Advertisement

ಉದ್ಯೋಗಗಳ ಕಣಜ ಪಾಲಿಮರ್‌ : ಮೈಸೂರಿನಲ್ಲಿರುವ ಸಂಸ್ಥೆ

02:52 AM Jul 10, 2021 | Team Udayavani |

ಸಿಪೆಟ್‌ ಸಂಸ್ಥೆಯು ಭಾರತ ಸರಕಾರದ ರಾಸಾಯನ ಪೆಟ್ರೋರಾಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ಪಾಲಿಮರ್‌/ ಪ್ಲಾಸ್ಟಿಕ್‌ ಕೈಗಾರಿಕೆ ಕುರಿತ ಕೋರ್ಸ್‌ ಗಳನ್ನು ಹೊಂದಿ­ರುವ ಏಕೈಕ ಶಿಕ್ಷಣ ಸಂಸ್ಥೆ ಇದು. ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸ್ಥಾಪಿಸಿದ ದೇಶದ 40 ಸಂಸ್ಥೆಗಳಲ್ಲಿ ಇದು ಕೂಡ ಒಂದು. ಆದರೂ ಕರ್ನಾಟಕದ ಯುವಕರಿಗೆ ಇದರ ಅರಿವೇ ಇಲ್ಲ ಆದ್ದರಿಂದ ಹೊರ ರಾಜ್ಯಗಳಿಂದ ಬರುವವರೇ ಹೆಚ್ಚು.

Advertisement

ಇಂದು ಪ್ಲಾಸ್ಟಿಕ್‌ ಮಾನವ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಪ್ಲಾಸ್ಟಿಕ್‌ ಇಲ್ಲದೇ ಜೀವನ ಸಾಧ್ಯವಿಲ್ಲ ಎನ್ನುವಂತಾಗಿದೆ. ಇಂಥ ಪ್ಲಾಸ್ಟಿಕ್‌ನ್ನೇ ನೆಚ್ಚಿಕೊಂಡು ಹೊಸ ಉದ್ಯೋಗ ಅರಸುವ ಅವಕಾಶ ನಮ್ಮ ರಾಜ್ಯದಲ್ಲೇ ಇದೆ. ಮೈಸೂರಿನಲ್ಲಿ­ರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ… ಎಂಜಿನಿಯ­ರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆಯು (ಸಿಪೆಟ್‌) ಪ್ಲಾಸ್ಟಿಕ್‌ ಆಧಾರಿತ ಕೋರ್ಸ್‌ ನೀಡುವ ಮೂಲಕ ಯುವಕರಲ್ಲಿ ವೃತ್ತಿ ಕೌಶಲ ಹೆಚ್ಚಿಸಿ ಸ್ವಾಲಂಬಿಗಳನ್ನಾಗಿ ಮಾಡುವ ಉದ್ದೇಶ ಹೊಂದಿದೆ.

ಪ್ರಸ್ತುತ ಕೇಂದ್ರದಲ್ಲಿ ದೊರೆಯುವ ಕೋರ್ಸ್‌ಗಳು ಕೆಳಗಿನಂತಿವೆ

ಡಿಪ್ಲೊಮಾ ಕೋರ್ಸ್‌ ಪ್ರವೇಶಕ್ಕಾಗಿ ಅರ್ಹತೆ
ಪೋಸ್ಟ್ ಗ್ರ್ಯಾಜುಯೇಟ್‌ ಡಿಪ್ಲೊಮಾ ಇನ್‌ ಪ್ಲಾಸ್ಟಿಕ್ಸ್ ಡಿಪ್ಲೊಮಾ ಕೋರ್ಸ್‌ ಪ್ರೊಸೆಸಿಂಗ್‌ ಟೆಸ್ಟಿಂಗ್‌ (PGD&PPT) & 2 year ಬಿ.ಎಸ್ಸಿ
ಡಿಪ್ಲೊಮಾ ಇನ್‌ ಪ್ಲಾಸ್ಟಿಕ್ಸ್ ಟೆಕ್ನಾಲಜಿ(DPT) & 3 year 10ನೇ ತರಗತಿ ಪಾಸ್‌

 

ಡಿಪ್ಲೊಮಾ ಕೋರ್ಸ್‌ನ ಹೆಸರು ಪ್ರವೇಶಕ್ಕಾಗಿ ಅರ್ಹತೆ
ಡಿಪ್ಲೊಮಾ ಇನ್‌ ಪ್ಲಾಸ್ಟಿಕ್ಸ್ ಟೆಕ್ನಾಲಜಿ (DPT) & 2 year P.U.C (PCM), ITI (Fitter, Machinist / Turner)
ಡಿಪ್ಲೊಮಾ ಇನ್‌ ಪ್ಲಾಸ್ಟಿಕ್ಸ್ ಮೌಲ್ಡ್‌ ಟೆಕ್ನಾಲಜಿ (DPMT)& 2 year

ಎಸೆಸೆಲ್ಸಿ, ಪಿ.ಯು.ಸಿ (ವಿಜ್ಞಾನ)ಮತ್ತು ಬಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾ­ದವರು/ಹಾಜರಾದವರು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗೆ www.cipet.gov.in ಡಿಪ್ಲೊಮಾ 2 ನೇ ವರ್ಷಕ್ಕೆ ನೇರ ಪ್ರವೇಶ (Lateral Entry for Direct 2nd year Diploma)

Advertisement

ಕೋರ್ಸ್‌ನಲ್ಲಿ ಏನು ಕಲಿಸುತ್ತಾರೆ?
ಪ್ಲಾಸ್ಟಿಕ್‌ ವೈವಿಧ್ಯಮಯ ಬಳಕೆ, ಪ್ಲಾಸ್ಟಿಕ್‌ ಮೌಲ್ದಿಂಗ್‌, ಪ್ಲಾಸ್ಟಿಕ್‌ ಸಂಸ್ಕರಣೆ, ಪ್ಲಾಸ್ಟಿಕ್‌ನ ಗುಣಮಟ್ಟ ಪರಿಶೀಲನೆ, ಆಧುನಿಕ ವಿನ್ಯಾಸದಲ್ಲಿ ಪ್ಲಾಸ್ಟಿಕ್‌ ವಸ್ತುಗಳ ತಯಾರಿಕೆ, ಪ್ಲಾಸ್ಟಿಕ್‌ ಮರುಬಳಕೆ ವಿಧಾನ , ಪ್ಲಾಸ್ಟಿಕ್‌ ಪೈಪ್‌ ಗಳು ಮತ್ತು ಇನ್ನಿತರ ವಸ್ತುಗಳ ತಯಾರಿಕೆ, ಮಾರುಕಟ್ಟೆ ಹಾಗೂ ದರ ಪರಿಷ್ಕರಣೆ.

ಪ್ರವೇಶ ಹೇಗೆ?
ಈ ಕೋರ್ಸ್‌ ಗಳಿಗೆ ಅಖೀಲ ಭಾರತ ಮಟ್ಟದಲ್ಲಿ ಪ್ರವೇಶ ಪರೀಕ್ಷೆ (ಸಿಪೆಟ…) ನಡೆಯುತ್ತದೆ. 2021 -2022 ಸಾಲಿನ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾ­ಗಿದೆ. ಮೈಸೂರಿನ ಸಿಪೆಟ್‌ನ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡು­ವಾಗ ಕರ್ನಾಟಕದವರಿಗೆ ಆದ್ಯತೆ ನೀಡಲಾಗುತ್ತದೆ. ಇಲ್ಲಿ ವ್ಯಾಸಂಗ ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯೋಗ ದೊರಕಿದೆ. ಅನೇಕರು ಸ್ವಉದ್ಯೋಗ ಆರಂಭಿಸಿ­¨ªಾರೆ. ಇಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ವ್ಯವಸ್ಥೆ­ಯಿದೆ. ವಿದ್ಯಾರ್ಥಿ ವೇತನ ಸೌಲಭ್ಯವು ಇದೆ. ಪ್ರತೀ ಸೆಮಿಸ್ಟರ್‌ಗೆ ರೂ.20 ಸಾವಿರದಷ್ಟು ಖರ್ಚು ಬರುತ್ತದೆ.

ಉದ್ಯೋಗಾವಕಾಶಗಳು
– ಆಟೋಮೊಬೈಲ್ಸ್‌ ಕೈಗಾರಿಕೆಗಳು : ವಾಹನದ ಬಿಡಿ ಭಾಗಗಳನ್ನು ತಯಾರಿಸುವ ಉದ್ಯಮಗಳು
– ಪಿ.ವಿ.ಸಿ ಪೈಪ್‌ ತಯಾರಿಕ ಕಂಪೆನಿಗಳು ಮತ್ತು ವಿದ್ಯುನ್ಮಾನ: ಪ್ಲಾಸ್ಟಿಕ್‌ ವಸ್ತು ಉತ್ಪಾದನ ಕಂಪೆನಿಗಳಲ್ಲಿ
– ಆಹಾರೋದ್ಯಮ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ : ಆಗ್ರೋ ಕೆಮಿಕಲ್ಸ್‌ ಅಂಡ್‌ ಫ‌ರ್ಟಿಲೈಸರ್‌ ಕ್ಷೇತ್ರ
– ಎಲೆಕ್ಟ್ರಿಕಲ್ಸ್‌ , ಎಲೆಕ್ಟ್ರಾನಿಕ್ಸ್‌ ಕ್ಷೇತ್ರ
– ಆಹಾರೋದ್ಯಮ

ಸಿಪೆಟ್‌ ಸಂಸ್ಥೆ ನಡೆಸುವ 3 ವರ್ಷಗಳ ಡಿಪ್ಲೊಮಾ ಇನ್‌ ಪ್ಲಾಸ್ಟಿಕ್ಸ್ ಟೆಕ್ನಾಲಜಿ (DPT) ಮತ್ತು ಡಿಪ್ಲೊಮಾ ಇನ್‌ ಪ್ಲಾಸ್ಟಿಕ್ಸ್ ಮೌಲ್ಡ್‌ ಟೆಕ್ನಾಲಜಿ (DPMT) ಕೋರ್ಸ್‌ ನ ವಿದ್ಯಾರ್ಥಿಗಳು 3,4,5 ಮತ್ತು 6 ನೇ ಸೆಮಿಸ್ಟರ್‌ಗಳಲ್ಲಿ ಬ್ರಿಡ್ಜ್ ಕೋರ್ಸ್‌ ಗಳನ್ನು ಬಾಹ್ಯ ವಿಷಯವನ್ನಾಗಿ ಅಭ್ಯಾಸ ಮಾಡಿದರೆ ಕರ್ನಾಟಕ ತಾಂತ್ರಿಕ ಮಂಡಳಿಯು ನಡೆಸುವ ಡಿಪ್ಲೊಮಾ ಇನ್‌ ಪಾಲಿಮರ್‌ ಟೆಕ್ನಾಲಜಿ ಕೋರ್ಸ್‌ ಗೆ ತತ್ಸಮಾನವಾಗಿ ಮತ್ತು ಲ್ಯಾಟರಲ್‌ ಎಂಟ್ರಿ ಮೂಲಕ ಬಿ.ಇ. ವ್ಯಾಸಂಗ ಮಾಡಬಹುದಾಗಿದೆ. ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್‌ಗಳನ್ನು ಅಭ್ಯಸಿಸಲು ವಿಶೇಷ ತರಬೇತಿಯನ್ನು ನೀಡಲಾಗುತ್ತದೆ.

– ಆರ್‌.ಕೆ.ಬಾಲಚಂದ್ರ

Advertisement

Udayavani is now on Telegram. Click here to join our channel and stay updated with the latest news.

Next