Advertisement

Panaji: ರಾಜ್ಯದಲ್ಲಿ ತಾಪಮಾನ ಏರಿಕೆ; ಹವಾಮಾನ ಇಲಾಖೆ ಮಾಹಿತಿ

04:22 PM May 15, 2024 | Team Udayavani |

ಪಣಜಿ: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ತಾಪಮಾನ ಏರುತ್ತಿದೆ. ಬುಧವಾರ, ಪಣಜಿಯಲ್ಲಿ ಗರಿಷ್ಠ 1.9 ಡಿಗ್ರಿ ಸೆಲ್ಸಿಯಸ್‍ನಿಂದ 35.8 ಡಿಗ್ರಿ ಸೆಲ್ಸಿಯಸ್‍ಗೆ ಏರಿಕೆಯಾಗಿದೆ. ಮುಗಾರ್ಂವ್‍ನಲ್ಲಿ ಗರಿಷ್ಠ ತಾಪಮಾನ 35.6 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇಂದು ಮತ್ತು ನಾಳೆ ವಾತಾವರಣದಲ್ಲಿ ಬಿಸಿ ಮತ್ತು ಆದ್ರತೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಮುಂದಿನ ಏಳು ದಿನಗಳ ಕಾಲ ರಾಜ್ಯದಲ್ಲಿ ಗರಿಷ್ಠ ತಾಪಮಾನ 34 ರಿಂದ 36 ಡಿಗ್ರಿ ಸೆಲ್ಸಿಯಸ್ ಇರಲಿದೆ. ಈ ಅವಧಿಯಲ್ಲಿ, ಶಾಖ ಸೂಚ್ಯಂಕ ಅಂದರೆ ಗ್ರಹಿಸಿದ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆ ಇರುತ್ತದೆ. ಮಂಗಳವಾರ ರಾಜ್ಯದ ವಿವಿಧೆಡೆ ಗರಿಷ್ಠ ತಾಪಮಾನ 33ರಿಂದ 36 ಡಿಗ್ರಿ ಸೆಲ್ಸಿಯಸ್ ಇತ್ತು.

ಗೋವಾದ ದಾಬೋಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಗರಿಷ್ಠ 31.8 ಮಿ.ಮೀ ಮಳೆ ದಾಖಲಾಗಿದೆ. ಆದರೆ, ಫೋಂಡಾದಲ್ಲಿ 28 ಮಿಮೀ ಮತ್ತು ಸಾಖಳಿಯಲ್ಲಿ 17.9 ಮಿಮೀ ಮಳೆ ದಾಖಲಾಗಿದೆ.

ರಾಜ್ಯಾದ್ಯಂತ ಮಾರ್ಚ್ 1 ರಿಂದ ಮೇ 15 ರ ನಡುವೆ ಸರಾಸರಿ 46.4 ಮಿಮೀ ಮಳೆ ದಾಖಲಾಗಿದೆ. ಈ ಅವಧಿಯಲ್ಲಿ ಸುರಿದ ಮಳೆಗಿಂತ ಶೇ.130.8ರಷ್ಟು ಹೆಚ್ಚು ಮಳೆಯಾಗಿದೆ. ರಾಜ್ಯದಲ್ಲಿ ಇದುವರೆಗೆ ಫೋಂಡಾದಲ್ಲಿ ಅತಿ ಹೆಚ್ಚು ಅಂದರೆ 132.8 ಮಿ.ಮೀ ಮಳೆ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next