ಇಸ್ಲಾಮಾಬಾದ್/ಕಾಬೂಲ್: ಭಾರತದ ವಿರುದ್ಧ ಸದಾ ಸಂಚು ರೂಪಿಸುವ ಪಾಕಿಸ್ಥಾನದ ಸೈನಿಕರು ತಾಲಿಬಾನ್ ಉಗ್ರರಿಗೆ ಹೆದರಿ ಪರಾರಿಯಾದ ಘಟನೆ ನಡೆದಿದೆ.
ಅಫ್ಘಾನಿಸ್ಥಾನಕ್ಕೆ ಹೊಂದಿ ಕೊಂಡಂತೆ ಇರುವ ದುರ್ರಾಂಡ್ ಎಂಬಲ್ಲಿ ಪಾಕ್‌ನ ಸೈನಿಕರು ಮತ್ತು ಉಗ್ರರ ನಡುವೆ ಬಿರುಸಿನ ಗುಂಡಿನ ಚಕಮಕಿ ನಡೆದಿದೆ. ಉಗ್ರರು ನಡೆಸುತ್ತಿರುವ ಗುಂಡಿನ ಸುರಿ ಮಳೆಯಿಂದ ಅವರು ಕಂಗಾಲಾ ಗಿದ್ದಾರೆ.
ಅಂತಿಮವಾಗಿ ಅವರು ಇದ್ದ ಶಸ್ತ್ರಾಸ್ತ್ರಗಳನ್ನೂ ಎಸೆದು ಸೈನಿಕರು ಕಾಲಿಗೆ ಬುದ್ಧಿ ಹೇಳಿದ್ದಾರೆ. ಇನ್ನೊಂದೆಡೆ ಅಫ್ಘಾನಿಸ್ಥಾನದ ಸ್ಪಿನ್ ಬೋಲ್ಡಕ್ ಎಂಬಲ್ಲಿ ಪಾಕಿಸ್ಥಾನ ಸೇನೆ ನಡೆಸಿದ ಮೋರ್ಟರ್ ದಾಳಿಯಲ್ಲಿ ಕನಿಷ್ಠ ಐವರು ಅಸುನೀಗಿದ್ದಾರೆ. ಈ ಘಟನೆಯನ್ನು 17 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಮಾನ್ ಎಂಬಲ್ಲಿ ತಾಲಿಬಾನ್ ಉಗ್ರರು ಪಾಕಿಸ್ಥಾನದ 6 ಮಂದಿಯನ್ನು ಕೊಂದ ಬಳಿಕ ಈ ಘಟನೆ ನಡೆದಿದೆ. ಪಾಕಿಸ್ಥಾನ ಪ್ರಧಾನಿ ಶೆಹಬಾಜ್ ಷರೀಫ್ ಈ ಘಟನೆಯನ್ನು ಖಂಡಿಸಿದ್ದಾರೆ.
26/11 ಮಾದರಿ ದಾಳಿ: ಇದೇ ವೇಳೆ, ಅಫ್ಘಾನಿಸ್ಥಾನ ರಾಜಧಾನಿ ಕಾಬೂಲ್‌ನಲ್ಲಿ ಚೀನ ನಾಗರಿಕರು ತಂಗುವ ಹೊಟೇಲ್ ಮೇಲೆ ಉಗ್ರರು 26/11 ಮಾದರಿಯಲ್ಲಿ ದಾಳಿಗೆ ಯತ್ನಿಸಿದ್ದಾರೆ. ಈ ಸಂದರ್ಭ ದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆ ಸಿದ ತಾಲಿಬಾನ್ ಪಡೆ ಮೂವರು ದಾಳಿಕೋರರನ್ನು ಕೊಂದಿದ್ದಾರೆ.