Advertisement
ಹಂತ ಹಂತವಾಗಿ ಮನೆಗಳ ತೆರವು…ಗೋವಾ ಸರ್ಕಾರವು ಗೋವಾದ ವಾಸ್ವೋ ಬೈನಾ ಬೀಚ್ ಪರಿಸರದಲ್ಲಿ 2004 ರಿಂದ ಹಂತ ಹಂತವಾಗಿ 2012 ರ ವರೆಗೆ ಸಾವಿರಾರು ಕನ್ನಡಿಗರ ಮನೆಗಳನ್ನು ತೆರವುಗೊಳಿಸಿತ್ತು. ಈ ಕನ್ನಡಿಗರಿಗೆ ಇದುವರೆಗೂ ಯಾವುದೇ ಶಾಶ್ವತ ಪುನರ್ವಸತಿ ಕಲ್ಪಿಸಿಲ್ಲ. ಕರ್ನಾಟಕ ಸರ್ಕಾರ ಕೂಡ ಈ ನಿರಾಶ್ರಿತರಿಗೆ ಕೇವಲ ಭರವಸೆ ನೀಡಿತ್ತೇ ಹೊರತು ಇದುವರೆಗೂ ಯಾವುದೇ ಪುನರ್ವಸತಿ ಕಲ್ಪಿಸಿಕೊಡದುರುವುದು ಖೇದಕರ ಸಂಗತಿ. ಇದೀಗ ಮತ್ತೆ ಹತ್ತಾರು ಕನ್ನಡಿಗರ ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಂದಿವೆ.
Related Articles
ನಿರಾಶ್ರಿತರನ್ನು ಭೇಟಿಯಾದ ನಂತರ ಶಾಸಕ ಕೇದಾರ್ ನಾಯ್ಕ್ ರವರಿಗೆ ಮನೆ ಕಳೆದುಕೊಂಡ ನಿರಾಶ್ರಿತರು ಇದುವರೆಗೂ ಸರಕಾರದ ಪ್ರತಿನಿಧಿಯಾಗಲಿ ಬಂದಿಲ್ಲ ಎಂದು ಬೇಸರ ಹೊರಹಾಕಿದರು. ಹೈಕೋರ್ಟ್ ಸೂಚನೆಯಂತೆ ಮನೆಗಳನ್ನು ಕೆಡವಲು ತೀರ್ಮಾನಿಸಲಾಗಿದೆ ಎಂದು ಕೇದಾರ್ ನಾಯ್ಕ್ ಹೇಳಿದ್ದಾರೆ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ. ನಿಮ್ಮ ಶಾಶ್ವತ ಪುನರ್ವಸತಿ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದೇನೆ ಎಂದರು.
Advertisement
ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಲಭ್ಯವಿರುವ ಆಯ್ಕೆಗಳ ಬಗ್ಗೆ ಚರ್ಚಿಸುತ್ತೇವೆ. ಅದರಂತೆ ನಿಮ್ಮ ಐವರು ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಐವರು ಸದಸ್ಯರನ್ನು ಮುಖ್ಯಮಂತ್ರಿ ಬಳಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಶಾಸಕರು ಭರವಸೆ ನೀಡಿದರು. ಅದರಂತೆ ಸಂಜೆ ಮುಖ್ಯಮಂತ್ರಿ ಜತೆ ಸಭೆ ನಡೆಸಲಾಯಿತಾದರೂ, ಆದಾಗ್ಯೂ, ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ನಿರಾಶ್ರಿತ ಕುಟುಂಬಗಳಿಗೆ ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ ಎನ್ನಲಾಗಿದೆ.