Advertisement

ದಲಿತರ ಮನೆಯ ಪಲಾವ್‌ ನಿರಾಕರಿಸಿ ಹೋಟೆಲ್‌ ತಿಂಡಿ ಸವಿದರು!

11:34 AM May 20, 2017 | Team Udayavani |

ಚಿತ್ರದುರ್ಗ: ಜನಸಂಪರ್ಕ ಅಭಿಯಾನದ ಸಂದರ್ಭದಲ್ಲಿ ದಲಿತರ ಮನೆಗಳಲ್ಲಿ ಉಪಾಹಾರ ಸ್ವೀಕರಿಸುವುದಾಗಿ
ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹಾಗೂ ಇತರ ನಾಯಕರು, ಶುಕ್ರವಾರ ಇಲ್ಲಿನ ದಲಿತ
ಮುಖಂಡರೊಬ್ಬರ ಮನೆಯಲ್ಲಿ ಸಿದ್ಧಪಡಿಸಿದ್ದ ಪಲಾವ್‌ ನಿರಾಕರಿಸಿ, ಹೋಟೆಲ್‌ನಿಂದ ತಿಂಡಿ ತರಿಸಿ ತಿಂದು ವಿವಾದ ಸೃಷ್ಟಿಸಿದ್ದಾರೆ.

Advertisement

ಶುಕ್ರವಾರ ಬೆಳಗ್ಗೆ ದಲಿತ ಮುಖಂಡ ಕೆಳಗೋಟೆಯ ರುದ್ರಮುನಿ ಮನೆಯಲ್ಲಿ ಉಪಾಹಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರುದ್ರಮುನಿ ಹಾಗೂ ಅವರ ಕುಟುಂಬದವರು ಬಿಸಿ ಪಲಾವ್‌ ಸಿದ್ಧಪಡಿಸಿದ್ದರು. ಆದರೆ ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು ನಗರದ ಪ್ರತಿಷ್ಠಿತ ಹೋಟೆಲೊಂದರಿಂದ ಇಡ್ಲಿ, ವಡಾ, ಪೊಂಗಲ್‌ ತರಿಸಿಕೊಂಡು ರುದ್ರಮುನಿ ಮನೆಯಲ್ಲೇ ಸೇವಿಸಿದರು. ಇದರಿಂದ ಬೇಸರಗೊಂಡ ದಲಿತ ಸಂಘಟನೆಗಳ ಪ್ರಮುಖರು, ನಮಗೆ ಮೊದಲೇ ತಿಳಿಸಿದ್ದರೆ
ಯಡಿಯೂರಪ್ಪ ಅವರಿಗೆ ಇಷ್ಟವಾದ ಉಪಾಹಾರವನ್ನೇ ಸಿದ್ಧಪಡಿಸುತ್ತಿದ್ದೆವು. ಇಡ್ಲಿ, ವಡಾ, ಪೊಂಗಲ್‌ ಬೇಕೆಂದು
ಹೇಳಿದ್ದರೆ ರುದ್ರಮುನಿ ಮನೆಯಲ್ಲೇ ಮಾಡಿ ಬಡಿಸುತ್ತಿದ್ದೆವು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಯಡಿಯೂರಪ್ಪ ನವರು ದಲಿತರ ಮನೆಯಲ್ಲಿ ಉಪಾಹಾರ, ರೈತರ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡಲಿದ್ದಾರೆ ಎಂದು ಸ್ಥಳೀಯ ಬಿಜೆಪಿ ನಾಯಕರು ತಿಳಿಸಿದ್ದರು. ಮಧ್ಯಾಹ್ನ ಬಿಜೆಪಿ ಹಿರಿಯೂರು ಮಂಡಲದ ಅಧ್ಯಕ್ಷ ಕೋವೇರಹಟ್ಟಿ ಕೆ. ದ್ಯಾಮಣ್ಣ ಅವರ ಮನೆಯಲ್ಲಿ ಊಟ ಮಾಡಿದರು. ದ್ಯಾಮಣ್ಣ ರೈತರಾದರೂ ಸಾಕಷ್ಟು ಅನುಕೂಲಸ್ಥರಾಗಿದ್ದಾರೆ. ಬೇರೆ ಬಡ ರೈತರ ಮನೆಯಲ್ಲಿ ಊಟ ಮಾಡಿದ್ದರೆ ಅರ್ಥಪೂರ್ಣವಾಗುತ್ತಿತ್ತು ಎಂದು
ಕೆಲವು ಕಾರ್ಯಕರ್ತರು ಹೇಳಿದ್ದು ಕೇಳಿಬಂತು.

Advertisement

Udayavani is now on Telegram. Click here to join our channel and stay updated with the latest news.

Next