Advertisement

ಪಾಕ್‌ನಲ್ಲಿ ವಿಂಡೀಸ್‌ ಟಿ20 ಸರಣಿ

06:00 AM Mar 13, 2018 | Team Udayavani |

ಕರಾಚಿ: ಪಾಕಿಸ್ಥಾನದಲ್ಲಿ 3 ಟಿ20 ಪಂದ್ಯಗಳ ಸರಣಿ ಆಡಲು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಒಪ್ಪಿಗೆ ನೀಡಿದೆ ಎಂದು ಪಾಕಿಸ್ಥಾನ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ನಜಮ್‌ ಸೇಥಿ ಟ್ವೀಟ್‌ ಮಾಡಿದ್ದಾರೆ. ಎ. 1, 2 ಮತ್ತು 4 ರಂದು ಉಭಯ ರಾಷ್ಟ್ರಗಳ ನಡುವೆ ಟಿ20 ಪಂದ್ಯಗಳು ನಡೆಯಲಿವೆ. ಇದು ಪಾಕಿಸ್ಥಾನದಲ್ಲಿ ಕ್ರಿಕೆಟ್‌ ಪುನರಾರಂಭಕ್ಕೆ ಮತ್ತೂಂದು ವೇದಿಕೆಯಾಗಲಿದೆ.

Advertisement

2009ರಲ್ಲಿ ಕರಾಚಿಯಲ್ಲಿ ಶ್ರೀಲಂಕಾ ತಂಡದ ಆಟಗಾರರಿದ್ದ ಬಸ್‌ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ಘಟನೆಯ ಬಳಿಕ ಪಾಕ್‌ ಪ್ರವಾಸಕ್ಕೆ ತರಳಲು ಎಲ್ಲ ರಾಷ್ಟ್ರಗಳು ಹಿಂದೇಟು ಹಾಕುತ್ತ ಬಂದಿದ್ದವು. ಕಳೆದ ವರ್ಷ ಜಿಂಬಾಬ್ವೆ, ಶ್ರೀಲಂಕಾ ತಂಡಗಳು ಪ್ರವಾಸಕ್ಕೆ ಬಂದಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next