Advertisement

ಪಾಕಿಸ್ಥಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ಅಸ್ಮಾ ನಿಧನ

08:50 AM Feb 12, 2018 | Team Udayavani |

ಲಾಹೋರ್‌: ಮಾನವ ಹಕ್ಕುಗಳ ಐಕಾನ್‌, ಅಸಹಾಯಕರ ಧ್ವನಿಯೆಂದೇ ಖ್ಯಾತಿ ಗಳಿಸಿದ್ದ ಪಾಕಿಸ್ಥಾನದ ಮೊದಲ ಮಾನವ ಹಕ್ಕುಗಳ ಹೋರಾಟಗಾರ್ತಿ, ವಕೀಲೆ ಅಸ್ಮಾ ಜಹಾಂಗೀರ್‌ (66) ರವಿವಾರ ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಬೆಳಗ್ಗೆ ಹೃದಯಾಘಾತಕ್ಕೆ ಒಳಗಾದ ಅವರನ್ನು ಲಾಹೋರ್‌ನ ಲತೀಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಸಾಮಾಜಿಕ ಕಾರ್ಯಕರ್ತೆಯಾಗಿಯೂ ಗುರುತಿಸಿಕೊಂಡಿದ್ದ ಅವರು, ರಾಜಕೀಯವಾಗಿ ಶಕ್ತಿಶಾಲಿಯಾಗಿರುವ ಪಾಕಿಸ್ಥಾನದ ಸೇನೆಯ ಕಠಿನ ವಿಮರ್ಶಕರೂ ಆಗಿದ್ದರು. ತಮಗನಿಸಿದ್ದನ್ನು ನೇರವಾಗಿ ಹೇಳುವ ಪ್ರವೃತ್ತಿಯವರಾಗಿದ್ದ ಅಸ್ಮಾ, ಮಾನವ ಹಕ್ಕುಗಳ ಸಂರಕ್ಷಣೆಗಾಗಿ ತಮ್ಮ ವೃತ್ತಿ ಜೀವನ ಪೂರ್ತಿ ಹೋರಾಡಿದ್ದರು. ಪಾಕಿಸ್ಥಾನ ಸುಪ್ರೀಂ ಕೋರ್ಟ್‌ನ ಬಾರ್‌ ಅಸೋಸಿಯೇಶನ್‌ನ ಅಧ್ಯಕ್ಷೆಯೂ ಆಗಿದ್ದ ಅವರು, ಈ ಸ್ಥಾನ ಅಲಂಕರಿಸಿದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

Advertisement

ಪ್ರಜಾಪ್ರಭು ತ್ವವನ್ನು ದೃಢವಾಗಿ ನಂಬಿದ್ದ ಅವರನ್ನು ಧ್ವನಿಯಿಲ್ಲದವರ ಧ್ವನಿ ಎಂದೇ ಬಣ್ಣಿಸಲಾಗುತ್ತಿತ್ತು. ಇವರ ನಿಧನಕ್ಕೆ ಪಾಕ್‌ ಅಧ್ಯಕ್ಷ ಮಮೂ°ನ್‌ ಹುಸೇನ್‌, ಪ್ರಧಾನಿ ಶಾಹಿದ್‌ ಖಖಾನ್‌ ಅಬ್ಟಾಸಿ ಸಹಿತ ಅನೇಕರು ಸಂತಾಪ ಸೂಚಿಸಿದ್ದಾರೆ. ಭಾರತದಲ್ಲೂ ಬಾಲಿವುಡ್‌ ಗಣ್ಯರು, ಹೋರಾಟಗಾರರು ಸಹಿತ ಅನೇಕ ಗಣ್ಯರು ಅಸ್ಮಾರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next