Advertisement

ಸಯೀದ್‌ ಜತೆ ತನ್ನ ರಾಯಭಾರಿ: ಭಾರತಕ್ಕೆ ಪ್ಯಾಲೆಸ್ತೀನ್‌ ವಿಷಾದ

07:05 PM Dec 30, 2017 | udayavani editorial |

ಹೊಸದಿಲ್ಲಿ : ಪಾಕಿಸ್ಥಾನದಲ್ಲಿ ಈಚೆಗೆ ಮುಂಬಯಿ ಮೇಲಿನ ಉಗ್ರ ದಾಳಿಯ ಮಾಸ್ಟರ್‌ ಮೈಂಡ್‌ ಮತ್ತು ಜಮಾತ್‌ ಉದ್‌ ದಾವಾ ನಿಷೇಧಿತ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ಏರ್ಪಡಿಸಿದ್ದ ರಾಲಿಯಲ್ಲಿ ಪ್ಯಾಲೆಸ್ತೀನ್‌ ರಾಯಭಾರಿ ಉಪಸ್ಥಿತರಿದ್ದುದನ್ನು ಭಾರತ ತೀವ್ರವಾಗಿ ಖಂಡಿಸಿದ ಬಳಿಕ ಪ್ಯಾಲೆಸ್ತೀನ್‌ ಇಂದು ಶನಿವಾರ ಆಳವಾದ ವಿಷಾದವನ್ನು ವ್ಯಕ್ತಪಡಿಸಿ, ಪಾಕ್‌ನಲ್ಲಿನ ತನ್ನ ರಾಯಭಾರಿಯನ್ನು ವಾಪಾಸ್‌ ಕರೆಸಿಕೊಂಡಿದೆ.

Advertisement

ವಿದೇಶ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಹೊರಡಿಸಿರುವ ಅಧಿಕೃತ ಹೇಳಿಕೆಯಲ್ಲಿ “ಉಗ್ರ ಹಫೀಜ್‌ ಸಯೀದ್‌ ಏರ್ಪಡಿಸಿದ್ದ ರಾಲಿಯಲ್ಲಿ ತನ್ನ ರಾಯಭಾರಿ ಉಪಸ್ಥಿತರಿದ್ದರೆಂಬ ವಿಷಯದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿ, ತಾನಿದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಪ್ಯಾಲೇಸ್ತೀನ್‌ ಭಾರತ ಸರಕಾರಕ್ಕೆ ಭರವಸೆ ನೀಡಿದೆ’ ಎಂದು ತಿಳಿಸಿದೆ.

ಅತ್ಯಂತ ಕಠಿನ ಪದಗಳನ್ನು ಒಳಗೊಂಡ ಖಂಡನಾ ಪತ್ರದಲ್ಲಿ ಭಾರತ ಪ್ಯಾಲೆಸ್ತೀನ್‌ ಸರಕಾರಕ್ಕೆ “ಹಫೀಜ್‌ ಸಯೀದ್‌ ವಿಶ್ವಸಂಸ್ಥೆಯಿಂದ ಉಗ್ರನೆಂದು ಪರಿಗಣಿನಾಗಿರುವ ವ್ಯಕ್ತಿಯಾಗಿದ್ದು ಆತನೊಂದಿಗೆ ಪ್ಯಾಲೆಸ್ತೀನ್‌ ರಾಯಭಾರಿ ಸಖ್ಯ ಹೊಂದುವುದು ಎಷ್ಟು ಮಾತ್ರಕ್ಕೂ ನಮಗೆ ಒಪ್ಪಿತವಾದುದಲ್ಲ’ ಎಂದು ಹೇಳಿದೆ.

ಪಾಕಿಸ್ಥಾನದಲ್ಲಿ ಜಮಾತ್‌ ಉದ್‌ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ಏರ್ಪಡಿಸಿದ ರಾಲಿಯಲ್ಲಿ ಆತನೊಂದಿಗೆ ಪ್ಯಾಲೆಸ್ತೀನ್‌ ರಾಯಭಾರಿ ವೇದಿಕೆ ಹಂಚಿಕೊಂಡ ಫೋಟೋಗಳು ಬಹಿರಂಗವಾಗುತ್ತಲೇ ಭಾರತ ತನ್ನ ತೀವ್ರ ಆಕ್ಷೇಪ, ಅಸಮಾಧಾನಗಳನ್ನು ಅತ್ಯಂತ ನಿಷ್ಠುರ ಪದಗಳಲ್ಲಿ ಪ್ಯಾಲೆಸ್ತೀನ್‌ ಸರಕಾರಕ್ಕೆ ಮುಲಾಜಿಲ್ಲದೆ ತಿಳಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next