Advertisement

Pakistan ವನಿತಾ ಕ್ರಿಕೆಟ್‌; ಫಾತಿಮಾ ಸನಾ ನೂತನ ನಾಯಕಿ

12:48 AM Aug 26, 2024 | Team Udayavani |

ಕರಾಚಿ: ನಿದಾ ದರ್‌ ಅವರನ್ನು ಪಾಕಿಸ್ಥಾನ ವನಿತಾ ಕ್ರಿಕೆಟ್‌ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಇವರ ಬದಲು 22 ವರ್ಷದ ಫಾತಿಮಾ ಸನಾ ಆಯ್ಕೆಯಾಗಿದ್ದಾರೆ. ಮುಂಬರುವ ವನಿತಾ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಫಾತಿಮಾ ಪಾಕ್‌ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ನಿದಾ ದರ್‌ ಕಳೆದ ಇಂಗ್ಲೆಂಡ್‌ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗಳಲ್ಲಿ ನಾಯಕಿಯಾಗಿ ಘೋರ ವೈಫ‌ಲ್ಯ ಕಂಡಿದ್ದರು. ಟಿ20 ಏಷ್ಯಾ ಕಪ್‌ನಲ್ಲೂ ಪಾಕ್‌ ತಂಡ ಸೆಮಿಫೈನಲ್‌ ಹಂತದಲ್ಲಿ ಮುಗ್ಗರಿಸಿತ್ತು. ಈ ಕಾರಣಕ್ಕಾಗಿ ನಿದಾ ದರ್‌ ಅವರನ್ನು ನಾಯಕತ್ವದ ಜವಾಬ್ದಾರಿಯಿಂದ ಮುಕ್ತಗೊಳಿಸಲಾಯಿತು. ಆದರೆ ಅವರು ವಿಶ್ವಕಪ್‌ ತಂಡದಲ್ಲಿ ಮುಂದುವರಿಯಲಿದ್ದಾರೆ. ಬೌಲಿಂಗ್‌ ಆಲ್‌ರೌಂಡರ್‌ ಆಗಿರುವ ಫಾತಿಮಾ ಸನಾ 41 ಏಕದಿನ ಹಾಗೂ 40 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಬದಲಿ ನಾಯಕಿಯಾಗಿಯೂ ಕರ್ತವ್ಯ ನಿಭಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next