Advertisement
ಪಾಲಕ್ ಮೊಸರು ಬಜ್ಜಿ ಬೇಕಾಗುವ ಸಾಮಗ್ರಿ: 1 ಕಪ್ ಸಣ್ಣಗೆ ಹೆಚ್ಚಿ ಉಗಿಯಲ್ಲಿ ಬೇಯಿಸಿದ ಪಾಲಕ್ ಸೊಪ್ಪು , ಒಂದೂವರೆ ಕಪ್ ಮೊಸರು, 1/2 ಕಪ್ ಬೇಯಿಸಿದ ಸಿಹಿ ಜೋಳ, ರುಚಿಗೆ ತಕ್ಕಷ್ಟು ಉಪ್ಪು , 1/2 ಚಮಚ ಕೆಂಪುಮೆಣಸಿನ ಪುಡಿ.
ಬೇಕಾಗುವ ಸಾಮಗ್ರಿ : 1 ಕಪ್ ಗೋಧಿಹಿಟ್ಟು , 1/2 ಕಪ್ ಕಡಲೆಹಿಟ್ಟು , 1 ಕಟ್ಟು ಪಾಲಕ್ ಸೊಪ್ಪು , 1/4 ಕಪ್ ಕೊತ್ತಂಬರಿ ಸೊಪ್ಪು, 1/4 ಚಮಚ ಜೀರಿಗೆ, 1/2 ಚಮಚ ಕೆಂಪುಮೆಣಸು ಪುಡಿ, 1/2 ಚಮಚ ರುಬ್ಬಿದ ಹಸಿಮೆಣಸು ಬೆಳ್ಳುಳ್ಳಿ ಪೇಸ್ಟ್ , 1/4 ಕಪ್ ನೀರುಳ್ಳಿ ಚೂರು, 3-4 ಚಮಚ ಎಣ್ಣೆ , ಉಪ್ಪು ರುಚಿಗೆ ತಕ್ಕಷ್ಟು .
Related Articles
Advertisement
ಪಾಲಕ್ ವಡೆ ಬೇಕಾಗುವ ಸಾಮಗ್ರಿ: 1 ಕಪ್ ಕಡಲೆಬೇಳೆ, 2-3 ಹಸಿಮೆಣಸು, ಸಣ್ಣಗೆ ತುಂಡು ಮಾಡಿದ 2 ಕಪ್ ಪಾಲಕ್ ಸೊಪ್ಪು , ಸಣ್ಣಗೆ ತುಂಡು ಮಾಡಿದ 1/4 ಕಪ್ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು , 1/2 ಚಮಚ ಅಮೂcರ್ ಪುಡಿ ಯಾ ನಿಂಬೆರಸ, ಕರಿಯಲು ಬೇಕಾದಷ್ಟು ಎಣ್ಣೆ. ತಯಾರಿಸುವ ವಿಧಾನ: ಕಡಲೆಬೇಳೆಯನ್ನು 2 ಗಂಟೆ ನೆನೆಸಿ. ನಂತರ ತೊಳೆದು ಗಟ್ಟಿಗೆ ತರಿ ತರಿಯಾಗಿ ರುಬ್ಬಿ ಪಾತ್ರೆಗೆ ಹಾಕಿ. ನಂತರ ಪಾಲಕ್ ಸೊಪ್ಪಿನ ಚೂರು, ಹಸಿಮೆಣಸು ಚೂರು, ಉಪ್ಪು , ಈರುಳ್ಳಿ ಚೂರು, ಅಮೂcರ್ ಪುಡಿ ಸೇರಿಸಿ ಗಟ್ಟಿಗೆ ಬೆರೆಸಿ. ನಂತರ ಸಣ್ಣ ಸಣ್ಣ ಉಂಡೆ ಮಾಡಿ ವಡೆ ತಟ್ಟಿ ಕಾದ ಎಣ್ಣೆಗೆ ಹಾಕಿ ಕೆಂಪಗೆ ಕರಿದು ತೆಗೆಯಿರಿ. ಈಗ ಸ್ವಾದಿಷ್ಟ ವಡೆ ಸಂಜೆಯ ಕಾಫಿಯೊಂದಿಗೆ ಸವಿಯಲು ಚೆನ್ನ. ಪಾಲಕ್ ದಾಲ್
ಬೇಕಾಗುವ ಸಾಮಗ್ರಿ: 1 ಕಟ್ಟು ಪಾಲಕ್ ಸೊಪ್ಪು , 1/2 ಕಪ್ ತೊಗರಿಬೇಳೆ, 3-4 ಒಣಮೆಣಸು, 1 ಚಮಚ ಕೊತ್ತಂಬರಿ, 1/2 ಚಮಚ ಜೀರಿಗೆ, ಚಿಟಿಕೆ ಅರಸಿನ, 2 ಚಮಚ ಹುಳಿರಸ, ಉಪ್ಪು ರುಚಿಗೆ ತಕ್ಕಷ್ಟು , ಚಿಟಿಕೆ ಇಂಗು, 1 ಚಮಚ ಎಣ್ಣೆ . ತಯಾರಿಸುವ ವಿಧಾನ: ತೊಗರಿಬೇಳೆಯನ್ನು ಸ್ವಲ್ಪ ನೀರು ಸೇರಿಸಿ ಬೇಯಿಸಿ. ಪಾಲಕ್ ಸೊಪ್ಪಿನ ಸ್ವಲ್ಪ ಭಾಗವನ್ನು ಬೇಯಿಸಿಡಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದಾಗ ಕೊತ್ತಂಬರಿ, ಜೀರಿಗೆ, ಕೆಂಪುಮೆಣಸು ಹಾಕಿ ಹುರಿದು ಬೇಯಿಸಿದ ಪಾಲಕ್ ಸೊಪ್ಪು ಸೇರಿಸಿ ರುಬ್ಬಿ. ನಂತರ ಬೇಯಿಸಿದ ತೊಗರಿಬೇಳೆ, ರುಬ್ಬಿದ ಮಿಶ್ರಣ, ತುಂಡು ಮಾಡಿದ ಪಾಲಕ್ ಹಸಿ ಸೊಪ್ಪು ಸೇರಿಸಿ ಬೇಯಿಸಿ. ನಂತರ ಉಪ್ಪು , ಹುಳಿರಸ, ಅರಸಿನ ಪುಡಿ ಸೇರಿಸಿ ಕುದಿಸಿ. ನಂತರ ಎಣ್ಣೆಯಲ್ಲಿ ಇಂಗು, ಸಣ್ಣ ತುಂಡು ಕೆಂಪು ಮೆಣಸು ಹಾಕಿ ಒಗ್ಗರಣೆ ಕೊಡಿ. ಈಗ ಪೌಷ್ಟಿಕ ದಾಲ್ ಅನ್ನ, ಚಪಾತಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ. ಪಾಲಕ್ ಕಟ್ಲೆಟ್
ಬೇಕಾಗುವ ಸಾಮಗ್ರಿ: 1 ಕಪ್ ಪಾಲಕ್ ಸೊಪ್ಪು , 2 ಹಸಿಮೆಣಸು, ಬೆಂದ ಆಲೂ 2, 1/2 ಚಮಚ ಜೀರಿಗೆ ಪುಡಿ, 1/2 ಚಮಚ ಖಾರದ ಪುಡಿ, 1/4 ಕಪ್ ಕೊತ್ತಂಬರಿ ಸೊಪ್ಪು , 3 ಚಮಚ ಬ್ರೆಡ್ ಪುಡಿ, ಉಪ್ಪು ರುಚಿಗೆ ತಕ್ಕಷ್ಟು , 4 ಚಮಚ ಎಣ್ಣೆ. ತಯಾರಿಸುವ ವಿಧಾನ: ಪಾಲಕ್ ಸೊಪ್ಪು , ಕೊತ್ತಂಬರಿ ಸೊಪ್ಪು ಚೆನ್ನಾಗಿ ತೊಳೆದು ಸಣ್ಣಗೆ ತುಂಡು ಮಾಡಿ. ನಂತರ ಹಸಿಮೆಣಸು ಚೂರು, ಬೇಯಿಸಿ ಮಸೆದ ಆಲೂ, ಉಪ್ಪು , ಜೀರಿಗೆ ಪುಡಿ, ಖಾರದ ಪುಡಿ, ಬ್ರೆಡ್ ಪುಡಿ ಹಾಕಿ ಸರಿಯಾಗಿ ಕಲಸಿ. ನಂತರ ಉಂಡೆ ಮಾಡಿ ಕಟ್ಲೆàಟು ಆಕಾರ ಕೊಟ್ಟು ತವಾದಲ್ಲಿ ಎಣ್ಣೆ ಹಾಕಿ ಎರಡೂ ಬದಿ ಕೆಂಪಗೆ ಬೇಯಿಸಿ ತೆಗೆಯಿರಿ. ಈಗ ರುಚಿಯಾದ ಕಟ್ಲೆàಟು ಸವಿಯಲು ಸಿದ್ಧ. ಸರಸ್ವತಿ ಎಸ್. ಭಟ್