Advertisement

ಭಾರತ ದಾಳಿ ನಡೆಸುವುದು ಎಂಬ ಭೀತಿಯಿಂದ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡಿದ್ದ ಪಾಕ್!

01:21 PM Oct 29, 2020 | keerthan |

ಹೊಸದಿಲ್ಲಿ: ಪ್ರತಿಯೊಬ್ಬ ಭಾರತೀಯರಿಗೂ ಕಳೆದ ವರ್ಷದ ನಡೆದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪ್ರಕರಣ ನೆನಪಿರಬಹುದು. ವೈಮಾನಿಕ ದಾಳಿಯ ವೇಳೆ ಪಾಕಿಸ್ಥಾನ ಭೂ ಭಾಗ ಸೇರಿದ್ದ ಅಭಿನಂದನ್ ವರ್ಧಮಾನ್ ರನ್ನು ಪಾಕಿಸ್ಥಾನ 60 ಗಂಟೆಗಳ ಒಳಗೆ ಭಾರತಕ್ಕೆ ಮರಳಿ ಕಳುಹಿಸಿತ್ತು. ಆದರೆ ವಿಂಗ್ ಕಮಾಂಡರ್ ಬಿಡುಗಡೆಯ ಹಿಂದಿನ ಕಥೆ ಈಗ ಬಯಲಾಗಿದೆ.

Advertisement

ಒಂದು ವೇಳೆ ಪಾಕಿಸ್ಥಾನ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ಬಿಡುಗಡೆ ಮಾಡದೇ ಇದ್ದರೆ ಭಾರತವು ಅದರ ಮೇಲೆ ದಾಳಿ ನಡೆಸಬಹುದು ಎಂಬ ಭೀತಿಯಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು ಎಂದು ಪಿಎಂಎಲ್​-ಎನ್​ ನಾಯಕ ಅಯಾಝ್ ಸಾದಿಕ್​ ಹೇಳಿಕೊಂಡಿದ್ದಾರೆ.

ಪಾಕ್ ಸಂಸತ್ತಿನಲ್ಲಿ ಬುಧವಾರ ನಡೆದ ಚರ್ಚೆಯಲ್ಲಿ ಇಮ್ರಾನ್ ಖಾನ್ ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡ ಪಿಎಂಎಲ್​-ಎನ್​ ನಾಯಕ ಅಯಾಝ್ ಸಾದಿಕ್​, “ವರ್ಧಮಾನ್ ಅವರನ್ನು ಕಸ್ಟಡಿಗೆ ಪಡೆದ ನಂತರ ಉನ್ನತ ಮಟ್ಟದ ಸಭೆ ನಡೆಸಲಾಗಿತ್ತು. ಶಾ ಮಹಮೂದ್ ಖುರೇಷಿ ಸಭೆಯಲ್ಲಿದ್ದರು. ಇಮ್ರಾನ್ ಖಾನ್ ಹಾಜರಾಗಲು ನಿರಾಕರಿಸಿದ್ದರು. ನನಗಿನ್ನೂ ನೆನಪಿದೆ. ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಕೋಣೆಗೆ ಬಂದರು, ಅವರ ಕಾಲುಗಳು ನಡುಗುತ್ತಿದ್ದವು, ಬೆವರುತ್ತಿದ್ದರು. ಆಗ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು, ನಾವು ಅಭಿನಂದನ್ ವರ್ಧಮಾನ್ ರನ್ನು ಬಿಡುಗಡೆ ಮಾಡದೆ ಇದ್ದರೆ, ರಾತ್ರಿ 9 ಗಂಟೆಗೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಲಿದೆ, ಅವರನ್ನು ಬಿಟ್ಟು ಬಿಡಿ ಎಂದಿದ್ದರು” ಎಂದು ಹೇಳಿದ್ದಾರೆ.

ಅಭಿನಂದನ್ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ಬೆಂಬಲಿಸಿವೆ. ಆದರೆ ” ಮತ್ತಷ್ಟು ಬೆಂಬಲಿಸಲು ಸಾಧ್ಯವಾಗುವುದಿಲ್ಲ” ಎಂದು ಸಾದಿಕ್ ಹೇಳಿದ್ದಾರೆ ಎಂದು ದುನ್ಯಾ ನ್ಯೂಸ್ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next