Advertisement

Panaji ಸ್ಮಾರ್ಟ್ ಸಿಟಿ ಯೋಜನೆ ನಿಧಾನಗತಿಯಲ್ಲಿದೆ: ಉತ್ಪಲ್ ಪರ್ರಿಕರ್ ಕಿಡಿ

02:36 PM Jan 05, 2024 | Team Udayavani |

ಪಣಜಿ: ಪಣಜಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಹೆಸರಿನಲ್ಲಿ ನಡೆಸುತ್ತಿರುವ ಉತ್ಖನನ ನಿಧಾನವಾಗಿ ಸಾಗುತ್ತಿದ್ದು, ಚುನಾವಣ ನಿಧಿಗಾಗಿ ಕಾಮಗಾರಿಯ ಗುಣಮಟ್ಟ ಮತ್ತು ಅವಧಿಯನ್ನು ಕಡೆಗಣಿಸಲಾಗುತ್ತಿದೆ ಎಂದು ಗೋವಾದ ಮಾಜಿ ಮುಖ್ಯಮಂತ್ರಿ ದಿ.ಮನೋಹರ್ ಪರ್ರಿಕರ್ ರವರ ಪುತ್ರ ಉತ್ಪಲ್ ಪರ್ರಿಕರ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

Advertisement

ಈ ವಿಚಾರವಾಗಿ ಪಾಲಿಕೆ ಸದಸ್ಯರು ಮೇಯರ್ ವಿರುದ್ಧ ಏಕೆ ಅವಿಶ್ವಾಸ ನಿರ್ಣಯ ಮಂಡಿಸುತ್ತಿಲ್ಲ, ಈಗ ಅವರ ಸೂಕ್ಷ್ಮತೆ ಎಲ್ಲಿಗೆ ಹೋಗಿದೆ ಎಂದು ಭಾವನಾತ್ಮಕ ಪ್ರಶ್ನೆಯನ್ನು ಉತ್ಪಲ್ ಪರೀಕರ್ ಪ್ರಶ್ನೆ ಎತ್ತಿದರು. ಅವರಿಗೂ ಸಚಿವ ಬಾಬುಶ್ ಅವರಿಂದ ಚುನಾವಣಾ ಫಂಡಿಂಗ್ ಬೇಕು ಎಂಬ ಕಾರಣಕ್ಕೆ ಮೌನವಾಗಿದ್ದೀರಾ ಎಂದು ಉತ್ಪಲ್ ಪ್ರಶ್ನಿಸಿದರು.

ಅವರು ಇಂದು ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀತ್ ರೋಡ್ರಿಗಸ್ ಅವರನ್ನು ಭೇಟಿ ಮಾಡಿ ಐದು ಬೇಡಿಕೆಗಳನ್ನು ಮಂಡಿಸಿದರು. ಪಣಜಿ ಸಮಸ್ಯೆ ಕುರಿತು ಚರ್ಚಿಸಲು ಡಾ.ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಲು ಉತ್ಪಲ್ ಅವರು ಮುಖ್ಯಮಂತ್ರಿಗಳ ಕಚೇರಿಗೆ ಸಮಯ ಕೋರಿದ್ದು, ಮುಂದಿನ ವಾರ ಆ ಸಮಯವನ್ನು ನೀಡಲು ಮುಖ್ಯಮಂತ್ರಿಗಳ ಕಚೇರಿ ಪರಿಗಣಿಸಲಿದೆ ಎಂದು ಹೇಳಿದರು.

ಮಹಾಲಕ್ಷ್ಮಿ ಟ್ರಸ್ಟ್ ಕಚೇರಿಯಲ್ಲಿ ಮಾಜಿ ಕಾರ್ಪೊರೇಟರ್‍ಗಳಾದ ದೀಪಕ್ ಮಾಪ್ಸೇಕರ್, ಶುಭದಾ ಧೋಂಡ್, ಸುರೇಶ ಚೋಡಂಕರ್, ರೇಖಾ ಕಾಂಡೆ ಅವರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉತ್ಪಲ್ ಮಾತನಾಡಿದರು.

ಪಣಜಿ ಸ್ಥಿತಿ ಹೀಗಾಗುತ್ತದೆ ಎಂದು ಚುನಾವಣೆಗೂ ಮುನ್ನ ಹೇಳುತ್ತಿದ್ದೆ. ಪಣಜಿಯಲ್ಲಿನ ಅದಕ್ಷ ಹಾಗೂ ಅಸಂವೇದನಾಶೀಲ ಜನಪ್ರತಿನಿಧಿಗಳಿಂದಾಗಿ ಈ ಸ್ಥಿತಿ ಉಂಟಾಗಿದೆ. ಪಣಜಿಗೆ ದಕ್ಷ ಅಭ್ಯರ್ಥಿಯ ಕಾರಣದಿಂದ ಚುನಾವಣೆಗೆ ಸ್ಪರ್ಧಿಸಲು ನಾನು ನಿರ್ಧರಿಸಿದ್ದೆ ಎಂದು ಉತ್ಪಲ್ ಹೇಳಿದರು.

Advertisement

ಪಣಜಿ ಸಚಿವ ತನ್ನ ಅದಕ್ಷ ಮಗನನ್ನೂ ಮೇಯರ್ ಆಗಿ ನೇಮಿಸಿದ್ದಾರೆ, ಅಸಮರ್ಥ ಶಾಸಕರ ಆಯ್ಕೆಯೇ ಪಣಜಿಯಲ್ಲಿ ಪ್ರಮುಖ ಸಮಸ್ಯೆಯಾಗಿದೆ. ಅವರನ್ನು ತೆಗೆದುಹಾಕದ ಹೊರತು, ಈ ಪ್ರಶ್ನೆಯು ಶಾಶ್ವತವಾಗಿ ಪರಿಹಾರವಾಗುವುದಿಲ್ಲ. ಪಣಜಿಯ ಪ್ರಜ್ಞಾವಂತ ನಾಗರಿಕರು ಈ ಬಗ್ಗೆ ಯೋಚಿಸಬೇಕು. ಕೇವಲ ಡಾಂಬರು ಹಾಕಿದ ಅನುಭವ ಇರುವವರಿಗೆ ಉತ್ತಮ ಗುಣಮಟ್ಟದ ಕಾಮಗಾರಿ ನೀಡಿದರೆ ಏನಾಗುತ್ತದೆ ಎಂಬುದಕ್ಕೆ ಪಣಜಿ ಉತ್ತಮ ಉದಾಹರಣೆ ಎಂದು ಕಿಡಿ ಕಾರಿದರು.

ನಾನು ಈಗ ಹೇಳುತ್ತಿರುವುದರಲ್ಲಿ ಯಾವುದೇ ರಾಜಕೀಯವಿಲ್ಲ. ಪಣಜಿಯ ಜನರು ನನಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಅವರ ಧ್ವನಿಯನ್ನು ವ್ಯವಸ್ಥೆಗೆ ತಲುಪಿಸಲು ನಾನು ಈ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಪಣಜಿಯ ಜನಪ್ರತಿನಿಧಿಗಳಿಗೆ ಮತದಾರರು ಹಾಗೂ ಜನತೆ ಚುನಾವಣೆಗೆ ಬಳಕೆಯಾಗುವಂತಾಗಿದೆ. ನಗರಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಹಣ ಕೊಟ್ಟು ಗೆಲ್ಲಬಹುದು ಎಂದು ಜನಪ್ರತಿನಿಧಿ ಯೋಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇಮ್ಯಾಜಿನ್ ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀತ್ ರೋಡ್ರಿಗಸ್ ಅವರನ್ನು ಉತ್ಪಲ್ ಪರಿಕ್ಕರ್ ಭೇಟಿ ಮಾಡಿದರು. ಭೇಟಿ ಕುರಿತು ಉತ್ಪಲ್ ಮಾತನಾಡಿ, ಸುರಕ್ಷತಾ ಪರೀಕ್ಷೆಗಳು ನಡೆಯಬೇಕು, ಗುಣಮಟ್ಟ ಪರೀಕ್ಷೆ ನಡೆಸಬೇಕು, ಪೂರ್ಣಗೊಳಿಸುವ ದಿನಾಂಕಗಳನ್ನು ನಿಗದಿಪಡಿಸಬೇಕು, ಗುತ್ತಿಗೆದಾರರು ಸಾಮಗ್ರಿಗಳನ್ನು ಸಂಗ್ರಹಿಸಲು ಬಳಸುತ್ತಿರುವ ವಸ್ತುಗಳನ್ನು ತೆಗೆಯಬೇಕು, ಅಗೆಯುವುದನ್ನು ನಿಲ್ಲಿಸಬೇಕು ಮತ್ತು ಜನರೊಂದಿಗೆ ಉತ್ತಮ ಸಂವಾದವನ್ನು ಉತ್ತೇಜಿಸಬೇಕು. ಬೇಡಿಕೆಗಳನ್ನು ಮಾಡಲಾಗಿದೆ ಎಂದು ಉತ್ಪಲ್ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next