Advertisement

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

12:06 PM Oct 21, 2021 | Team Udayavani |

ಲಾಹೋರ್ : ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಿಪಕ್ಷಗಳು ಬುಧವಾರ ಗಂಭೀರ ಆರೋಪವೊಂದನ್ನು ಮಾಡಿದ್ದು, ವಿದೇಶದಿಂದ ಬಂದಿದ್ದ 1 ಮಿಲಿಯನ್ ಯುಎಸ್ ಡಾಲರ್ ನ ವಾಚ್ ಸೇರಿದಂತೆ ದುಬಾರಿ ಉಡುಗೊರೆಗಳನ್ನು ಮಾರಾಟ ಮಾಡಿರುವ ಬಗ್ಗೆ ದೂರಲಾಗಿದೆ.

Advertisement

ಪಿಎಂಎಲ್ -ಎನ್ ಉಪಾಧ್ಯಕ್ಷರಾಗಿರುವ ಮರ್ಯಾಮ್ ನವಾಜ್ ಅವರು ಇಮ್ರಾನ್ ಖಾನ್ ದುಬಾರಿ ಉಡುಗೊರೆಗಳನ್ನು ಮಾರಾಟ ಮಾಡಿರುವುದಾಗಿ ಉರ್ದುವಿನಲ್ಲಿ ಟ್ವೀಟ್ ಮಾಡಿದ್ದಾರೆ.

‘ಖಲೀಫಾ ಹಜರತ್ ಒಮರ್ (ಪ್ರವಾದಿ ಮುಹಮ್ಮದ್ ಅವರ ಒಡನಾಡಿ) ಅವರ ಅಂಗಿ ಮತ್ತು ನಿಲುವಂಗಿಗೆ ಹೊಣೆಗಾರರಾಗಿದ್ದರು ನೀವು. ಮತ್ತೊಂದೆಡೆ,ಇಮ್ರಾನ್ ಖಾನ್ ತೋಶಾಖಾನಾದಿಂದ ವಿದೇಶಿ ಉಡುಗೊರೆಗಳನ್ನು ಲೂಟಿ ಮಾಡುತ್ತಿದ್ದೀರಿ. ನೀವು ಮದೀನಾ ರಾಜ್ಯವನ್ನು ಸ್ಥಾಪಿಸುವ ಬಗ್ಗೆ ಮಾತನಾಡುತ್ತಿದ್ದೀರಾ? ಒಬ್ಬ ವ್ಯಕ್ತಿ (ಖಾನ್) ಈ ಸೂಕ್ಷ್ಮವಲ್ಲದ, ಕಿವುಡ, ಮೂಕ ಮತ್ತು ಕುರುಡನಾಗುವುದು ಹೇಗೆ?’ ಎಂದು ಪ್ರಧಾನಿ ನವಾಜ್ ಷರೀಫ್ ಅವರ ಮಗಳನ್ನು ಪ್ರಶ್ನಿಸಿದ್ದಾರೆ.

‘ದುಬಾರಿ ವಾಚನ್ನು ಇಮ್ರಾನ್ ಖಾನ್ ಮಾರಾಟ ಮಾಡಿದ್ದಾರೆ. ಇದು ನಾಚಿಕೆಗೇಡು’ ಎಂದು ವಿಪಕ್ಷದ ಮೈತ್ರಿ ಪಕ್ಷವಾದ ಪಿಡಿಎಂ ಅಧ್ಯಕ್ಷ ಮೌಲಾನಾ ಫಜ್ಲುರ್ ರೆಹಮಾನ್ ಆರೋಪಿಸಿದ್ದಾರೆ.

ಇಮ್ರಾನ್ ಖಾನ್ ಗೆ ಗಲ್ಫ್ ದೇಶದ ರಾಜಕುಮಾರ ಉಡುಗೊರೆಯಾಗಿ ನೀಡಿದ್ದ 1 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಕೈಗಡಿಯಾರವನ್ನು ದುಬೈನಲ್ಲಿ ಇಮ್ರಾನ್ ಖಾನ್ ಮಾರಾಟ ಮಾಡಿದ್ದಾರೆ ಎಂಬ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

Advertisement

ಪಿಎಂಎಲ್ -ಎನ್ ಪಂಜಾಬ್ ಅಧ್ಯಕ್ಷರಾಗಿರುವ ರಾಣಾ ಸನಾವುಲ್ಲಾ ಅವರು ಸುದ್ದಿಗೋಷ್ಠಿ ನಡೆಸಿ , ‘ಉಡುಗೊರೆಗಳನ್ನು ಮಾರಾಟ ಮಾಡಿ ಪಾಕಿಸ್ತಾನಕ್ಕೆ ನವಾಜ್ ಷರೀಫ್ ಕೆಟ್ಟ ಹೆಸರು ತರುತ್ತಿದ್ದಾರೆ’ ಎಂದು ಕಿಡಿ ಕಾರಿದ್ದಾರೆ .

ನವಾಜ್ ಷರೀಫ್ ಅವರ ರಾಜಕೀಯ ಸಂವಹನದ ವಿಶೇಷ ಸಹಾಯಕ ಡಾ. ಶಹಬಾಜ್ ಗಿಲ್ ಅವರು ಈ ಬಗ್ಗೆ ಸ್ಪಷಣೆ ನೀಡಿದ್ದು, ‘ಇತರ ರಾಷ್ಟ್ರಗಳ ಮುಖ್ಯಸ್ಥರಿಂದ ಪ್ರಧಾನಿ ಖಾನ್ ಪಡೆದಿರುವ ಉಡುಗೊರೆಗಳ ವಿವರಗಳ ಕುರಿತು ಗೌಪ್ಯತೆಯನ್ನು ಕಾಪಾಡಿಕೊಳ್ಳುಲಾಗಿದೆ. ಅದರ ಪಟ್ಟಿಗಳನ್ನು ಬಿಡುಗಡೆ ಮಾಡುವುದು ಮತ್ತು ಅವುಗಳನ್ನು ಇತರ ದೇಶಗಳ ಜೊತೆ ಹೋಲಿಸುವುದು, ವಿಶೇಷವಾಗಿ ಪಾಕಿಸ್ತಾನವು ಸಹೋದರ ಸಂಬಂಧಗಳನ್ನು ಹೊಂದಿರುವ ಇಸ್ಲಾಮಿಕ್ ದೇಶಗಳೊಂದಿಗೆ ಸೂಕ್ತವಲ್ಲ ಎಂದು ಪರಿಗಣಿಸಲಾಗುತ್ತದೆ’ ಎಂದಿದ್ದರು.

ಉಡುಗೊರೆಗಳನ್ನು ನಿಯಮಿತವಾಗಿ ದೇಶಗಳ ಮುಖ್ಯಸ್ಥರು ಅಥವಾ ವಿದೇಶ ಭೇಟಿಯ ಸಮಯದಲ್ಲಿ ಸಾಂವಿಧಾನಿಕ ಸ್ಥಾನಗಳನ್ನು ಹೊಂದಿರುವ ಅಧಿಕಾರಿಗಳ ನಡುವೆ ವಿನಿಮಯ ಮಾಡಲಾಗುತ್ತದೆ.

ಪಾಕಿಸ್ತಾನದ ಗಿಫ್ಟ್ ಡಿಪಾಸಿಟರಿ (ತೋಶಾಖಾನ) ನಿಯಮಗಳ ಪ್ರಕಾರ, ಈ ಉಡುಗೊರೆಗಳನ್ನು ಬಹಿರಂಗ ಹರಾಜಿನಲ್ಲಿ ಮಾರಾಟ ಮಾಡಬೇಕು, ಮತ್ತು ಅದು ದೇಶದ ಆಸ್ತಿಯಾಗಿ ಉಳಿಯಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next