Advertisement

ಹಫೀಜ್, ಮೋಯಿನ್ ಬ್ಯಾಟಿಂಗ್ ಮೇಲಾಟ: ಕೊನೆಯ ಎಸೆತದಲ್ಲಿ ಪಂದ್ಯ ಗೆದ್ದ ಪಾಕ್

12:00 PM Sep 02, 2020 | keerthan |

ಮ್ಯಾಂಚೆಸ್ಟರ್: ಹಿರಿಯ ಆಟಗಾರ ಮೊಹಮ್ಮದ್ ಹಫೀಜ್ ಭರ್ಜರಿ ಬ್ಯಾಟಿಂಗ್ ಮತ್ತು ಬೌಲರ್ ಗಳ ಬಿಗು ದಾಳಿಯ ಕಾರಣದಿಂದ ಪಾಕಿಸ್ಥಾನ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಸರಣಿಯನ್ನು ಸಮಬಲ ಪಡಿಸಿಕೊಂಡಿದೆ.

Advertisement

ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ ಗೆ ನೆರವಾಗಿದ್ದ ಹಫೀಜ್. 52 ಎಸೆತ ಎದುರಿಸಿದ ಹಫೀಜ್ ಆರು ಸಿಕ್ಸರ್ ನೆರವಿನಿಂದ 86 ರನ್ ಗಳಿಸಿದರು. ಮೊದಲ ಪಂದ್ಯವಾಡಿದ ಹೈದರ್ 54 ರನ್ ಗಳಿಸಿದರು. ಪಾಕ್  ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.

ಗುರಿ ಬೆನ್ನತ್ತಿದ ಆಂಗ್ಲರು ಸತತ ವಿಕೆಟ್ ಕಳೆದುಕೊಂಡರು. ಆರಂಭಿಕ ಟಾಮ್ ಬ್ಯಾಂಟನ್ 46 ರನ್ ಗಳಿಸಿದರೆ ಮಧ್ಯಮ ಕ್ರಮಾಂಕದಲ್ಲಿ ಮೋಯಿನ್ ಅಲಿ 61 ರನ್ ಗಳಿಸಿದರು. ಉಳಿದವರಿಂದ ಉತ್ತಮ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ ಎಂಟು ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಪಾಕ್ ಐದು ರನ್ ವಿಜಯಿಯಾಯಿತು.

ಮೊಹಮ್ಮದ್ ಹಫೀಜ್ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿ 1-1 ಸಮಬಲಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next