Advertisement
ಹೀಗೆ ರೈಸ್ ಐಟಮ್‌ಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವುದು “ಪಾಲಕ್ ರೈಸ್”.
Related Articles
ಪಾಲಕ್ ಸೊಪ್ಪು-1ಕಟ್ಟು, ತೆಂಗಿನ ತುರಿ-ಅರ್ಧ ಕಪ್, ಹಸಿಬಟಾಣಿ-50ಗ್ರಾಂ, ಬೆಳ್ತಿಗೆ ಅಕ್ಕಿ-2ಕಪ್, ಪುದೀನಾ ಸೊಪ್ಪು-ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಹಸಿಮೆಣಸಿನ ಕಾಯಿ-8,ಈರುಳ್ಳಿ-2(ಸಣ್ಣ ಹೆಚ್ಚಿದ್ದು), ಟೊಮೇಟೊ-1(ಸಣ್ಣಗೆ ಹೆಚ್ಚಿದ್ದು), ತೆಂಗಿನೆಣ್ಣೆ-4ಚಮಚ, ತುಪ್ಪ-2ಚಮಚ,ಬೆಳ್ಳುಳ್ಳಿ-6ಎಸಳು, ಶುಂಠಿ-ಸ್ವಲ್ಪ, ಅರಿಶಿನ ಪುಡಿ-ಸ್ವಲ್ಪ, ಚಕ್ಕೆ, ಲವಂಗ, ಏಲಕ್ಕಿ(ಎರಡೆರಡು), ಕಸೂರಿ ಮೇಥಿ-ಸ್ವಲ್ಪ, ಸೋಂಪು ಕಾಳು-ಅರ್ಧ ಚಮಚ, ಲಿಂಬೆ ರಸ-1ಚಮಚ, ಗೋಡಂಬಿ,ಉಪ್ಪು-ರುಚಿಗೆ ತಕ್ಕಷ್ಟು.
Advertisement
ತಯಾರಿಸುವ ವಿಧಾನ-ಮೊದಲಿಗೆ ಮಿಕ್ಸಿಗೆ ಜಾರಿಗೆ ತೆಂಗಿನ ತುರಿ, ಶುಂಠಿ, ಬೆಳ್ಳುಳ್ಳಿ, ಲವಂಗ, ಚಕ್ಕೆ, ಏಲಕ್ಕಿ ಮತ್ತು ಅರಿಶಿನ ಪುಡಿ ಇವೆಲ್ಲವನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
-ನಂತರ ಮತ್ತೊಮ್ಮೆ ಒಂದು ಮಿಕ್ಸಿಗೆ ಜಾರಿಗೆ ಪಾಲಕ್ ಸೊಪ್ಪು,ಹಸಿಮೆಣಸು,ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
-ಈಗ ಒಂದು ಕುಕ್ಕರ್ ಗೆ 4 ಚಮಚ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಮೇಲೆ ತುಪ್ಪ,ಲವಂಗ,ಏಲಕ್ಕಿ, ಚಕ್ಕೆ,ಸೋಂಪು ಮತ್ತು ಕಸೂರಿ ಮೇಥಿಯನ್ನು ಹಾಕಿಕೊಂಡು ಸ್ವಲ್ಪ ಫ್ರೈ ಮಾಡಿಕೊಳ್ಳಿ.
-ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ್ದ ಈರುಳ್ಳಿ, ಟೊಮೇಟೊ ಹಾಕಿ 2ರಿಂದ3 ನಿಮಿಷಗಳ ಕಾಲ ಫ್ರೈ ಮಾಡಿ ಆ ನಂತರ ರುಬ್ಬಿಟ್ಟ ತೆಂಗಿನ ಕಾಯಿ ಮಿಶ್ರಣವನ್ನು ಸೇರಿಸಿಕೊಂಡು ಹಸಿವಾಸನೆ ಹೋಗುವವರೆಗೆ ತಿರುವಿಕೊಳ್ಳಿ.
-ನಂತರ ಅದಕ್ಕೆ ನುಣ್ಣಗೆ ರುಬ್ಬಿಟ್ಟ ಪಾಲಕ್ ಸೊಪ್ಪಿನ ಪೇಸ್ಟ್ ಅನ್ನು ಹಾಕಿ 2 ರಿಂದ 3 ನಿಮಿಷಗಳವರೆಗೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
-ತದನಂತರ ಹಸಿಬಟಾಣಿಯನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಗೂ 2 ಕಪ್ ನೀರನ್ನು ಹಾಕಿ ಬಳಿಕ ಇದಕ್ಕೆ ತೊಳೆದಿಟ್ಟ ಅಕ್ಕಿಯನ್ನು ಸೇರಿಸಿ ಲಿಂಬೆರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
-ಎರಡು ಸೀಟಿವರೆಗೆ ಬೇಯಿಸಿದರೆ ಬಿಸಿ-ಬಿಸಿಯಾದ ಪಾಲಕ್ ರೈಸ್ ಸವಿಯಲು ಸಿದ್ಧ.(ಹುರಿದ ಗೋಡಂಬಿಯಿಂದ ಅಲಂಕರಿಸಿ)
-ಇದು ಸಲಾಡ್ ಜೊತೆ ತಿನ್ನಲು ಬಹಳ ರುಚಿಯಾಗುತ್ತದೆ. -ಶ್ರೀರಾಮ್ ಜಿ ನಾಯಕ್