ಇಸ್ಲಾಮಾಬಾದ್: ಜಗತ್ತಿನ ಇತರೆ ರಾಷ್ಟ್ರಗಳಂತೆಯೇ ಪಾಕಿ ಸ್ತಾನ ಕೂಡ ಕೋವಿಡ್ ವೈರಸ್‌ನಿಂದ ಬಳಲುತ್ತಿದೆ. ಆದರೂ ಅದರ ಕಪಟತನದ ಬುದ್ಧಿ ಮಾತ್ರ ಕಡಿಮೆಯಾಗಿಲ್ಲ. ಪಾಕಿಸ್ಥಾನವು ತನ್ನ ಗಡಿಯಲ್ಲಿರುವ 14 ಲಾಂಚ್ ಪ್ಯಾಡ್‌ಗಳ ಮುಖಾಂತರ ಉಗ್ರರನ್ನು ಕಾಶ್ಮೀರದೊಳಕ್ಕೆ ನುಸುಳಿಸುವ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿದೆ.
ಪಾಕ್ ಬೆಂಬಲಿತ ಉಗ್ರ ಸಂಘಟನೆಗಳ ಸುಮಾರು 450 ಉಗ್ರಗಾಮಿಗಳು ದೇಶದೊಳಕ್ಕೆ ನುಸುಳಲು ಅಣಿಯಾಗಿದ್ದಾರೆ. ಈ ಬಗ್ಗೆ ಗುಪ್ತಚರ ಮೂಲಗಳನ್ನು ಉಲ್ಲೇಖೀಸಿ “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಒಂದು ವಾರದÇÉೇ ಪಾಕಿಸ್ಥಾನವು ಲಾಂಚ್‌ಪ್ಯಾಡ್‌ನಲ್ಲಿದ್ದ ಉಗ್ರರ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿದೆ. ಆರಂಭದಲ್ಲಿ ಅಲ್ಲಿ 230 ಭಯೋತ್ಪಾದಕರಿದ್ದಾರೆ. ಅನಂತರದ 2-3 ವಾರಗಳಲ್ಲಿ ಪರಿಸ್ಥಿತಿ ಬದಲಾಗಿದ್ದು ಈಗ 450ರಷ್ಟು ಉಗ್ರರು ಅಲ್ಲಿ ಸೇರಿದ್ದಾರೆ ಎಂಬುದನ್ನು ಖಚಿತಪಡಿಸಿ ಕೊಳ್ಳಲಾಗಿದೆ.
ಈ ಪೈಕಿ 244 ಮಂದಿ ಲಷ್ಕರ್ ಉಗ್ರರಾದರೆ, 129 ಮಂದಿ ಜೈಶ್ ಮತ್ತು 60 ಮಂದಿ ಹಿಜ್ಬುಲ್ ಮುಜಾಹಿದೀನ್ ಗೆ ಸೇರಿದವರು. ಇನ್ನುಳಿದವರು ಅಲ್‌ಬದ್ರ್ ಎಂಬ ಸಂಘಟನೆಯ ಸದಸ್ಯರು ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ.
ಪಾಕ್ ಗಡಿಯಲ್ಲಿ 16 ಉಗ್ರರ ನೆಲೆಗಳಿದ್ದು, ಅದರಲ್ಲಿ 11 ಪಾಕ್ ಆಕ್ರಮಿತ ಕಾಶ್ಮೀರದಲ್ಲಿ, 2 ಪಂಜಾಬ್ ಪ್ರಾಂತ್ಯದಲ್ಲಿ ಮತ್ತು ಮೂರು ಖೈಬರ್ -ಪಖು¤ಂಖ್ವಾ ಪ್ರಾಂತ್ಯದಲ್ಲಿದೆ. 7 ಶಿಬಿರಗಳು ಹೈಬ್ರಿಡ್ ಕ್ಯಾಂಪ್ ಗಳಾಗಿದ್ದು, ಇಲ್ಲಿ ವಿವಿಧ ಉಗ್ರ ಸಂಘಟನೆಗಳಿಂದ ಆಯ್ಕೆ ಮಾಡಿ ತರಬೇತಿ ನೀಡಲಾದ ಉಗ್ರರಿ¨ªಾರೆ ಎಂದು ಹೇಳಲಾಗಿದೆ.