Advertisement

50,000 ಮೀರುವ ಆಭರಣ ಖರೀದಿಗೆ ಪಾನ್‌ ಕಾರ್ಡ್‌ ಬೇಡ

07:49 PM Oct 06, 2017 | |

ಹೊಸದಿಲ್ಲಿ : 50,000 ರೂ. ಮೀರುವ ಚಿನ್ನಾಭರಣ ಖರೀದಿಗೆ ಇನ್ನು ಮುಂದೆ ಪಾನ್‌ ಕಾರ್ಡ್‌ ಕಡ್ಡಾಯವಲ್ಲ. 

Advertisement

ಕೇಂದ್ರ ಸರಕಾರ ಇಂದು ಶುಕ್ರವಾರ ವಜ್ರ ಮತ್ತು ಚಿನ್ನಾಭರಣ ಖರೀದಿ ಮೇಲಿನ ಜಿಎಸ್‌ಟಿ ಅಧಿಸೂಚನೆಯನ್ನು ಹಿಂಪಡೆದಿರುವುದೇ ಇದಕ್ಕೆ ಕಾರಣವಾಗಿದೆ. ಇಂದು ನಡೆದಿದ್ದ ಜಿಎಸ್‌ಟಿ ಮಂಡಳಿಯ ನಿರ್ಣಾಯಕ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಚಿನ್ನಾಭರಣ ವ್ಯಾಪಾರಿಗಳಿಗೆ ಇನ್ನಷ್ಟು ನೆಮ್ಮದಿ ಕೊಡುವ ನಿಟ್ಟಿನಲ್ಲಿ ಸರಕಾರ “ಎರಡು ಕೋಟಿ ಅಥವಾ ಅದಕ್ಕೂ ಮೀರಿದ ವಾರ್ಷಿಕ ವಹಿವಾಟು ನಡೆಸುವ, ವಜ್ರ, ಚಿನ್ನಾಭರಣ ಸಹಿತ ಅತ್ಯಧಿಕ ಮೌಲ್ಯದ ಸರಕುಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ಸಂಸ್ಥೆಗಳು ಪಿಎಂಎಲ್‌ಎ ಅಡಿ ಬರುವುದಿಲ್ಲ ಎಂದು ಹೇಳಿದೆ. 

ಮಾತ್ರವಲ್ಲದೆ 50,000 ರೂ. ಮೀರುವ ವಜ್ರ ಮತ್ತು ಚಿನ್ನಾಭರಣ ಖರೀದಿಯ ವಹಿವಾಟುಗಳನ್ನು ಸರಕಾರಕ್ಕೆ ತಿಳಿಸಬೇಕಾಗಿಲ್ಲ ಎಂಬುದನ್ನೂ ಸ್ಪಷ್ಟಪಡಿಸಲಾಗಿದೆ. ಹಾಗಾಗಿ ಚಿನ್ನ ಮತ್ತು ವಜ್ರಾಭರಣ ಮಾರಾಟಗಾರರು ಇನ್ನು ಮಂದೆ 50,000 ರೂ. ಮೀರುವ ಖರೀದಿ ವ್ಯವಹಾರಗಳನ್ನು ಹಣಕಾಸು ಗುಪ್ತಚರ ದಳಕ್ಕೆ ತಿಳಿಸಬೇಕಾಗಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next