Advertisement

ಪಲ್ಲವಿ ಅನುಪಲ್ಲವಿ

11:50 AM Oct 06, 2017 | Team Udayavani |

ನೀವೇನಾದರೂ “ಪ್ರೇಮಾ ಗೀಮಾ ಜಾನೇದೋ’ ಸಿನಿಮಾ ನೋಡಿದ್ದರೆ ನಿಮಗೆ ಈ ಹುಡುಗಿಯ ಮುಖಪರಿಚಯ
ಸಿಗುತ್ತದೆ. ಆ ಸಿನಿಮಾದಲ್ಲಿ ಒಂದೊಳ್ಳೆಯ ಪಾತ್ರ ಮಾಡಿದ್ದ ಇವರ ಹೆಸರು ಪಲ್ಲವಿ. ಆ ಸಿನಿಮಾ ಹೆಚ್ಚು ಸುದ್ದಿ
ಮಾಡದ ಕಾರಣ ಪಲ್ಲವಿ ಕೂಡಾ ಸುದ್ದಿಯಾಗಿರಲಿಲ್ಲ. “ಪ್ರೇಮಾ ಗೀಮಾ ಜಾನೇದೋ’ ಪಲ್ಲವಿ ನಟಿಸಿರುವ
ಮೊದಲ ಸಿನಿಮಾ. ಕಿರುತೆರೆಯಲ್ಲೂ ನಟಿಸಿರುವ ಪಲ್ಲವಿಯ ಎರಡನೇ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಅದು
“ಕಿಡಿ’. ಹೌದು, ಪಲ್ಲವಿ “ಕಿಡಿ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ಪಲ್ಲವಿ ಎಂಟ್ರಿಯಾಗುತ್ತಿದ್ದಾರೆ. 

Advertisement

ಪಲ್ಲವಿಗೆ ಸಾಕಷ್ಟು, ಅವಕಾಶಗಳು ಬಂದರೂ ಅವೆಲ್ಲವನ್ನು ಒಪ್ಪದೇ “ಕಿಡಿ’ ಒಪ್ಪಲು ಕಾರಣ ಪಾತ್ರವಂತೆ. ಇಡೀ ಸಿನಿಮಾದಲ್ಲಿ ನಾಯಕನಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಮುಖವಾದ ಪಾತ್ರ ಸಿಕ್ಕಿದೆಯಂತೆ. ಅವರಿಲ್ಲಿ 
ಕೋಪಿಷ್ಟ ಹುಡುಗನ ಕೋಪವನ್ನು ತಣ್ಣಗೆ ಮಾಡುವಂತಹ ಪಾತ್ರವಂತೆ. ಆ ಹುಡುಗನ ಲವ್ವರ್‌ ಆಗಿ ಅಕೆ, ಏನೇನು
ಮಾಡುತ್ತಾಳೆಂಬ ಅಂಶದೊಂದಿಗೆ ಪಲ್ಲವಿ ಪಾತ್ರ ಸಾಗಿಬರುತ್ತದೆಯಂತೆ. “ಕಿಡಿ’ ಮೂಲಕ ಮತ್ತಷ್ಟು ಒಳ್ಳೆಯ ಅವಕಾಶಗಳು ಸಿಗುವ ನಿರೀಕ್ಷೆ ಪಲ್ಲವಿಗಿದೆ.

ಅಂದಹಾಗೆ, ಪಲ್ಲವಿಗೆ ಸಾಕಷ್ಟು ಅವಕಾಶಗಳು ಬರುತ್ತಿವೆಯಂತೆ. ಆದರೆ, ಒಳ್ಳೆಯ ಪಾತ್ರಗಳ ಮೂಲಕ
ಗುರುತಿಸಿಕೊಳ್ಳಬೇಕೆಂಬ ಉದ್ದೇಶವಿರುವ ಪಲ್ಲವಿ, ಅಂತಹ ಪಾತ್ರಗಳಿಗಾಗಿ ಎದುರು ನೋಡುತ್ತಿರೋದು ಸುಳ್ಳಲ್ಲ.

ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next