Advertisement

ಪಾಕ್‌ ಪುಂಡ ದೇಶವೆಂದು ಪರಿಗಣಿಸಿ: ಮಾಜಿ ಅಮೆರಿಕ ಸೆನೆಟರ್‌ ಪ್ರೆಸ್ಲರ್

04:01 PM Jul 21, 2017 | Team Udayavani |

ವಾಷಿಂಗ್ಟನ್‌ : “ಉತ್ತರ ಕೊರಿಯದಂತೆ ಪಾಕಿಸ್ಥಾನನ್ನು ಒಂದು ಪುಂಡ ದೇಶವೆಂದು ಅಮೆರಿಕ ಪರಿಗಣಿಸಬೇಕು ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತದೊಂದಿಗೆ ಮಹಾ ಮೈತ್ರಿಕೂಟವನ್ನು ರೂಪಿಸಬೇಕು’ ಎಂದು ಅಮೆರಿಕದ ಮಾಜಿ ರಿಪಬ್ಲಿಕನ್‌ ಸೆನೆಟರ್‌ ಲ್ಯಾರಿ ಪ್ರೆಸ್ಲರ್  ಹೇಳಿದ್ದಾರೆ. 

Advertisement

“ಭಯೋತ್ಪಾದನೆ ವಿರುದ್ಧ ತಾನು ಹೋರಾಡುವುದಾಗಿ ಹೇಳಿ ಅಮೆರಿಕದ ನೆರವು ಪಡೆದು ಅಮೆರಿಕಕ್ಕೇ ಮೋಸ ಮಾಡಿದ್ದಲ್ಲದೇ ಅಮೆರಿಕವನ್ನು ಪಾಕಿಸ್ಥಾನ ಬ್ಲಾಕ್‌ ಮೇಲ್‌ ಮಾಡಿದೆ. ಅಮೆರಿಕಕ್ಕೆ ಮಾರಕಪ್ರಾಯವೆನಿಸಿರುವ ಉಗ್ರರನ್ನು ಪಾಕಿಸ್ಥಾನ ಪೋಷಿಸಿ ಆಸರೆ, ಪ್ರೋತ್ಸಾಹ ನೀಡಿದೆ. ಆದುದರಿಂದ ಪಾಕಿಸ್ಥಾನವನ್ನು ಅಮೆರಿಕ ಪುಂಡ ದೇಶವೆಂದು ಪರಿಗಣಿಸಬೇಕು’ ಎಂದು ಪ್ರೆಸ್ಲರ್  ಹೇಳಿದರು. 

“ಪಾಕಿಸ್ಥಾನ ಭಯೋತ್ಪಾದನೆಯ ವಿಷಯದಲ್ಲಿ ತನ್ನ ನೀತಿಯನ್ನು ಬದಲಾಯಿಸುವ ವರೆಗೂ ಅದನ್ನು ಭಯೋತ್ಪಾದಕ ದೇಶವೆಂದೇ ಅಮೆರಿಕ ಘೋಷಿಸಬೇಕು. ಈ ವಿಷಯದಲ್ಲಿ ನಾನು ಮಾತ್ರವಲ್ಲದೆ ಇತರ ಅನೇಕ ಪ್ರಮುಖ ವಿದೇಶಾಂಗ ನೀತಿ ಪರಿಣತರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿಜಕ್ಕಾದರೆ 1992ರಷ್ಟು ಹಿಂದೆಯೇ ಮೊದಲ ಬುಶ್‌ ಆಡಳಿತೆ ಪಾಕಿಸ್ಥಾನವನ್ನು ಒಂದು ಭಯೋತ್ಪಾದಕ ದೇಶವೆಂದು ಘೋಷಿಸುವುದನ್ನು ಗಂಭೀರವಾಗಿ ಚಿಂತಿಸುತ್ತಿತ್ತು’ ಎಂದು ಪ್ರೆಸ್ಲರ್  ಹೇಳಿದರು. 

ದಕ್ಷಿಣ ಡಕೋಟದ ಮಾಜಿ ಅಮೆರಿಕನ್‌ ಸೆನೆಟರ್‌ ಆಗಿರುವ 75ರ ಹರೆಯದ ಪ್ರಸ್ಲರ್‌ ಅವರು ‘Neighbours in Arms: An American Senator’s Quest for Disarmament in a Nuclear Subcontinent’ ಎಂಬ ತಮ್ಮ ಹೊಸ ಪುಸ್ತಕದಲ್ಲಿ ಪಾಕಿಸ್ಥಾನ ಕುರಿತಾದ ತಮ್ಮ ಖಚಿತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next