Advertisement

Panaji: ರೈಲು ನಿಲ್ದಾಣದ ಬಳಿ ಭೂಕುಸಿತ; ಸತತ ಮೂರನೇ ದಿನವೂ ರೈಲು ಸೇವೆಗಳು ಸ್ಥಗಿತ

02:55 PM Jul 27, 2023 | Team Udayavani |

ಪಣಜಿ: ಗೋವಾದ ಕ್ಯಾಸಲ್ ರಾಕ್-ಕರಂಜೋಲ್ ರೈಲು ನಿಲ್ದಾಣದ ಬಳಿ ಭೂಕುಸಿತದಿಂದಾಗಿ ರೈಲು ಹಳಿಯ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣು ತುಂಬಿಕೊಂಡಿದ್ದು ಸತತ ಮೂರನೇ ದಿನವೂ ರೈಲು ಸೇವೆಗಳು ಸ್ಥಗಿತಗೊಂಡಿವೆ.

Advertisement

ಆದ್ದರಿಂದ, ಈ ಮಾರ್ಗವಾಗಿ ಓಡಾಟ ನಡೆಸುವ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಭಾರಿ ಮಳೆಯಿಂದಾಗಿ ಮಣ್ಣು ತೆರವಿಗೆ ಅಡ್ಡಿಯಾಗಿದೆ. ರೈಲ್ವೆ ಮಾರ್ಗ ಬದಲಾವಣೆಯಿಂದಾಗಿ ಸ್ಥಳೀಯ ರೈಲ್ವೆ ನಿಲ್ದಾಣದ ಬಳಿಯಿಂದ ಪ್ರಯಾಣಿಕರಿಗೆ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ರದ್ದುಗೊಂಡ ರೈಲುಗಳು ಯಶವಂತಪುರ-ವಾಸ್ಕೋ-ಡ-ಗಾಮಾ ಮಾರ್ಗದ ರೈಲು ಸಂಖ್ಯೆ 17309 ಮತ್ತು ವಾಸ್ಕೋ-ಡ-ಗಾಮ-ಯಶವಂತಪುರ ಮಾರ್ಗದ ನಂ. 17310, ಪ್ರತಿದಿನ ಸಂಚರಿಸುವ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಜು. 27 ರಂದು ಶಾಲಿಮಾರ್-ವಾಸ್ಕೋ-ಡ-ಗಾಮ ಅಮರಾವತಿ ಎಕ್ಸ್‍ಪ್ರೆಸ್ ಹುಬ್ಬಳ್ಳಿಯಲ್ಲಿ ನಿಲುಗಡೆ ಮಾಡಲಾಗಿದೆ. ಜುಲೈ 30 ರಂದು ಶಾಲಿಮಾರ್‍ಗೆ ಅಮರಾವತಿ ಎಕ್ಸ್‍ಪ್ರೆಸ್ ವಾಸ್ಕೋಡಗಾಮಾ ಬದಲಿಗೆ ಹುಬ್ಬಳ್ಳಿಯಿಂದ ಹೊರಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜುಲೈ 28 ರಂದು ಹೊರಡುವ ಕಾಚೆಗೋಡ-ವಾಸ್ಕೋ-ಡ-ಗಾಮ ರೈಲು ಹುಬ್ಬಳ್ಳಿಯಲ್ಲಿ ನಿಲುಗಡೆಯಾಗಲಿದೆ ಮತ್ತು ಜುಲೈ 30 ರಂದು ಹೊರಡುವ ರೈಲು ಹುಬ್ಬಳ್ಳಿಯಿಂದ ಹೊರಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಕ್ಯಾಸಲ್‍ರಾಕ್ ಬಳಿ ರೈಲ್ವೆ ಹಳಿಗಳ ಮೇಲೆ ಭೂಕುಸಿತದಿಂದಾಗಿ  ಕೆಲವು ನಿಲ್ದಾಣಗಳ ಮೊದಲು ಹುಬ್ಬಳ್ಳಿಯಲ್ಲಿ ರೈಲುಗಳನ್ನು ನಿಲ್ಲಿಸಲಾಗುತ್ತಿದೆ. ಹೀಗಾಗಿ ಗೋವಾಕ್ಕೆ ಬರುವ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಏತನ್ಮಧ್ಯೆ, ರೈಲ್ವೆ ಇಲಾಖೆ ಇದನ್ನು ಗಮನಿಸಿ ಪ್ರಯಾಣಿಕರಿಗೆ ಉಚಿತ ಬಸ್ ಸೇವೆಗಳನ್ನು ಆಯೋಜಿಸಿದೆ. ಹಜರತ್ ನಿಜಾಮುದ್ದೀನ್ ಎಕ್ಸ್‍ಪ್ರೆಸ್‍ನಿಂದ 255 ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ವಿಭಾಗದಿಂದ ಎಂಟು ಬಸ್‍ಗಳನ್ನು ಉಚಿತವಾಗಿ ವ್ಯವಸ್ಥೆ ಮಾಡಲಾಗಿದ್ದು, ವಾಸ್ಕೋ ಬದಲಿಗೆ ಬೆಳಗಾವಿಯಲ್ಲಿ  ರೈಲು ನಿಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next