Advertisement

Pakistan; ಈಗ ಯೋಗ ತರಬೇತಿ ಅಧಿಕೃತವಾಗಿ ಆರಂಭ

02:02 AM May 05, 2024 | Team Udayavani |

ಇಸ್ಲಾಮಾಬಾದ್‌: ಭಾರತದ ನೆರೆಯ ರಾಷ್ಟ್ರ ಪಾಕಿಸ್ಥಾನದಲ್ಲಿ ಭಾರತೀಯ ಯೋಗ ಪದ್ಧತಿಯನ್ನು ಅಧಿಕೃತವಾಗಿ ಅಳವಡಿಸಿ ಕೊಳ್ಳ ಲಾಗುತ್ತಿದೆ. ಪಾಕಿಸ್ಥಾನದ ಕ್ಯಾಪಿಟಲ್‌ ಡೆವಲಪ್‌ಮೆಂಟ್‌ ಪ್ರಾಧಿಕಾರದ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಪ್ರಕಾರ, ಇಸ್ಲಾಮಾಬಾದ್‌ನ ಎಫ್-9 ಪಾರ್ಕ್‌ನಲ್ಲಿ ಉಚಿತ ಯೋಗ ತರಗತಿಗಳ ಜಾಹೀರಾತು ನೀಡಲಾಗಿದೆ.

Advertisement

ಆರೋಗ್ಯ ಮತ್ತು ಕ್ಷೇಮಕ್ಕಾಗಿ ಅನೇಕರು ಈಗಾಗಲೇ ಈ ಉಚಿತ ಯೋಗ ತರಗತಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಿಡಿಎ ತಿಳಿಸಿದೆ. ಈಗಿರುವ ಮಾಹಿತಿಯ ಪ್ರಕಾರ, ಪಾಕಿಸ್ಥಾನದಲ್ಲಿ ಯೋಗವನ್ನು ಅಧಿಕೃತವಾಗಿ ತರಬೇತಿ ನೀಡುವುದಿಲ್ಲ. ಹಾಗಾಗಿ ಸಿಡಿಎ ಜಾಹೀರಾತು ಹೆಚ್ಚು ಗಮನ ಸೆಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next