Advertisement

ಉಡುಗೊರೆಯಾಗಿ ಬಂದ ‘ನೆಕ್ಲೆಸ್’ಮಾರಾಟ ಆರೋಪ: ಇಮ್ರಾನ್‌ ಖಾನ್‌ ವಿರುದ್ಧ ತನಿಖೆ ಆರಂಭ

08:58 PM Apr 13, 2022 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನದ ನಿಕಟಪೂರ್ವ ಪ್ರಧಾನಿ ಇಮ್ರಾನ್‌ ಖಾನ್‌ರವರಿಗೆ ಆ ಹುದ್ದೆಯಿಂದ ಕೆಳಗಿಳಿಯುತ್ತಿದ್ದಂತೆ “ರಾಜಕೀಯ ಕಾಡಾಟ’ಗಳು ಶುರುವಾಗ ತೊಡಗಿವೆ.

Advertisement

ತಾವು ಪ್ರಧಾನಿಯಾಗಿದ್ದಾಗ ತಮಗೆ ಉಡುಗೊರೆಯಾಗಿ ಬಂದಿದ್ದ ನೆಕ್ಲೇಸ್‌ ಒಂದನ್ನು ಪಾಕಿಸ್ತಾನದ ಆಭರಣ ವ್ಯಾಪಾರಿಯೊಬ್ಬರಿಗೆ 18 ಕೋಟಿ ರೂ.ಗಳಿಗೆ ಮಾರಾಟ ಮಾಡಿದ ಆರೋಪ ಅವರ ಮೇಲೆ ಬಂದಿದೆ.

ನಿಯಮಗಳ ಪ್ರಕಾರ, ಪ್ರಧಾನಿಯಾಗಿದ್ದವರು ತಮಗೆ ಬಂದ ಉಡುಗೊರೆಗಳನ್ನು ರಾಷ್ಟ್ರೀಯ ತೋಶಾ-ಖಾನಾ ವಿಭಾಗಕ್ಕೆ ಒಪ್ಪಿಸಬೇಕಿರುತ್ತದೆ.

ಇದನ್ನೂ ಓದಿ:ಯುಪಿಯಲ್ಲಿ ಶಾಂತಿಯುತ ರಾಮನವಮಿ: ಗಲಭೆಗಳಿಗೆ ಸ್ಥಳವಿಲ್ಲ ಎಂದ ಯೋಗಿ

ಆದರೆ, ಖಾನ್‌ರವರು ಆ ನೆಕ್ಲೇಸ್‌ ಅನ್ನು ವೈಯಕ್ತಿಕವಾಗಿ ಮಾರಾಟ ಮಾಡಿದ್ದು ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಫೆಡರಲ್‌ ತನಿಖಾ ಸಂಸ್ಥೆ (ಎಫ್ಐಎ) ತನಿಖೆ ಆರಂಭಿಸಿದೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next