Advertisement

Palakkad Division: ಸುಸಜ್ಜಿತ ಸ್ವಚ್ಛತಾ ವ್ಯವಸ್ಥೆ ಅಳವಡಿಕೆ

12:46 AM Jan 16, 2024 | Team Udayavani |

ಮಂಗಳೂರು: ದಕ್ಷಿಣ ರೈಲ್ವೇಯ ಪಾಲಕ್ಕಾಡ್‌ ವಿಭಾಗವು ಸ್ವಚ್ಛ ಭಾರತ್‌ ಅಭಿಯಾನದ ಮೂಲಕ 10 ವರ್ಷಗಳಿಂದ ಸ್ವಚ್ಛತಾ ಮುಂದಾಳತ್ವವನ್ನು ವಲಯ ವಹಿಸಿಕೊಂಡಿದ್ದು, ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣಕ್ಕಾಗಿ ಮಾದರಿಯಾಗಿ ಮೂಡಿ ಬಂದಿದೆ.

Advertisement

ವಿಭಾಗದ ಒಟ್ಟು 89 ದೊಡ್ಡ ಮತ್ತು ಸಣ್ಣ ನಿಲ್ದಾಣಗಳು ಸುಸಜ್ಜಿತ ಸ್ವಚ್ಛತಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದ್ದು, ಉನ್ನತ ಪ್ರಾಧಿಕಾರ ಇದನ್ನು ಪರಿಶೀಲನೆ ನಡೆಸುತ್ತಿದೆ. ರೈಲ್ವೇ ಆಡಳಿತದ ಉಸ್ತವಾರಿ ಮೂಲಕ ಆಧುನಿಕ ಸ್ವಚ್ಛತಾ ಯಂತ್ರಗಳು, ಉತ್ಕೃಷ್ಟ ಮಟ್ಟದ ಸೋಂಕು ನಿವಾರಕಗಳು ಮತ್ತು ಎನ್‌ಜಿಟಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ನಿಯಮಾವಳಿಯಂತೆ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.

ನಿಲ್ದಾಣಗಳಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಜೈವಿಕ ಮತ್ತು ಅಜೈವಿಕ ಎಂದು ಪ್ರತ್ಯೇಕಿಸಿ ವಿಲೇವಾರಿ ಮಾಡಲಾಗುತ್ತದೆ. ಮರು ಬಳಕೆ ಮಾಡಬಹುದಾದ ತ್ಯಾಜ್ಯವನ್ನು ವಿವಿಧ ಹಂತಗಳಲ್ಲಿ ಪ್ರತ್ಯೇಕಿಸಿ ಮರುಬಳಕೆ ದಾರರಿಗೆ ಹಸ್ತಾಂತರಿಸಲಾಗುತ್ತಿದೆ. ನಿಲ್ದಾಣಗಳಲ್ಲಿ ಬಾಟಲ್‌ ಕ್ರಶ್ಶಿಂಗ್‌ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.

ಪರಿಸರಕ್ಕೆ ಪೂರಕವಾದ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ವಿಭಾಗದ 15 ನಿಲ್ದಾಣಗಳಿಗೆ ಐಎಸ್‌ಒ 14001-2005 ಪ್ರಮಾಣಪತ್ರ ಲಭಿಸಿವೆ. ಸ್ವಚ್ಛತೆ ವಿಚಾರ ವಿಭಾಗದ ಪ್ರಮುಖ ಆದ್ಯತಾ ವಿಚಾರವಾಗಿದೆ. ಇದರಲ್ಲಿ ಸಾರ್ವಜನಿಕರ ಸಹಭಾ ಗಿತ್ವವೂ ಅಗತ್ಯವಿದ್ದು, ಆ ಮೂಲಕ ಎಲ್ಲ ನಿಲ್ದಾಣಗಳನ್ನು ಸ್ವಚ್ಛ, ಸುಂದರವಾಗಿ ಟ್ಟುಕೊಳ್ಳಲು ಸಾಧ್ಯವಾಗಲಿದೆ ಎಂದು ಪಾಲಕ್ಕಾಡ್‌ ವಿಭಾಗೀಯ ರೈಲ್ವೇ ಪ್ರಬಂಧಕ ಅರುಣ್‌ ಕುಮಾರ್‌ ಚತುರ್ವೇದಿ ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next