ಸವಣೂರು: ಮಳೆಯಿಂದ ಹಾನಿಗೊಳಗಾದ ಪಾಲ್ತಾಡಿ ಗ್ರಾಮದ ಕೆಲ ಪ್ರದೇಶಗಳಿಗೆ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಮಂಗಳವಾರ ಭೇಟಿ ನೀಡಿದರು. ತೀರಾ ಹದೆಗೆಟ್ಟಿರುವ ಮಂಜುನಾಥನಗರ-ಅಂಕತ್ತಡ್ಕ ಸಂಪರ್ಕ ರಸ್ತೆ, ನಾಡೋಳಿ ಸೇತುವೆ ಹಾಗೂ ಮಳೆಗಾಲದಲ್ಲಿ ತೋಡು ಬೇಸಿಗೆಯಲ್ಲಿ ರೋಡು ಎಂಬಂತಹ ಸ್ಥಿತಿಯ ಪರಣೆ- ಬಂಬಿಲಬೈಲು ಸಂಪರ್ಕ ರಸ್ತೆಯನ್ನು ತಹಶೀಲ್ದಾರ್ ವೀಕ್ಷಿಸಿದರು. ಬಳಿಕ ಸಂಬಂಧಪಟ್ಟ ಇಲಾಖೆಗಳಿಗೆ ವರದಿ ಸಲ್ಲಿಸುವಂತೆ ಗ್ರಾಮ ಕರಣಿಕರಿಗೆ ಸೂಚಿಸಿದರು.
ಮಾಹಿತಿ
ಈ ಭಾಗದ ಸಮಸ್ಯೆಗಳ ಕುರಿತು ಗ್ರಾಮಸ್ಥರು ಪುತ್ತೂರು ಸಹಾಯಕ ಕಮೀಷನರ್ ಎಚ್.ಕೆ. ಕೃಷ್ಣಮೂರ್ತಿ ಅವರ ಗಮನಕ್ಕೂ ತಂದಿದ್ದರು. ಗ್ರಾ.ಪಂ. ಸದಸ್ಯ ಸತೀಶ್ ಅಂಗಡಿಮೂಲೆ ಅವರು ತಹಸೀಲ್ದಾರ್‌ಗೆ ಸಮಸ್ಯೆ ಕುರಿತು ವಿವರಣೆ ನೀಡಿದರು. ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯ ಮೂಲಕ ದುರಸ್ತಿ ಕಾರ್ಯಕ್ಕೆ ಮುಂದಾಗುವಂತೆ ವಿನಂತಿಸಿದರು.
ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಸವಣೂರು ಗ್ರಾ.ಪಂ. ಉಪಾಧ್ಯಕ್ಷ ರವಿಕುಮಾರ್, ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ, ಗ್ರಾಮ ಕರಣಿಕ ರವಿಚಂದ್ರ, ಗ್ರಾಮ ಸಹಾಯಕ ಬಾಬು, ಪಾದೆಬಂಬಿಲ ದುರ್ಗಾ ಭಜನ ಮಂಡಳಿಯ ಅಧ್ಯಕ್ಷ ವಿಶ್ವನಾಥ ಗೌಡ ಅಂಬಟೆತ್ತಡಿ, ಮಾಜಿ ಅಧ್ಯಕ್ಷ ಹರೀಶ್ ಅಂಗಡಿಮೂಲೆ, ವಸಂತ ಗೌಡ ಚಾಕೋಟೆತ್ತಡಿ ಉಪಸ್ಥಿತರಿದ್ದರು.