ಲಕ್ಷ್ಮೇಶ್ವರ: ಬನದ ಹುಣ್ಣಿಮೆ ನಿಮಿತ್ತ ಪಟ್ಟಣದ ಕೆಂಚಲಾಪುರ ಓಣಿಯ ಬನಶಂಕರಿ ದೇವಿಯ ಪಲ್ಲಕ್ಕಿ ಉತ್ಸವ, ಸತ್ಯನಾರಾಯಣ ಪೂಜೆ ಅಪಾರ ಭಕ್ತ ಸಮೂಹ ನಡುವೆ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಈ ವೇಳೆ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಮಹಾಬಳೇಶ್ವರಪ್ಪ ಬೇವಿನಮರದ ಮಾತನಾಡಿ, ಬನಶಂಕರಿದೇವಿ ನಾಡಿನ ಜನರ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಭಕ್ತರ ಆರಾಧ್ಯ ದೇವತೆಯಾಗಿದ್ದಾಳೆ.
ಸಮಾಜದಲ್ಲಿ ಮಹಿಳೆಯರನ್ನು ಗೌರವ, ಪೂಜ್ಯನೀಯ ಭಾವನೆಯಿಂದ ಕಾಣಬೇಕು. ಮಕ್ಕಳಲ್ಲಿ ದೇವರು, ಧರ್ಮ, ತಂದೆ-ತಾಯಿಗಳ ಬಗ್ಗೆ ಪೂಜ್ಯನೀಯ ಭಾವನೆ ಕಲಿಸಬೇಕು ಎಂದರು.
ಇದನ್ನೂ ಓದಿ:ಸೋದರಳಿಯನ ಪ್ರಗತಿಗೆ ಶ್ರಮಿಸುತ್ತಿರುವ ಮಮತಾ ಬ್ಯಾನರ್ಜಿ ಇನ್ಮುಂದೆ ಏಕಾಂಗಿ: ಶಾ ಆಕ್ರೋಶ
ಲಕ್ಷ್ಮಣ ಮೆಡ್ಲೆರಿ, ನಾರಾಯಣಪ್ಪ ಗಾರಗಿ, ಈಶ್ವರ ಮೆಡ್ಲೆàರಿ, ಗಣೇಶ ಬೇವಿನಮರದ, ಗುರು ಮೆಡ್ಲೆರಿ, ಈಶ್ವರ ಬನ್ನಿಕೊಪ್ಪ, ಚಿದಾನಂದ ಬೇವಿನಮರದ, ವಸಂತ ಬೇವಿನಮರದ, ಈಶ್ವರಪ್ಪ ಹುಳ್ಳಿ, ನೀಲಪ್ಪ ಕರ್ಜೆಕಣ್ಣವರ, ಮಹಿಳಾ ಸಾಹಿತಿ ಲಲಿತಕ್ಕ ಕೆರಿಮನಿ, ಶಿಕ್ಷಕಿ ಡಿ.ಎಫ್. ಪಾಟೀಲ, ಮಹಾದೇವಪ್ಪ ಪಾತಾಳಿ, ಚಿಕ್ಕಣ್ಣ ಪೂಜಾರ, ಪಾಂಡುರಂಗ ಹುಬ್ಬಳ್ಳಿ, ಮಹಾಬಳೇಶ್ವರ ಮೆಡ್ಲೆರಿ ಹಾಗೂ ಭಕ್ತರು ಇದ್ದರು.