Advertisement

ಪಾಕಿಸ್ಥಾನ ಗೆಲುವಿಗೆ 317 ರನ್‌ ಗುರಿ

06:50 AM Oct 10, 2017 | |

ದುಬಾೖ: ಪ್ರವಾಸಿ ಶ್ರೀಲಂಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ಥಾನ ಗೆಲ್ಲಲು 317 ರನ್‌ ಗಳಿಸುವ ಕಠಿನ ಗುರಿ ಪಡೆದಿದೆ.

Advertisement

ಇದಕ್ಕುತ್ತರವಾಗಿ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಪಾಕಿಸ್ಥಾನ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ ಕಳೆದುಕೊಂಡಿದ್ದು 123 ರನ್‌ ಗಳಿಸಿದೆ. ಗೆಲ್ಲಲು ಇನ್ನೂ 194 ರನ್‌ ಗಳಿಸಬೇಕಾಗಿದೆ. ಆರಂಭಿಕ ಕುಸಿತ ಕಂಡ ಪಾಕಿಸ್ಥಾನ 52 ರನ್‌ ಗಳಿಸುವಷ್ಟರಲ್ಲಿ 5 ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆದರೆ ಅಸದ್‌ ಶಫೀಕ್‌ ಮತ್ತು ಸಫ‌ìರಾಜ್‌ ಅಹ್ಮದ್‌ ತಾಳ್ಮೆಯ ಆಟವಾಡಿ ತಂಡವನ್ನು ರಕ್ಷಿಸುವ ಭಾರ ಹೊತ್ತಿದ್ದಾರೆ. ಮುರಿಯದ ಆರನೇ ವಿಕೆಟಿಗೆ ಈಗಾಗಲೇ 71 ರನ್‌ ಪೇರಿಸಿರುವ ಅವರು ತಂಡವನ್ನು ಆಧರಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಈ ಮೊದಲು  ಶ್ರೀಲಂಕಾದ 482 ರನ್ನಿಗೆ ಉತ್ತರವಾಗಿ ಪಾಕಿಸ್ಥಾನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 262 ರನ್‌ ಗಳಿಸಿ ಆಲೌಟಾಯಿತು. ಇದರಿಂದ ಶ್ರೀಲಂಕಾ 220 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆಯಿತು. ಆದರೆ ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ನಾಟಕೀಯ ಕುಸಿತ ಕಂಡಿತು. ವಹಾಬ್‌ ರಿಯಾಜ್‌ ಮತ್ತು ಹ್ಯಾರಿಸ್‌ ಸೊಹೈಲ್‌ ದಾಳಿಗೆ ತತ್ತರಿಸಿದ ಶ್ರೀಲಂಕಾ 96 ರನ್ನಿಗೆ ಸರ್ವಪತನ ಕಂಡಿತು. ರಿಯಾಜ್‌ 41 ರನ್ನಿಗೆ 4 ಮತ್ತು ಸೊಹೈಲ್‌ 1 ರನ್ನಿಗೆ 3 ವಿಕೆಟ್‌ ಪಡೆದರು.ಸರಣಿಯ ಮೊದಲ ಪಂದ್ಯ ಗೆದ್ದಿರುವ ಶ್ರೀಲಂಕಾ ಈ ಪಂದ್ಯದಲ್ಲೂ ಗೆಲ್ಲುವ ಉತ್ಸಾಹದಲ್ಲಿದೆ. ಒಂದು ವೇಳೆ ಗೆದ್ದರೆ ಎರಡು ಪಂದ್ಯಗಳ ಸರಣಿಯನ್ನು ಕ್ಲೀನ್‌ಸಿÌàಪ್‌ ಮೂಲಕ ತನ್ನದಾಗಿಸಿಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next