ಕೆ ಸಿಲುಕಿದ್ದು, ಸಮೀಪದಲ್ಲೇ ಸರ್ಫಿಂಗ್‌ ತರಬೇತಿ ನೀಡುತ್ತಿದ್ದ ತೇಜಸ್‌ ನಾಯ್ಕ ಮತ್ತು ಜತೆಗಾರರು ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. ಸಂಭಾವ್ಯ ಭಾರೀ ಅನಾಹುತವೊಂದು ತಪ್ಪಿದೆ.

Advertisement

ರವಿವಾರ ಬೆಳಗ್ಗೆ 8 ಗಂಟೆ ವೇಳೆಗೆ ವಿದ್ಯಾರ್ಥಿಗಳು ಫಾತಿಮಾ ಚರ್ಚ್‌ ಸಮೀಪ ಕಡಲಲ್ಲಿ ಈಜುತ್ತಿದ್ದರು. ಅಲೆಗಳ ಅಬ್ಬರ ಜೋರಾಗಿದ್ದ ಕಾರಣ ದಡದತ್ತ ಈಜಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಗೆ ತಲುಪಿದರು. ಆಗ ಸ್ಥಳದಲ್ಲಿದ್ದ ರಾಷ್ಟ್ರೀಯ ಈಜುಪಟುಗಳಾದ ಸಂಕೇತ್‌ ಬೆಂಗ್ರೆ, ಶಿಲ್ಪಾ ಬೆಂಗ್ರೆ ಧಾವಿಸಿ ಬಂದು ಇಬ್ಬರನ್ನು ರಕ್ಷಿಸಿದರು. ಇತರ ಮೂವರು ಅಪಾಯದಲ್ಲಿದ್ದು ರಕ್ಷಣೆಗೆ ಕೂಗಿಕೊಂಡದ್ದನ್ನು ಗಮನಿಸಿದ ತೇಜಸ್‌ ಮತ್ತು ಇತರ ಸರ್ಫ್‌ ತರಬೇತುದಾರರು ಸ್ಥಳಕ್ಕೆ ಧಾವಿಸಿ ಅವರನ್ನು ಸರ್ಫ್‌ ಬೋರ್ಡ್‌ ಮೂಲಕ ದಡಕ್ಕೆ ಕರೆತಂದರು ಹಾಗೂ ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿ ಕಳಿಸಿಕೊಟ್ಟರು.

ತೇಜಸ್‌ ಜೀವರಕ್ಷಣೆಯ ತರಬೇತಿ ಪಡೆದವರಾಗಿದ್ದಾರೆ. ಐವರ ಜೀವ ಉಳಿಸಿದ ಈಜುಪಟುಗಳ ಕಾರ್ಯಕ್ಕೆ ಭಾರೀ ಶ್ಲಾಘನೆಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next