ಪಣಜಿ: ಮೊದಲಿನಿಂದಲೂ ವಿವಾದಾತ್ಮಕವಾಗಿರುವ ಸನ್‍ಬರ್ನ್ ಉತ್ಸವವು ಈಗ ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡಲು ಕಾರಣ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ ಆರೋಪಿಸಿದ್ದಾರೆ.
ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಗೋವಾದಲ್ಲಿ ನಡೆಯುತ್ತಿರುವ ಸನ್‍ಬರ್ನ್ ಮಹೋತ್ಸವದಿಂದಾಗಿ ಗೋವಾದಲ್ಲಿ ಕೊರೊನಾದ ಹೊಸ ರೂಪಾಂತರದ ರೋಗಿಗಳಲ್ಲಿ ಗೋವಾ ದೇಶದಲ್ಲಿ ಅಗ್ರಸ್ಥಾನವನ್ನು ತಲುಪಿದೆ ಎಂದು ಅಲೆಮಾವ್ ಟೀಕಿಸಿದ್ದಾರೆ. ಈ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಬೇಜವಾಬ್ದಾರಿ ಮತ್ತು ಅಸಮರ್ಥವಾಗಿದೆ. ಇಂತಹ ಫೆಸ್ಟಿವಲ್‍ನ್ನು ಗೋವಾದಲ್ಲಿ ಆಯೋಜಿಸುವ ಮೂಲಕ ಕೊರೊನಾ ಹರಡುವ ಮೂಲಕ ತಮ್ಮ ತಪ್ಪಿಗೆ ಮತ್ತೊಂದು ಕೆಲಸವನ್ನು ಸೇರಿಸಿದ್ದಾರೆ. ಈ ಸರ್ಕಾರದಿಂದಾಗಿ ಜನ ಸಾಮಾನ್ಯರು ಬದುಕುವುದೇ ಕಷ್ಟವಾಗಿದೆ.
ಸನ್‍ಬರ್ನ ಫೆಸ್ಟಿವಲ್ ಪರಿಣಾಮ ಈಗ ಗೋಚರಿಸುತ್ತಿದೆ. ಗೋವಾದ ಕೊರೊನಾದ ಜೆ.ಎನ್.ವನ್ ವೈರಸ್ ಸೋಂಕಿತ ರೋಗಿಗಳ ಸಂಖ್ಯೆ ದೇಶದಲ್ಲಿ ಅತಿ ಹೆಚ್ಚು. ಇದು ಸನ್ಬರ್ನ್ ಪರಿಣಾಮವಾಗಿದೆ. ಎಲ್ಲರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಅಲೆಮಾವ್ ಹೇಳಿದರು.
ಕಳೆದ ಕೆಲವು ದಿನಗಳಿಂದ ಗೋವಾದಲ್ಲಿ ಮತ್ತೆ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಕೊರೊನಾ ಹೊಸ ರೂಪಾಂತರದ ಹೆಚ್ಚಿನ ರೋಗಿಗಳು ಗೋವಾ, ಬೆಂಗಳೂರಿನಲ್ಲಿ ಕಂಡುಬಂದಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಗೋವಾದಲ್ಲಿ 9, 10, 13, 16 ರೋಗಿಗಳು ಪತ್ತೆಯಾಗಿದ್ದಾರೆ ಎಂದು ಯೂರಿ ಅಲೆಮಾಂವ ನುಡಿದರು.
ಇದನ್ನೂ ಓದಿ: Tragedy: ಅರ್ಜುನ ಪ್ರಶಸ್ತಿ ವಿಜೇತ, ಹಿರಿಯ ಪೊಲೀಸ್ ಅಧಿಕಾರಿಯ ಶವ ಕಾಲುವೆಯಲ್ಲಿ ಪತ್ತೆ