ಹುಣಸೂರು: ಮತಾಂದರ ನಿಷೇಧ ಕಾಯ್ದೆ ವಿರುದ್ದ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ದಸಂಸ ಒಕ್ಕೂಟದವತಿಯಿಂದ ಗಣರಾಜ್ಯೋತ್ಸವದಂದು ಕರಪತ್ರ ಚಳುವಳಿ ನಡೆಸಿದರು.
ನಗರದ ಸಂವಿದಾನ ಸರ್ಕಲ್‌ನಲ್ಲಿ ಜಮಾವಣೆಗೊಂಡ ಸಂಘಟನೆಗಳ ಮುಖಂಡರು ಸಾರ್ವಜನಿಕರಿಗೆ ಕಾಯ್ದೆ ವಿರುದ್ದವೇಕೆಂಬ ಮಾಹಿತಿಯೊಳಗೊಂಡ ಕರಪತ್ರವನ್ನು ವಿತರಿಸಿ ಗಮನ ಸೆಳೆದರು.
ನಂತರ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಅಂಬೇಡ್ಕರರು ನೀಡಿರುವ ಸಂವಿದಾನದಲ್ಲಿ ಯಾವುದೇ ಧರ್ಮವನ್ನು ಸೇರಲು ಅವಕಾಶ ಕಲ್ಪಿಸಿದೆ. ಆದರೆ ಮತಾಂದ ಶಕ್ತಿಗಳು ಸ್ವಾರ್ಥಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಹುನ್ನಾರ ನಡೆಸಿದ್ದು, ಜನರು ಜಾಗೃತಗೊಂಡು ಕಾಯ್ದೆಯನ್ನು ವಿರೋಧಿಸಬೇಕೆಂದು ಮನವಿ ಮಾಡಿದರು.
ದಸಂಸದ ರತ್ನಪುರಿ ಪುಟ್ಟಸ್ವಾಮಿ, ಜೆ.ಮಹದೇವ್, ಡೇವಿಡ್, ರಾಮಕೃಷ್ಣ, ಬಿಎಸ್‌ಪಿಯ ಪ್ರಸನ್ನ, ಸಿಪಿಎಂನ ಬಸವರಾಜು ವಿ.ಕಲ್ಕುಣಿಕೆ, ಹುಣಸೂರ್ ಪೀಸ್ ಕಮಿಟಿಯ ಅಮಿದಿನ್, ಅಬ್ದುಲ್ ಜಬ್ಬಾರ್ ಸೇರಿದಂತೆ ಅನೇಕ ಮುಖಂಡರು ಮಾತನಾಡಿ ಈ ಕಾಯ್ದೆ ಜನರ ವೈಯಕ್ತಿಕ ಹಕ್ಕುಗಳನ್ನು ಕಿತ್ತುಕೊಳ್ಳುವುದಾಗಿದೆ. ಕೋಮವಾದ ಹೆಚ್ಚಿಸಿ, ಮತಪರಿವರ್ತನೆ ಮಾಡಿಕೊಳ್ಳುವ ಹುನ್ನಾರ ಅಡಗಿರುವ ಮತಾಂತರ ಕಾಯ್ದೆಯನ್ನು ಜಾರಿಗೊಳಿಸಲು ಬಿಡಬಾರದು. ಇದಕ್ಕಾಗಿ ದೊಡ್ಡ ಹೋರಾಟ ನಡೆಸಬೇಕಿದೆ ಎಂದರು.
ಈ ವೇಳೆ ರೈತಸಂಘದ ತಾಲೂಕು ಅಧ್ಯಕ್ಷ ಚಿಕ್ಕಣ್ಣ, ದಸಂಸದ ಕಾಂತರಾಜು, ಶಾಂತಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ : ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು