Advertisement

ಪಾಕಿಸ್ತಾನದಲ್ಲಿ ಹಿಂದೂ ವಿವಾಹ ಕಾಯ್ದೆ ಅಂಗೀಕಾರ

03:45 AM Mar 11, 2017 | |

ಇಸ್ಲಾಮಾಬಾದ್‌: ಪಾಕಿಸ್ತಾನದ ಸಂಸತ್‌ನಲ್ಲಿ ಎರಡನೇ ಬಾರಿಗೆ ಮಂಡಿಸಲಾಗಿದ್ದ ಹಿಂದೂ ವಿವಾಹ ಕಾಯ್ದೆಗೆ ಗುರುವಾರ ಅಂಗೀಕಾರ ಸಿಕ್ಕಿದೆ.

Advertisement

ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿಯೇ ಅದನ್ನು ಅಂಗೀಕರಿಸಲಾಗಿತ್ತಾದರೂ, ಸೆನೆಟ್‌ ಕೆಲವೊಂದು ವಿಚಾರಗಳ ಬಗ್ಗೆ ತಿದ್ದುಪಡಿ ಸೂಚಿಸಿದ್ದರಿಂದ ಫೆಬ್ರವರಿಯಲ್ಲಿ ಮತ್ತೆ ಮಂಡನೆ ಮಾಡಿ, ಒಪ್ಪಿಗೆ ಸೂಚಿಸಲಾಗಿತ್ತು. ಅದನ್ನು ಪಾಕಿಸ್ತಾನದ ಅಧ್ಯಕ್ಷರ ಸಹಿಗೆ ಕಳುಹಿಸಲಾಗುತ್ತದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಸಮುದಾಯದವರಿಗೆ ವಿವಾಹ, ನೋಂದಣಿ, ವಿಚ್ಛೇದನವನ್ನು ಕಾನೂನು ಬದ್ಧವಾಗಿ ನಡೆಸುವ ಹಕ್ಕು ಸಿಕ್ಕಿದಂತಾಗಿದೆ. ಹೊಸ ಕಾಯ್ದೆಯಲ್ಲಿ ಮದುವೆ ದಿನಾಂಕ ಮತ್ತಿತರ ವೈಯಕ್ತಿಕ ವಿವರಗಳನ್ನು ಒಳಗೊಂಡಿದೆ. ಅದಕ್ಕೆ ಮದುವೆ ಮಾಡಿಸಿದ ಪುರೋಹಿತರು ಸಹಿ ಹಾಕಬೇಕು. ನೆರೆಯ ರಾಷ್ಟ್ರದಲ್ಲಿರುವ ಹಿಂದೂಗಳ ದಶಕಗಳ ಬೇಡಿಕೆ ಇದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next