ಗಾಂಧಿನಗರ(ಗುಜರಾತ್): ಕಳೆದ ಐದು ವರ್ಷಗಳಿಂದ ಗುಜರಾತ್ ನಲ್ಲಿ ನಿರಾಶ್ರಿತರಾಗಿ ವಾಸವಾಗಿದ್ದ ಸಾವಿರಾರು ಪಾಕಿಸ್ತಾನಿ ಹಿಂದೂಗಳಿಗೆ ಭಾರತದ ಪೌರತ್ವ ನೀಡಲಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಾಕ್ ನ ನಿರಾಶ್ರಿತ ಹಿಂದೂಗಳು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:100 ಕೇಸ್‌ಗಳಲ್ಲಿ ಭಾಗಿಯಾಗಿದ್ದ ಎಸ್ಕೇಪ್ ಕಾರ್ತಿಕ್ ಮತ್ತೆ ಅಂದರ್
2016ರಿಂದ ಪಾಕಿಸ್ತಾನದಿಂದ ಗುಜರಾತ್ ಗೆ ವಲಸೆ ಬಂದ 1,032 ಮಂದಿ ಹಿಂದೂಗಳಿಗೆ ಅಹಮದಾಬಾದ್ ಕಲೆಕ್ಟರ್ ಕಚೇರಿಯಲ್ಲಿ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಮಾಧ್ಯಮದ ವರದಿ ವಿವರಿಸಿದೆ.
ಗುಜರಾತ್ ಚುನಾವಣಾ ಫಲಿತಾಂಶದ ಮೇಲೆ ನಿರಾಶ್ರಿತ ಹಿಂದೂಗಳ ಮತಗಳ ಪ್ರಭಾವದ ಬಗ್ಗೆ ಚರ್ಚೆ, ವಾದ-ಪ್ರತಿವಾದಕ್ಕೆ ಎಡೆಮಾಡಿಕೊಟ್ಟಿರುವುದಾಗಿ ವರದಿ ಹೇಳಿದೆ. ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು, ಹಿಂಸಾಚಾರ, ಕೊಲೆ, ಅತ್ಯಾಚಾರದಿಂದ ನಲುಗಿ ಹೋಗಿದ್ದ ಹಿಂದೂಗಳ ಕುಟುಂಬ ಪಾಕ್ ನಿಂದ ಪಲಾಯನಗೈದು ಭಾರತದಲ್ಲಿ ಆಶ್ರಯ ನೀಡುವಂತೆ ಕೋರಿಕೊಂಡಿದ್ದರು.
ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯದವರಿಗೆ ಭಾರತೀಯ ಪೌರತ್ವವನ್ನು ನೀಡಬಹುದಾಗಿದೆ. ಒಂದು ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗುಪ್ತಚರ ಇಲಾಖೆ ಅನುಮತಿ ನೀಡುವ ಪ್ರಕ್ರಿಯೆ ಅಂತಿಮಗೊಂಡ ನಂತರವಷ್ಟೇ ಪೌರತ್ವ ನೀಡಬಹುದಾಗಿದೆ ಎಂದು ವರದಿ ವಿವರಿಸಿದೆ.