Advertisement

Panaji: ಮಹದಾಯಿ ಪ್ರವಾಹ ಪ್ರಾಧಿಕಾರದ ನಿಯೋಗದಿಂದ ಕಳಸಾ ಬಂಡೂರಿ ಕಾಮಗಾರಿ ಪರಿಶೀಲನೆ

03:34 PM Jul 05, 2024 | Team Udayavani |

ಪಣಜಿ: ಮಹದಾಯಿ ಪ್ರವಾಹ ಪ್ರಾಧಿಕಾರದ ನಿಯೋಗವು ಜುಲೈ 7 ರಂದು ಕರ್ನಾಟಕದ ಕಳಸಾ ಬಂಡೂರಿ ಯೋಜನೆಯ ನಿರ್ಮಾಣ ಕಾಮಗಾರಿಯ ಪರಿಶೀಲನೆ ನಡೆಸಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ. ಈ ಭೇಟಿ ಗೋವಾಕ್ಕೆ ಅತ್ಯಂತ ಮಹತ್ವದ್ದಾಗಿದೆ.

Advertisement

ಮಹದಾಯಿ ಪ್ರವಾಹ ಪ್ರಾಧಿಕಾರದ ಅಧಿಕಾರಿಗಳಿಂದ ಕರ್ನಾಟಕದ ಈ ಕಾಮಗಾರಿಯ ಸತ್ಯಾಸತ್ಯತೆ ಬಯಲಾಗಲಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು-ಮಹದಾಯಿ ರಕ್ಷಣೆಗೆ ನಮ್ಮ ಸತತ ಪ್ರಯತ್ನದ ಫಲ ಇದಾಗಿದೆ. ಇದು ನಮ್ಮ ಪರ ಸಾಕ್ಷ್ಯವನ್ನು ಬಲಪಡಿಸುತ್ತದೆ ಮತ್ತು ಕರ್ನಾಟಕದ ಮುನ್ನಡೆಯ ಬಗ್ಗೆ ನಾವು ಹೇಳಿಕೊಳ್ಳುತ್ತಿರುವುದನ್ನು ಸಾಬೀತುಪಡಿಸುತ್ತದೆ. ಭಾನುವಾರ ಬೆಳಿಗ್ಗೆ 9.30 ಕ್ಕೆ ಹಳತರ ನಾಲೆಗೆ ನಿಯೋಗ ಭೇಟಿ ನೀಡಲಿದೆ. ಬಳಿಕ 11 ಗಂಟೆಗೆ ಕಳಸಾ ನಾಲಾ ಭೆಟಿ ನಡೆಯಲಿದೆ. ತಂಡವು ಅಣೇಕಟ್ಟು ಪ್ರದೇಶ ಮತ್ತು ಬಂಡೂರಾ ನಾಲೆಯ ಪರಿಶಿಲನೆ ನಡೆಸಲಿದೆ. ಜುಲೈ 5 ರಂದು ತಂಡವು ಗೋವಾಕ್ಕೆ ಆಗಮಿಸಲಿದೆ. ಪ್ರವಾಹ ಪ್ರಾಧಿಕಾರದ ಎರಡನೇಯ ಸಭೆ ಜುಲೈ 8 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

ಇದನ್ನೂ ಓದಿ:New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್‌ ಪಿಜಿ ಪರೀಕ್ಷೆ ದಿನಾಂಕ ಘೋಷಣೆ 

Advertisement

Udayavani is now on Telegram. Click here to join our channel and stay updated with the latest news.

Next