Advertisement

ಮೋದಿ ಆಡಳಿತ ಪಾಕ್‌, ಸಿದ್ದುಗೆ ಇಷ್ಟವಾಗುತ್ತಿಲ್ಲ: ಈಶ್ವರಪ್ಪ ಟೀಕೆ

12:52 PM Apr 06, 2017 | Team Udayavani |

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ವಿಶ್ವಮಟ್ಟದಲ್ಲಿ ಎಲ್ಲರೂ ಇಷ್ಟಪಡುತ್ತಿದ್ದಾರೆ. ಆದರೆ ಪಾಕಿಸ್ಥಾನ ಮತ್ತು ಸಿದ್ದರಾಮಯ್ಯ ಅವರಿಗೆ ಮಾತ್ರ ಮೋದಿ ಇಷ್ಟವಾಗುತ್ತಿಲ್ಲ ಎಂದು ವಿಧಾನಪರಿಷತ್‌ ವಿರೋಧಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಟೀಕಿಸಿದರು. 

Advertisement

ನಂಜನಗೂಡು ಕ್ಷೇತ್ರದ ಕತ್ವಾಡಿಪುರದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿವಿ.ಶ್ರೀನಿವಾಸ ಪ್ರಸಾದ್‌ ಅವರ ಪರ ಪ್ರಚಾರ ಮಾಡಿದ ಅವರು, ಮೋದಿ ಅವರ ಆಡಳಿತ ನಮಗೆಲ್ಲರಿಗೂ ಹೆಮ್ಮೆ. ಇಡೀ ದೇಶ ಅವರನ್ನು ಮೆಚ್ಚಿದೆ. ವಿಶ್ವಮಟ್ಟದಲ್ಲೂ ಸಹ ಮೋದಿ ಮನೆಮಾತಾಗಿದ್ದಾರೆ. ಒಂದು ಕಾಲದಲ್ಲಿ ಮೋದಿ ಅವರಿಗೆ ಅಮೆರಿಕಾ ಪ್ರವೇಶಿಸಲು ವೀಸಾ ನೀಡುವುದಿಲ್ಲ ಎಂದು ಹೇಳಿದ್ದ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ,

ಪಾಕಿಸ್ಥಾನದ ವಿರುದ್ಧ ತಿರುಗಿಬಿದ್ದು ತಕ್ಕ ಉತ್ತರ ನೀಡಿದ್ದನ್ನು ಕಂಡು ಬೆರಗಾಗಿ ಹಲವು ರಾಷ್ಟ್ರಗಳಲ್ಲಿ ಒಂದು ದೊಡ್ಡ ಪಿಡುಗಾಗಿರುವ ¸‌ಯೋತ್ಪಾ$ದನೆಯನ್ನು ಹತ್ತಿಕ್ಕುವ ಸಾಮರ್ಥ್ಯ ಇರುವುದು ಮೋದಿಗೆ ಮಾತ್ರ ಎಂದು ಹೇಳುತ್ತಿದ್ದಾರೆ. ಹೀಗೆ ಜಗವೇ ಅವರನ್ನು ಮೆಚ್ಚುತ್ತಿರುವಾಗ ಪಾಕಿಸ್ಥಾನ ಮತ್ತು ಸಿದ್ದರಾಮಯ್ಯ ಮಾತ್ರ ಮೋದಿ ಅವರನ್ನು ಇಷ್ಟಪಡುತ್ತಿಲ್ಲ. ಮುಂದೆ ಅವರೂ ಸಹ ಮೆಚ್ಚಲಿದ್ದಾರೆ ಎಂದರು. 

ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷದ ಆಡಳಿತವಿದ್ದು ಡಾ.ಮನಮೋಹನಸಿಂಗ್‌ ಪ್ರಧಾನಿಯಾಗಿದ್ದಾಗ ಪಾಕಿಸ್ಥಾನ ಇಲ್ಲಸಲ್ಲದ ಕ್ಯಾತೆ ತೆಗೆದು ತೊಂದರೆ ಕೊಡುತ್ತಿತ್ತು. ಹತ್ಯೆ, ದಬ್ಟಾಳಿಕೆ ನಡೆಸುತ್ತಿತ್ತು. ಆದರೆ ಸಿಂಗ್‌ ವîೌನವಾಗಿರುತ್ತಿದ್ದರು. ಆದರೆ ನರೇಂದ್ರ ಮೋದಿ ಅವರು ನಮ್ಮ ದೇಶದ ನಾಲ್ವರು ಸೈನಿಕರನ್ನು ಪಾಕಿಸ್ಥಾನದವರು ಕೊಂದಾಗ ಕ್ಷಿಪ್ರವಾಗಿ ಪ್ರತಿಕ್ರಿಯಿಸಿ ನಾಲ್ಕಕ್ಕೆ ನಲವತ್ತರಷ್ಟು ಉತ್ತರ ನೀಡಿದರು. ಇದರಿಂದಾಗಿ ಇಂದು ಪಾಕ್‌ ಸೈನಿಕರು ನಮ್ಮ ದೇಶದ ತಂಟೆಗೆ ಬರುತ್ತಿಲ್ಲ. ನಾವಾಗಿ ಹೋಗಲ್ಲ, ಕೆಣಕಿದರೆ ಬಿಡಲ್ಲ ಎಂಬುದು ನರೇಂದ್ರ ಮೋದಿ ಅವರ ಗಂಡುಗಲಿ ವ್ಯವಸ್ಥೆಯಾಗಿದೆ ಎಂದು ಅವರು ಹೇಳಿದರು. 

ಇಂಥ ದಿಟ್ಟ ವ್ಯಕ್ತಿತ್ವದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಬೆಂಬಲ ನೀಡಲು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಸಹಕರಿಸಬೇಕೆಂದು ಈಶ್ವರಪ್ಪ ಮನವಿ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌, ವಿಧಾನಪರಿಷತ್‌ ಮಾಜಿ ಸದಸ್ಯ ಸಿ.ರಮೇಶ್‌, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮುಖಂಡರಾದ ದಯಾನಂದಮೂರ್ತಿ ಪ್ರಚಾರದಲ್ಲಿ ಭಾಗಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next