Advertisement

ವಾಘಾ-ಅಟ್ಟಾರಿ ಗಡಿಭಾಗದಲ್ಲಿ ಜನಿಸಿದ ಮಗುವಿಗೆ ‘ಬಾರ್ಡರ್’ ಎಂದು ಹೆಸರಿಟ್ಟ ದಂಪತಿ!

11:32 AM Dec 06, 2021 | Team Udayavani |

ಹೊಸದಿಲ್ಲಿ: ವಾಘಾ-ಅಟ್ಟಾರಿ ಗಡಿ ಭಾಗದಲ್ಲಿ ಜನಿಸಿದ ಮಗುವಿಗೆ ಪಾಕಿಸ್ತಾನದ ದಂಪತಿಗಳು ‘ಬಾರ್ಡರ್’ ಎಂದು ಹೆಸರಿಟ್ಟಿದ್ದಾರೆ. ಅವರು ಕಳೆದ 71 ದಿನಗಳಿಂದ ಇತರ 97 ಪಾಕಿಸ್ತಾನಿ ಪ್ರಜೆಗಳೊಂದಿಗೆ ಅಟ್ಟಾರಿ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ.

Advertisement

ಪಂಜಾಬ್ ಪ್ರಾಂತ್ಯದ ರಾಜನ್‌ಪುರ ಜಿಲ್ಲೆಗೆ ಸೇರಿದ ಪೋಷಕರು, ನಿಂಬು ಬಾಯಿ ಮತ್ತು ಬಲಮ್ ರಾಮ್ ಅವರು ಭಾರತ-ಪಾಕ್ ಗಡಿಯಲ್ಲಿ ಜನಿಸಿದ ಕಾರಣ ಮಗುವಿಗೆ ಈ ಹೆಸರನ್ನು ಇಡಲಾಗಿದೆ ಎಂದು ಹೇಳಿದರು.

ನಿಂಬು ಬಾಯಿ ಗರ್ಭಿಣಿಯಾಗಿದ್ದು, ಡಿಸೆಂಬರ್ 2 ರಂದು ಹೆರಿಗೆ ನೋವು ಕಾಣಿಸಿಕೊಂಡಿತು. ಪಕ್ಕದ ಪಂಜಾಬ್ ಗ್ರಾಮಗಳಿಂದ ಕೆಲವು ಮಹಿಳೆಯರು ನಿಂಬು ಬಾಯಿಗೆ ಮಗುವನ್ನು ಹೆರಿಗೆಗೆ ಸಹಾಯ ಮಾಡಲು ಆಗಮಿಸಿದರು. ಸ್ಥಳೀಯರು ಹೆರಿಗೆಗೆ ವೈದ್ಯಕೀಯ ಸೌಲಭ್ಯಗಳ ಜೊತೆಗೆ ಇತರ ಸಹಾಯವನ್ನೂ ಮಾಡಿದರು.

ಲಾಕ್‌ಡೌನ್‌ಗೂ ಮುನ್ನ ತಮ್ಮ ಸಂಬಂಧಿಕರನ್ನು ಭೇಟಿ ಮಾಡುವುದರ ಜೊತೆಗೆ ತೀರ್ಥಯಾತ್ರೆಗೆ 98 ಮಂದಿ ಇತರ ನಾಗರಿಕರೊಂದಿಗೆ ಭಾರತಕ್ಕೆ ಬಂದ ಅವರು ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಮನೆಗೆ ಮರಳಲು ಸಾಧ್ಯವಾಗಲಿಲ್ಲ ಎಂದು ಬಲಮ್ ರಾಮ್ ಮಾಹಿತಿ ನೀಡಿದರು.

ಇದನ್ನೂ ಓದಿ:ಭಾರತದಲ್ಲಿ 8,306 ಕೋವಿಡ್ ಪ್ರಕರಣ ಪತ್ತೆ, 552 ದಿನಗಳಲ್ಲಿ ಸಕ್ರಿಯ ಪ್ರಕರಣ ಭಾರೀ ಇಳಿಕೆ

Advertisement

ಬಲಮ್ ರಾಮ್ ಹೊರತಾಗಿ, ಅದೇ ಟೆಂಟ್‌ನಲ್ಲಿ ವಾಸಿಸುತ್ತಿದ್ದ ಇನ್ನೊಬ್ಬ ಪಾಕಿಸ್ತಾನಿ ಪ್ರಜೆ ಲಗ್ಯಾ ರಾಮ್ ಅವರು 2020 ರಲ್ಲಿ ಜೋಧ್‌ಪುರದಲ್ಲಿ ಜನಿಸಿದ ಕಾರಣ ಅವರ ಮಗನಿಗೆ ‘ಭರತ್’ ಎಂದು ಹೆಸರಿಟ್ಟರು. ಲಗ್ಯಾ ಜೋಧ್‌ ಪುರದಲ್ಲಿರುವ ತನ್ನ ಸಹೋದರನನ್ನು ಭೇಟಿಯಾಗಲು ಬಂದರು ಆದರೆ ಅವರು ಗಡಿ ದಾಟಲು ಸಾಧ್ಯವಾಗದೆ ಗಡಿಯಲ್ಲಿ ಬಾಕಿಯಾಗಿದ್ದಾರೆ.

ಈ ಕುಟುಂಬಗಳು ಅಟ್ಟಾರಿ ಅಂತಾರಾಷ್ಟ್ರೀಯ ಚೆಕ್ ಪೋಸ್ಟ್ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಬೀಡುಬಿಟ್ಟಿವೆ. ಸ್ಥಳೀಯರು ಇವರಿಗೆ ಊಟ, ಔಷಧ, ಬಟ್ಟೆ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next