ಕರಾಚಿ: ಮಧ್ಯಮ ಕ್ರಮಾಂಕದ ಬ್ಯಾಟರ್ ಸೌದ್ ಶಕೀಲ್ ಬಾರಿಸಿದ ಚೊಚ್ಚಲ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ಎದುರಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ಥಾನ ಸಮಬಲದ ಹೋರಾಟ ನಡೆಸಿದೆ.
ನ್ಯೂಜಿಲ್ಯಾಂಡ್‌ನ 449 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡುತ್ತಿರುವ ಪಾಕಿಸ್ಥಾನ, 3ನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 407 ರನ್ ಮಾಡಿದೆ. ಶಕೀಲ್ 124 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 336 ಎಸೆತಗಳನ್ನು ನಿಭಾಯಿಸಿದ್ದು, 17 ಬೌಂಡರಿ ಹೊಡೆದಿದ್ದಾರೆ.
ವಿಕೆಟ್ ಕೀಪರ್ ಸಫìರಾಜ್ ಅಹ್ಮದ್ 78 ರನ್, ಆಘಾ ಸಲ್ಮಾನ್ 41 ರನ್ ಕೊಡುಗೆ ಸಲ್ಲಿಸಿದರು. ಶಕೀಲ್ ಮತ್ತು ಸಫìರಾಜ್ 5ನೇ ವಿಕೆಟಿಗೆ ಭರ್ತಿ 150 ರನ್ ಒಟ್ಟುಗೂಡಿಸಿದರು.
ದಿನದಾಟದ ಕೊನೆಯ ಹಂತದಲ್ಲಿ ನ್ಯೂಜಿಲ್ಯಾಂಡ್ ಬೌಲರ್ ಮೇಲುಗೈ ಸಾಧಿಸಿದರು. ಐಶ್ ಸೋಧಿ ದಿನದ ಅಂತಿಮ ಓವರ್‌ನ ಸತತ 2 ಎಸೆತಗಳಲ್ಲಿ 2 ವಿಕೆಟ್ ಕೆಡವಿದರು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-449 (ಕಾನ್ವೇ 122, ಲ್ಯಾಥಂ 71, ಹೆನ್ರಿ ಔಟಾಗದೆ 68, ಅಬ್ರಾರ್ ಅಹ್ಮದ್ 149ಕ್ಕೆ 4, ಆಘಾ ಸಲ್ಮಾನ್ 75ಕ್ಕೆ 3, ನಸೀಮ್ ಶಾ 71ಕ್ಕೆ 3). ಪಾಕಿಸ್ಥಾನ-9 ವಿಕೆಟಿಗೆ 407 (ಶಕೀಲ್ ಬ್ಯಾಟಿಂಗ್ 124, ಇಮಾಮ್ 83, ಸಫìರಾಜ್ 78, ಆಘಾ ಸಲ್ಮಾನ್ 41, ಅಜಾಜ್ ಪಟೇಲ್ 88ಕ್ಕೆ 3, ಸೋಧಿ 94ಕ್ಕೆ 2).