Advertisement

ಅಹ್ಮದಾಬಾದ್‌ನಲ್ಲಿ ಆಡಲು ಪಾಕ್‌ ನಕಾರ- ವಿಶ್ವಕಪ್‌ ವೇಳಾಪಟ್ಟಿ ವಿಳಂಬ?

11:36 PM Jun 15, 2023 | Team Udayavani |

ಹೊಸದಿಲ್ಲಿ: ಅಕ್ಟೋಬರ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ಆರಂಭವಾಗಬೇಕಿದೆ. ಆದರೆ ಇನ್ನೂ ವೇಳಾಪಟ್ಟಿ ಅಂತಿಮಗೊಂಡಿಲ್ಲ. ಇದಕ್ಕೆ ಕಾರಣ ಭಾರತ ವಿರುದ್ಧ ಅಹ್ಮದಾಬಾದ್‌ನಲ್ಲಿ ಆಡಲು ಪಾಕಿಸ್ಥಾನ ಹಿಂಜರಿಯುತ್ತಿರುವುದು!

Advertisement

ಭದ್ರತಾ ಕಾರಣಗಳಿಂದಾಗಿ ವಿಶ್ವದ ಬೃಹತ್‌ ಕ್ರಿಕೆಟ್‌ ಮೈದಾನದಲ್ಲಿ ಅ.15 ರಂದು ಆಡಲು ಪಾಕ್‌ ಹಿಂದೆ ಮುಂದೆ ನೋಡುತ್ತಿದೆ. ಪಾಕ್‌ನ ವಿದೇಶಾಂಗ ಸಚಿವಾಲಯ ಇನ್ನೂ ಅನುಮತಿ ನೀಡಿಲ್ಲ. ಹಾಗಾಗಿ ವೇಳಾಪಟ್ಟಿ ಅಂತಿಮ ಗೊಳಿಸುವುದು ತಡವಾಗಿದೆ. ಒಂದು ವೇಳೆ ಅಹ್ಮದಾಬಾದ್‌ನಲ್ಲಿ ಪಂದ್ಯ ನಡೆಯದಿದ್ದರೆ ಕೋಲ್ಕತಾ ಅಥವಾ ಮುಂಬಯಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ.

ಪಾಕಿಸ್ಥಾನ ತನ್ನ ಇನ್ನುಳಿದ ಪಂದ್ಯಗಳನ್ನು ಬೆಂಗಳೂರು, ಹೈದರಾಬಾದ್‌, ಚೆನ್ನೈ, ಕೋಲ್ಕತಾದಲ್ಲಿ ಆಡಲಿದೆ. ಈ ಬಗ್ಗೆ ಯೋಚಿಸಲು ಪಿಸಿಬಿಗೆ ಐಸಿಸಿ  ಸಮಯ ನೀಡಿದೆ. ಒಂದು ವೇಳೆ ಪಾಕ್‌ ಅಹ್ಮದಾಬಾದ್‌ನಲ್ಲಿ ಆಡಲು ಒಪ್ಪಿದರೆ, ತಂಡಕ್ಕೆ ಬಿಗಿಭದ್ರತೆ ನೀಡುವುದು ಐಸಿಸಿಯ ಹೊಣೆ ಆಗುತ್ತದೆ!

Advertisement

Udayavani is now on Telegram. Click here to join our channel and stay updated with the latest news.

Next