Advertisement
ಮೊದಲ ಟಿ20 ವಿಶ್ವಕಪ್ ನಡೆದದ್ದು 2007ರಲ್ಲಿ. ಆತಿಥ್ಯ ದಕ್ಷಿಣ ಆಫ್ರಿಕಾದ್ದಾಗಿತ್ತು. ಅಂದಿನ ಧೋನಿ ನಾಯಕತ್ವದ ಯುವ ಭಾರತೀಯ ತಂಡ ಮೊದಲ ಪ್ರಶಸ್ತಿಯನ್ನೇ ಗೆದ್ದು ಇತಿಹಾಸ ನಿರ್ಮಿಸಿತ್ತು.
ಕೂಟದಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿದ್ದವು. ಭಾರತ “ಡಿ’ ಗುಂಪಿನಲ್ಲಿತ್ತು. ಇಲ್ಲಿ ಪಾಕಿಸ್ಥಾನದ ವಿರುದ್ಧ ಗೆಲುವು ಸಾಧಿಸಿ, ಸೂಪರ್-8 ಹಂತಕ್ಕೇರಿತು. ಇಲ್ಲಿ “ಇ’ ಗುಂಪಿನಲ್ಲಿ ಸ್ಥಾನ ಪಡೆಯಿತು. ಮೂರು ಪಂದ್ಯಗಳನ್ನಾಡಿ ಎರಡರಲ್ಲಿ ಜಯ ಸಾಧಿಸಿತು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ ವನ್ನು ಎದುರಿಸಿತು. ಯುವರಾಜ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ (30 ಎಸೆತ, 70 ರನ್) ನೆರವಿನಿಂದ ಆಸ್ಟ್ರೇಲಿಯವನ್ನು ಸೋಲಿಸಿ ಫೈನಲ್‌ಗೇರಿತು.
Related Articles
ಇದು ಟಿ20 ವಿಶ್ವಕಪ್ ಇತಿಹಾಸದ ಮೊದಲ ಹಾಗೂ ಅಷ್ಟೇ ರೋಚಕ ಫೈನಲ್. ಭಾರತ-ಪಾಕಿಸ್ಥಾನ ಅಂತಿಮ ಪಂದ್ಯದಲ್ಲಿ ಎದುರಾದದ್ದೂ ಇದಕ್ಕೊಂದು ಕಾರಣ. ಇದಕ್ಕೆ ಸಾಕ್ಷಿಯಾದದ್ದು ಜೊಹಾನ್ಸ್‌ಬರ್ಗ್‌ನ ವಾಂಡರರ್ ಅಂಗಳ.
Advertisement
ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಪಾಕ್ 19.3 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟಾಯಿತು.
ಪಾಕ್‌ಗೆ ಕೊನೆಯ ಓವರ್‌ನಲ್ಲಿ 13 ರನ್ ಬೇಕಿತ್ತು. ನಾಯಕ ಮಿಸ್ಬಾ ಉಲ್ ಹಕ್ ಕ್ರೀಸ್‌ನಲ್ಲಿದ್ದರು. ಜೋಗಿಂದರ್ ಶರ್ಮ ಎಸೆದ 2ನೇ ಎಸೆತದಲ್ಲಿ ಮಿಸ್ಬಾ ಸಿಕ್ಸರ್ ಬಾರಿಸಿದರು. ಮುಂದಿನ ಎಸೆತದಲ್ಲೂ ಸಿಕ್ಸರ್ ಬಾರಿಸಲು ಹೋಗಿ ಶ್ರೀಶಾಂತ್‌ಗೆ ಕ್ಯಾಚ್ ನೀಡಿದರು. ಭಾರತ 5 ರನ್ ಅಂತರದಿಂದ ಜಯಿಸಿತು.
ಇದನ್ನೂ ಓದಿ:ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಮೊದಲ ಪಂದ್ಯ: ಒಮಾನ್‌ಗೆ 10 ವಿಕೆಟ್ ಭರ್ಜರಿ ಗೆಲುವು
ಯುವಿ 6 ಸಿಕ್ಸರ್ಇಡೀ ಕೂಟದಲ್ಲಿ ಮಿಂಚಿದ್ದು ಯುವರಾಜ್ ಸಿಂಗ್. ಅವರು ಇಂಗ್ಲೆಂಡ್ ವಿರುದ್ಧ ಸೂಪರ್-8 ಹಂತದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ ಸತತ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದರು. ಮುಂದೆ ಆಸ್ಟ್ರೇಲಿಯ ವಿರುದ್ಧ ಸೆಮಿಫೈನಲ್‌ನಲ್ಲಿ ಬರೀ 30 ಎಸೆತಗಳಲ್ಲಿ 70 ರನ್ ಚಚ್ಚಿದರು. ಸಂಕ್ಷಿಪ್ತ ಸ್ಕೋರ್: ಭಾರತ- 5 ವಿಕೆಟಿಗೆ 157 (ಗೌತಮ್ ಗಂಭೀರ್ 75, ರೋಹಿತ್ ಶರ್ಮ ಔಟಾ ಗದೆ 30, ಉಮರ್ ಗುಲ್ 28ಕ್ಕೆ 3). ಪಾಕಿಸ್ಥಾನ 19.3 ಓವರ್‌ಗಳಲ್ಲಿ 152 (ಮಿಸ್ಬಾ 43, ಇರ್ಫಾನ್ ಪಠಾಣ್ 16ಕ್ಕೆ 3, ಆರ್‌ಪಿ ಸಿಂಗ್ 26ಕ್ಕೆ 3, ಜೋಗಿಂದರ್ 20ಕ್ಕೆ 2).
ಪಂದ್ಯಶ್ರೇಷ್ಠ: ಇರ್ಫಾನ್ ಪಠಾಣ್.