Advertisement

ಮಾನವ ಸಹಿತ ಅಂತರಿಕ್ಷ ಯಾನ: ಭಾರತಕ್ಕೆ ಪಾಕ್‌ ಸವಾಲು

09:25 AM Oct 26, 2018 | Karthik A |

ಹೊಸದಿಲ್ಲಿ: 2022ರಲ್ಲಿ ಮಾನವ ಸಹಿತ ಅಂತರಿಕ್ಷ ಪ್ರಯಾಣವೊಂದಕ್ಕೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಸಿದ್ಧತೆ ಕೈಗೊಂಡಿರುವ ನಡುವೆಯೇ, ಪಾಕಿಸ್ಥಾನ ಸಹ ಅದೇ ವರ್ಷ ತನ್ನ ಒಬ್ಬ ಖಗೋಳ ವಿಜ್ಞಾನಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ತೀರ್ಮಾನಿಸಿದೆ. ಈ ಕುರಿತಂತೆ ಸಿದ್ಧಪಡಿಸಲಾಗಿರುವ ಪ್ರಸ್ತಾವನೆಗೆ, ಗುರುವಾರ, ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಈ ಯೋಜನೆ ಚೀನದ ಸಹಕಾರದೊಂದಿಗೆ ಅನುಷ್ಠಾನಕ್ಕೆ ಬರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next