Advertisement

ಕ್ಷಣಾರ್ಧದಲ್ಲಿ ಪ್ಯಾನ್‌ ಕಾರ್ಡ್‌ ಪಡೆಯಿರಿ!

11:42 AM Jul 02, 2018 | Sharanya Alva |

ನವದೆಹಲಿ: ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಹಲವು ಅತ್ಯಾಧುನಿಕ ಸೇವೆಗಳನ್ನು ಪರಿಚಯಿಸಿರುವ ಆದಾಯ ತೆರಿಗೆ ಇಲಾಖೆ, ಇದೀಗ ಕೆಲವೇ ಸೆಕೆಂಡುಗಳಲ್ಲಿ ಉಚಿತವಾಗಿ ಆಧಾರ್‌ ಆಧಾರಿತ ಪ್ಯಾನ್‌ ಕಾರ್ಡ್‌ ನೀಡಲು ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಇಲಾಖೆ, ಮೊದಲು ಬಂದವರಿಗೆ ಮೊದಲು ಆದ್ಯತೆ ನಿಯಮ ಅನುಸರಿಸುತ್ತಿರುವ ಕಾರಣ ತ್ವರಿತವಾಗಿ ಈ ಸೌಲಭ್ಯ ಪಡೆದುಕೊಳ್ಳುವಂತೆ ಸೂಚಿಸಿದೆ.

Advertisement

ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಹೀಗಾಗಿ, ಈ ಸೇವೆ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ಸಲ್ಲಿಕೆ ಹೇಗೆ?: ಅರ್ಜಿ ಸಲ್ಲಿಸಬೇಕೆಂದರೆ, ಮೊದಲು https://www.incometaxindiaefiling.gov.in ವೆಬ್‌ಸೈಟ್‌ಗೆ ಲಾಗ್‌ ಇನ್‌ ಆಗಬೇಕು. ಆಧಾರ್‌ ಜತೆ ಲಿಂಕ್‌ ಆಗಿರುವ ನಿಮ್ಮ ಮೊಬೈಲ್‌ ಸಂಖ್ಯೆಗೆ ಒಟಿಪಿ ಕಳುಹಿಸಿ ಕೊಡಲಾಗುತ್ತದೆ. ನಿಮ್ಮ ಹೆಸರು, ವಿಳಾಸ, ಹುಟ್ಟಿದ ತಾರೀಕು, ವಿಳಾಸ, ಪುರುಷ ಅಥವಾ ಮಹಿಳೆ ಎಂಬ ವಿವರ ಆಧಾರ್‌ನಲ್ಲಿ ಇರುವಂತೆಯೇ ಪ್ಯಾನ್‌ನಲ್ಲೂ ನಮೂದಿಸಲಾಗುತ್ತದೆ. ಅರ್ಜಿ ಸಲ್ಲಿಸಿದ ಕೆಲ ಕ್ಷಣಗಳಲ್ಲಿ ಇ-ಪ್ಯಾನ್‌ ವಿತರಿಸಲಾಗುತ್ತದೆ. ಬಳಿಕ ಅಂಚೆ ಮೂಲಕ ಪ್ಯಾನ್‌ ಕಾರ್ಡ್‌ ಮನೆಗೆ ಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next