ವುಹಾನ್: ಮಾರಾಣಾಂತಿಕ ಕೊರೊನಾ ವೈರಸ್ ಗೆ ಚೀನಾ ಅಕ್ಷರಶಃ ನರಳಾಡುತ್ತಿದೆ. ಅದರಲ್ಲೂ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡ ಹುಬೈ ಪ್ರಾಂತ್ಯದ ವುಹಾನ್ ನಗರ ಖಾಲಿ ಖಾಲಿಯಾಗಿದೆ.
ವುಹಾನ್ ನಲ್ಲಿರುವ ಭಾರತೀಯರನ್ನು ವಿಶೇಷ ವಿಮಾನದ ಮೂಲಕ ವಾಪಾಸ್ಸು ಕರೆಸಲಾಗುತ್ತಿದೆ. ಏರ್ ಇಂಡಿಯಾ ಜಂಬೋ ವಿಮಾನದ ಮೂಲಕ ಸೂಕ್ತ ಪರೀಲನೆಯ ನಂತರ ಭಾರತೀಯರನ್ನು ಮರಳಿ ತವರು ನೆಲಕ್ಕೆ ಕರೆತರುವ ವ್ಯವಸ್ಥೆಯನ್ನು ಭಾರತ ಸರ್ಕಾರ ಮಾಡಿದೆ.
ತನ್ನ ಪ್ರಜೆಗಳನ್ನು ರಕ್ಷಿಸಲು ಭಾರತ ಸರ್ಕಾರ ಇಷ್ಟೆಲ್ಲಾ ವ್ಯವಸ್ಥೆ ಮಾಡುತ್ತಿದ್ದರೂ ಮತ್ತೊಂದು ಕಡೆ ಪಾಕಿಸ್ಥಾನ ತನ್ನ ಪ್ರಜೆಗಳನ್ನು ರಕ್ಷಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಪಾಕಿಸ್ಥಾನ ಮತ್ತು ಚೀನಾದ ಒಗ್ಗಟ್ಟು ನಿರೂಪಿಸುವ ಸಲುವಾಗಿ ತಾನು ತನ್ನ ಪ್ರಜೆಗಳನ್ನು ಮರಳಿ ಕರೆತರುವುದಿಲ್ಲ ಎಂದು ಇಮ್ರಾನ್ ಖಾನ್ ಸರಕಾರ ಹೇಳಿದೆ.
ಸದ್ಯ ವುಹಾನ್ ನಲ್ಲಿರುವ ಪಾಕಿಸ್ಥಾನಿ ವಿದ್ಯಾರ್ಥಿಗಳು ಜೀವ ಭಯದಿಂದ ಇದ್ದಾರೆ. ಭಾರತೀಯ ವಿದ್ಯಾರ್ಥಿಗಳು ನಿರಾತಂಕವಾಗಿ ತವರಿಗೆ ಮರಳುವುದನ್ನು ಕಂಡು ತಮ್ಮನ್ನೂ ಕರೆಸಲು ವ್ಯವಸ್ಥೆ ಮಾಡುವಂತೆ ಪಾಕ್ ಸರ್ಕಾರಕ್ಕೆ ಕೋರುತ್ತಿದ್ದಾರೆ. ಸದ್ಯ ಅಂತಹ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ” ಬಾಂಗ್ಲಾದೇಶಿಗಳನ್ನೂ ಕರೆಸಲಾಗುತ್ತಿದೆ. ಆದರೆ ನಾವು ಸತ್ತರೂ ನಮ್ಮನ್ನು ಪಾಕಿಸ್ಥಾನಕ್ಕೆ ಕರೆತರಯವ ವ್ಯವಸ್ಥೆ ಮಾಡುವುದಿಲ್ಲ ಎಂದು ಪಾಕಿಸ್ಥಾನ ಸರಕಾರ ಹೇಳಿದೆ. ನಾಚಿಕೆಯಾಗಬೇಕು ನಿಮಗೆ” ಎಂದು ವಿದ್ಯಾರ್ಥಿಯೊಬ್ಬರು ಅಳುತ್ತಾ ಹೇಳಿದ್ದಾರೆ.
ಚೀನಾದಲ್ಲಿ ಈ ಮಾರಣಾಂತಿಕ ವೈರಸ್ ಗೆ ಇದುವರೆಗೆ 300ಕ್ಕೂ ಹಚ್ಚು ಜನರು ಅಸುನೀಗಿದ್ದಾರೆ.