ನವದೆಹಲಿ: ಶಾಪೂರ್ಜಿ ಪಲ್ಲೊಂಜಿ ಗ್ರೂಪ್ ಮುಖ್ಯಸ್ಥ, ಖ್ಯಾತ ಕೈಗಾರಿಕೋದ್ಯಮಿ ಪಲ್ಲೊಂಜಿ ಮಿಸ್ತ್ರಿ (93 ವರ್ಷ) ಮಂಗಳವಾರ (ಜೂನ್ 28) ತಮ್ಮ ನಿವಾಸದಲ್ಲಿ ನಿಧನರಾಗಿರುವುದಾಗಿ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಭಾಗಮಂಡಲ ಸೇರಿದಂತೆ ವಿವಿಧ ಕಡೆ ಭೂಮಿ ಕಂಪಿಸಿದ ಅನುಭವ
ಮಿಸ್ತ್ರಿ ಅವರು ಟಾಟಾ ಗ್ರೂಪ್ ನಲ್ಲಿ ಶೇ.18.4ರಷ್ಟು ಅತೀ ದೊಡ್ಡ ವೈಯಕ್ತಿಕ ಷೇರು ಹೊಂದಿದ ಉದ್ಯಮಿಯಾಗಿದ್ದಾರೆ. ಹಿರಿಯ ಉದ್ಯಮಿ ಮಿಸ್ತ್ರಿ ಮುಂಬೈನ ತಮ್ಮ ನಿವಾಸದಲ್ಲಿ ಮಲಗಿದಲ್ಲಿಯೇ ಕೊನೆಯುಸಿರೆಳೆದಿದ್ದರು ಎಂದು ವರದಿ ವಿವರಿಸಿದೆ.
ಶ್ರೀಮಂತು ಉದ್ಯಮಿ ಪಲ್ಲೊಂಜಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತೀಯ ಮೂಲದ ಮಿಸ್ತ್ರಿ ಐರಿಶ್ ಪೌರತ್ವ ಪಡೆದಿದ್ದರು ಎಂದು ವರದಿ ಹೇಳಿದೆ.
ಪಲ್ಲೊಂಜಿ ಜಗತ್ತಿನ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಅಭೂತಪೂರ್ವ ಕೊಡುಗೆಯನ್ನು ನೀಡಿದ್ದಾರೆ. 1929ರಲ್ಲಿ ಜನಿಸಿದ್ದ ಮಿಸ್ತ್ರಿ ಅವರು 5 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ವಹಿವಾಟು ಹೊಂದಿದ್ದ ಶಾರ್ಪೂಜಿ ಪಲ್ಲೊಂಜಿ ಗ್ರೂಪ್ ನ ಖಾಸಗಿ ಮುಖ್ಯಸ್ಥರಾಗಿದ್ದರು.
ಗುತ್ತಿಗೆ ವಹಿವಾಟನ್ನು ಹೊಂದಿದ್ದ ಶಾರ್ಪೂಜಿ ಪಲ್ಲೊಂಜಿ ಸಂಸ್ಥೆ ರಿಯಲ್ ಎಸ್ಟೇಟ್, ಟೆಕ್ಸ್ ಟೈಲ್ಸ್, ಹಡಗು ನಿರ್ಮಾಣ, ಗೃಹೋಪಯೋಗಿ ಉಪಕರಣಗಳ ಉದ್ಯಮ ಹೊಂದಿತ್ತು.